ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂದು ರಾಜ್ಯಮಟ್ಟದ ಕಾರ್ಯಾಗಾರ

Srinivasa Murthy VN
Updated On : 27 Mar 2014, 11:24 am

ಗುಲ್ಬರ್ಗ: ಸಾರಿಗೆ ಇಲಾಖೆ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಡಿ ನಗರ ಪ್ರದೇಶಗಳ ವಾಯುಮಾಲಿನ್ಯದಿಂದಾಗುವ ಪರಿಣಾಮಗಳು ಹಾಗೂ ನಿಯಂತ್ರಣ ಕುರಿತು ಮಾ.27ರ ಗುರುವಾರ ಬೆಳಗ್ಗೆ 10.30ಕ್ಕೆ  ದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾವಿದ್ಯಾಲಯ ಸಭಾಂಗಣದಲ್ಲಿ ರಾಜ್ಯಮಟ್ಟದ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಸ್ತೆ ಸುರಕ್ಷತೆ ಸಾರಿಗೆ ಆಯುಕ್ತ ಕೆ. ಅಮರನಾರಾಯಣ ಉದ್ಘಾಟನೆ ಮಾಡುವರು, ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎಸ್. ಹೆಬ್ಬಾಳ ಅಧ್ಯಕ್ಷತೆ, ಮುಖ್ಯ ಅತಿಥಿಗಳಾಗಿ ಹೈಕದ ಪರಿಸರ ಪ್ರಜ್ಞೆ ಮತ್ತು ಸಂರಕ್ಷಣಾ ಸಂಘಟನೆ ಅಧ್ಯಕ್ಷೆ ದೀಪಕ ಜಿ.ಗಾಲಾ, ಧಾರವಾಡದ ಅಪರ ಸಾರಿಗೆ ಆಯುಕ್ತ ಸಿ.ಆರ್. ಮೊಹ್ಮದ್ ಸುಲೇಮಾನ ಆಗಮಿಸುವರು.

ಇಂದಿನಿಂದ ಕ್ಯಾಂಪಸ್ ಸಂದರ್ಶನ
ಗುಲ್ಬರ್ಗ: ಇಲ್ಲಿನ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಪ್ಪಾ ಎಂಜಿನಿಯರಿಂಗ್ ಸಂಸ್ಥೆ ಅಂಗಳದಲ್ಲಿ ಮಾ.27ರಿಂದ 29ರವರೆಗೆ ಹೆಸರಾಂತ ಕಂಪನಿಗಳವರು ಎಂಜಿನಿಯರಿಂಗ್, ಎಂಬಿಎ, ಬಿಬಿಎಂ, ಬಿಕಾಂ, ಬಿಎ, ಬಿಎಸ್ಸಿ ಸೇರಿದಂತೆ ವಿವಿಧ ಪದವೀಧರರಿಗಾಗಿ ಕ್ಯಾಂಪಸ್ ಸಂದರ್ಶನ ನಡೆಸಲಿದ್ದಾರೆ. ಕಾನ್‌ಸೆನ್‌ಟೆಕ್, ಫೋನೆಕ್ಸ್ ಮಾರಿಟೈಮ್, ಇನ್‌ವೆಸ್ಕೋ, ಕಾಂಟಾರ್, ಡುಪಾಂಟ್ ಕಂಪನಿಗಳು ಬಿಇ, ಎಂಬಿಎ ಹಾಗೂ ವಿವಿಧ ಪದವೀಧರರಿಗಾಗಿ ಸತತ 4 ದಿನ ಕ್ಯಾಂಪಸ್ ಸಂದರ್ಶನ ನಡೆಸಲಿವೆ. ಅರ್ಹ ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿಗಳೊಂದಿಗೆ ನೇರವಾಗಿ ಮಾ.27ರಿಂದ 29ರವರೆಗೆ ನಡೆಯಲಿರುವ ಸಂದರ್ಶನಗಳಿಗೆ ಹಾಜರಾಗಿ ಲಾಭ ಪಡೆಯಬೇಕು ಎಂದು ಅಪ್ಪಾ ಎಂಜಿನಿಯರಿಂಗ್ ಸಂಸ್ಥೆಯ ಪ್ರಾಚಾರ್ಯ ವಿ.ಡಿ. ಮೈತ್ರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾನ್‌ಸೆನ್‌ಟೆಕ್- ಬಿಇ, ಸಿಎಸ್‌ಇ, ಐಎಸ್‌ಇ, ಮೆಕ್ಯಾನಿಕಲ್, ಸಿವಿಲ್, ಎಂಬಿಎ- ಹೈದ್ರಾಬಾದ್‌ನಲ್ಲಿ ಉದ್ಯೋಗ- ಮಾ.27 ಮತ್ತು ಮಾ.29ರಂದು ಕಂಪನಿ ಸಂದರ್ಶನ. ಫೋನೆಕ್ಸ್ ಮಾರಿಟೈಮ್- ಮಾ.28ರಂದು ಸಂದರ್ಶನ, ನಾಗಪುರದಲ್ಲಿ ಉದ್ಯೋಗಾವಕಾಶ, ಮರೀನ್ ಎಂಜಿನಿಯರ್ಸ್ ಕೆಲಸ. ಇನ್‌ವೆಸ್ಕೋ- ಮಾ.28, 29ರಂದು ಸಂದರ್ಶನ, ಹೈದ್ರಾಬಾದ್‌ನಲ್ಲಿ ಉದ್ಯೋಗಾವಕಾಶ, ಟ್ರೈನಿ ಇನ್ವೆಸ್ಟ್‌ಮೆಂಟ್ ಆಪರೇಟರ್ಸ್ ಕೆಲಸ. ಕಾಂಟರ್- ಮಾ.28, 29ರಂದು ಸಂದರ್ಶನ, ಹೈದ್ರಾಬಾದ್‌ನಲ್ಲಿ ಕೋಡಿಂಗ್ ಅನಾಲಿಸ್ಟ್ ಕೆಲಸ. ಡು ಪಾಂಟ್- ಮಾ.28 ಮತ್ತು 29ರಂದು ಸಂದರ್ಶನ, ಹೈದ್ರಾಬಾದ್‌ನಲ್ಲಿ ಅವಕಾಶ, ಪ್ರೊಕ್ಯುರ್‌ಮೆಂಟ್ ಸ್ಪೆಷಾಲಿಸ್ಟ್ ಕೆಲಸ.

ಡಾ. ಜಗಜೀವನರಾಂ ಜಯಂತ್ಯುತ್ಸವ ಸಭೆ
ಶಹಾಬಾದ್: ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನರಾಂ 107ನೇ ಜಯಂತ್ಯುತ್ಸವ ಸಭೆಯನ್ನು ನಾಮದೇವ ಸಿಪ್ಪಿ, ಜಿಲ್ಲಾಧ್ಯಕ್ಷರು ಮಾದಿಗ ಹೋರಾಟ ಸಮಿತಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಗೆ ಅತಿಥಿಯಾಗಿ ಮಲ್ಲಿಕಾರ್ಜುನ ಚಟ್ನಳ್ಳಿ, ರಾಮಸ್ವಾಮಿ ಗಿರಿಗಿರಿಕರ್, ರವಿ ಬೆಳಮಗಿ ಪಾಲ್ಗೊಂಡಿದರು. ಕಿರಣ ಕೋರೆ, ಸಂಜಯ ಕೋರೆ, ರೇವಣಸಿದ್ದಪ್ಪಾ ಹೊನಗುಂಟಿಕರ್, ರಾಜು ಜಿನಕೇರಿ, ನಾರಾಯಣ ಕಂದಕೂರ ಇತರರು ಇದ್ದರು.
ಜಯಂತ್ಯುತ್ಸವ ಪದಾಧಿಕಾರಗಳು: ಮಲ್ಲಿಕಾರ್ಜುನ ಚಟ್ನಳ್ಳಿ ಗೌರವ (ಅಧ್ಯಕ), ಶಿವಶರಣಪ್ಪ ಪಗಲಾಪುರ(ಅಧ್ಯಕ್ಷ), ರವಿ ಬೆಳಮಗಿ(ಕಾರ್ಯಾಧ್ಯಕ್ಷ), ನಾಗರಾಜ ಮುದ್ನಾಳ್, ಪರಶುರಾಮ ನಗನೂರ, ಸಂತೋಷ ಹುಲಿ, ಶರಣಪ್ಪಾ ಶಾಖಾಪುರ(ಉಪಾಧ್ಯಕ್ಷರು), ಶಿವಶರಣಪ್ಪ ಕರಣಗಿ (ಪ್ರಧಾನ ಕಾರ್ಯದರ್ಶಿ), ರಮೇಶ ಕಮಾನೆ, ಅಮರ ಕೋರೆ, ಶರಣು ಜಾಲಹಳ್ಳಿ (ಸಹ ಕಾರ್ಯದರ್ಶಿ), ರಾಜಕಪುರ ಸಲದಾರ(ಖಜಾಂಚಿ), ಶ್ರೀಧರ ಕೋಲ್ಲೂರ(ಉಪ ಖಜಾಂಚಿ), ರಾಮಸ್ವಾಮಿ ಗಿರಿಗಿರಿಕರ, ಶಿವಯೋಗಿ ಕಾಂಬಳೆ, ಉಮೇಶ ಪೋಚ್ಚಟ್ಟಿ (ಸಲಹೆಗಾರರು)ರಾಗಿ ಆಯ್ಕೆಯಾದರು.

ಗುರುವಿಗೆ ಗೌರವ ಕೊಡಿ: ಡಾ. ಶಹಾ
ಆಳಂದ: ವಿದ್ಯಾರ್ಥಿಗಳಾದವರು ಗುರಿ ಸಾಧನೆಗಾಗಿ ವಿದ್ಯೆ ಕಲಿಸುವ ಗುರುವಿಗೆ ಗೌರವ ಕೊಡುವ ಮೂಲಕ ಮಾದರಿಯಾಗಬೇಕೆಂದು ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ. ಆಶಯ ಶಹಾ ಮಾತನಾಡಿದರು. ಪಟ್ಟಣದ ದಿಗಂಬರ್ ಜೈನ್ ಪ್ರೌಢಶಾಲೆಯ 10ನೇ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಖಾರವಾಗಿ ಹೇಳಿದ ಗುರುವಿನ ಮಾರ್ಗದರ್ಶನ ಪಾಲಿಸಿದರೆ ಜೀವನದ ಯಶಸ್ವಿಗೆ ದಾರಿಯಾಗುತ್ತದೆ. ಕಲಿಕೆಯಲ್ಲಿ ಯಾವುದೇ ಒತ್ತಡ ಇಲ್ಲದೆ ಮಾರ್ಗವನ್ನು ಆಯ್ಕೆಮಾಡಿಕೊಂಡರೆ ಸರಳವಾಗುತ್ತದೆ ಎಂದು ಸಲಹೆ ನೀಡಿದರು.  ಹಿರಿಯ ವೈದ್ಯ ಡಾ. ಪಿ.ಎನ್.ಶಹಾ ಮತ್ತು ಅಧ್ಯಕ್ಷತೆ ವಹಿಸಿದ್ದರು. ಶಾಲೆ ಮುಖ್ಯ ಶಿಕ್ಷಕ ಗುರಯ್ಯಾ ಸ್ವಾಮಿ, ವಿಜಯಕ ಕಟಕೆ, ಮಹಾನಂದ ರಾಚೋಟಿ, ರಾಹುಲ ಜಾವಳೆ, ವೈಶಾಲಿ ಹಿಪ್ಪರಗಿ ಮಾತನಾಡಿದರು. ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಧನಂಜಯ ಡೊಲೆ, ಕೆ. ಮೊಮಿನ್, ಸುರೇಖಾ ಸ್ವಾಮಿ, ಶಿವಾನಂದ ಹೊಸಗೌಡ ಉಪಸ್ಥಿತರಿದ್ದರು. ವಿದ್ಯಾರ್ಥಿ ಸುಧಾಕರ ಸಂಗಡಿಗರು ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಪ್ರಭಾಕರ ಸಲಗರೆ ವಂದಿಸಿದರು.

ಇಂದಿನಿಂದ ಮೂರು ದಿನಗಳ ರಂಗೋತ್ಸವ
ಗುಲ್ಬರ್ಗ: ವಿಶ್ವ ರಂಗಭೂಮಿ ದಿನಾಚರಣೆ ಹಿನ್ನೆಲೆಯಲ್ಲಿ ಮಾ. 27 ರಿಂದ 29ರವರೆಗೆ ಮೂರು ದಿನಗಳ ರಂಗೋತ್ಸವವನ್ನು ಕನ್ನಡ ಭವನ ಆವರಣದಲ್ಲಿರುವ ಬಾಪುಗೌಡ ದರ್ಶನಾಪುರ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸಂಭ್ರಮ ಕಲಾ ಕುಟೀರ, ಗುಲ್ಬರ್ಗ ವಿಶ್ವವಿದ್ಯಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ನಿಮಿತ್ತ ಮೂರು ನಾಟಕಗಳ ಪ್ರದರ್ಶನ ಏರ್ಪಡಿಸಲಾಗಿದೆ. ಮಾ.27ರಂದು ಸಂಜೆ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಶೇಖ್‌ಮಾಸ್ಟರ್ ಉದ್ಘಾಟಿಸುವರು. ಗುಲ್ಬರ್ಗ ವಿವಿ ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ಅತಿಥಿಗಳಾಗಿರುವರು. ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರು ಅಧ್ಯಕ್ಷತೆ ವಹಿಸುವರು. ರಂಗಭೂಮಿ ಚಿಂತಕ ಗವೀಶ ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಜಗದೀಶ್ವರಿ ಶಿವಕೇರಿ, ಮಾಜಿ ಸಿಂಡಿಕೇಟ್ ಸದಸ್ಯ ಸುಭಾಷ್ ರಾಠೋಡ, ಕಾಯಕ ಫೌಂಡೇಷನ್ ಸಂಸ್ಥಾಪಕ ಶಿವರಾಜ ಪಾಟೀಲ, ಕರ್ನಾಟಕ ಕುರುಬರ ಸಂಘದ ಕಾರ್ಯದರ್ಶಿಎಸ್.ಎಸ್.ಪೂಜಾರಿ, ಉದ್ಯಮಿ ಬಸವರಾಜ ಮತ್ತಿಮೂಡ ಅತಿಥಿಗಳಾಗಿರುವರು. ನಂತರ ಮೊದಲ ನಾಟಕ ರಾಮಧ್ಯಾನ ಪ್ರದರ್ಶನಗೊಳ್ಳಲಿದೆ.

ಕರ್ನಾಟಕ ಚೇತನ ಪ್ರಶಸ್ತಿ ಪ್ರದಾನ
ಶಹಾಪುರ: ಸಗರದ ಎಸ್‌ಆರ್‌ಐ ಶಿಕ್ಷಣ ಸಂಸ್ಥೆಯ ಕಾವೇರಿ ವಿದ್ಯಾ ಮಂದಿರದ 7ನೇ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಕರ್ನಾಟಕ ಚೇತನ ಪ್ರಶಸ್ತಿ ಪ್ರದಾನ ಸಮಾರಂಭ ಮಾ.29 ರಂದು ಮೌನೇಶ್ವರ ಕಲ್ಯಾಣ ಮಂಟಪದ ಲ್ಲಿ ನಡೆಯಲಿದೆ.  ವಿಶ್ವಕರ್ಮ ಏಕದಂಡಿಗಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಗರ ಮಾಜಿ ಜಿಪಂ. ಸದಸ್ಯ ಬಸನಗೌಡ ಮಾಲಿ ಪಾಟೀಲ ಉದ್ಘಾಟನೆ ಮಾಡುವರು. ವಿದ್ಯಾಮಂದಿರದ ಅಧ್ಯಕ್ಷರಾದ ಡಾ. ದೇವಿಂದ್ರಪ್ಪ ಹಡಪದ ಸಗರ ಅಧ್ಯಕ್ಷತೆ ವಹಿಸುವರು. ಪ್ರಮುಖರಾದ ಲಿಂಗಣ್ಣ ಪಡಶೆಟ್ಟಿ, ಶೇಖರಪ್ಪ ಅರಿಕೇರಿ, ಶಿವುಲಿಂಗಣ್ಣಗೌಡ ಸಗರ, ಉಪನ್ಯಾಸಕ ಡಾ.ಅಬ್ದುಲ್ ಕರೀಂ, ನರಸಿಂಹ.ಕೆ.ವೈದ್ಯ, ಡಾ.ಮೊನಪ್ಪ ಶಿರವಾಳ, ಮಹಾಂತಗೌಡ ಸುಬೇದಾರ, ಚನ್ನಪ್ಪ ಮಳ್ಳಿ, ಈರಣ್ಣ ಹತ್ತಿಗುಡೂರ, ಪಾಲ್ಗೊಳ್ಳಲಿದ್ದಾರೆ. ವಿದ್ಯಾ ಮಂದಿರದ ವಿದ್ಯಾರ್ಥಿಗಳಿಂದ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಇದೇ ಸಂದರ್ಭದಲ್ಲಿ 17 ಜನ ಸಾಧಕರಿಗೆ ಸಂಸ್ಥೆ ವತಿಯಿಂದ 'ಕರ್ನಾಟಕ ಚೇತನ' ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಪದಾಧಿಕಾರಿಗಳು
ಶಹಾಪುರ: ಕನ್ನಡ ಸೇನೆ ಸಂಘಟನೆಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ದಶರಥ ಮುಂಡರಿಗಿ(ಯಾದಗಿರಿ ತಾಲೂಕಾ ಅಧ್ಯಕ್ಷ), ವಿಶ್ವನಾಥರಡ್ಡಿ ಅಬ್ಬೆತುಮಕೂರ(ಸಂಘಟನಾ ಕಾರ್ಯದರ್ಶಿ), ಆನಂದ ಬಡಿಗೇರ(ನಗರ ಅಧ್ಯಕ್ಷ). ಜಿಲ್ಲಾಧ್ಯಕ್ಷರಾದ ರಾಜುಕುಂಬಾರ, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ನಗನೂರ, ಸಂಚಾಲಕ ಸಿದ್ಲಿಂಗರಡ್ಡಿ ಹಣಮಂತ ಸಗರ, ಅಂಬರೇಶಗೌಡ ಸಗರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement