ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಏಡ್ಸ್ ತಡೆಗೆ ಮುಂಜಾಗ್ರತೆ ಅಗತ್ಯ

Srinivasa Murthy VN
Updated On : 28 Mar 2014, 11:38 am

ಕನ್ನಡಪ್ರಭ ವಾರ್ತೆ ಯಾದಗಿರಿ ಮಾ.25
ಸುರಪುರ: ಯಾವುದೇ ರೋಗಗಳು ಬಂದನಂತರ ಗುಣಪಡಿಸುವುದಕ್ಕಿಂತ,  ಮೊದಲು ಅದು ಬಾರದೆ ಹಾಗೆ ಮುಂಜಾಗ್ರತೆ  ವಹಿಸುವುದು ಉತ್ತಮ ಎಂದು ಉಪನ್ಯಾಸಕ ಲಕ್ಷ್ಮಣ ಕುಲಕರ್ಣಿ ಹೇಳಿದ್ದಾರೆ.
  ತಾಲೂಕಿನ ಶ್ರೀಪ್ರಭು ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆಂಷನ್ ಸೊಸೈಟಿಯ ಸಹಭಾಗಿತ್ವದಲ್ಲಿ ನಡೆದ  ಏಡ್ಸ್  ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಏಡ್ಸ್ ರೋಗವು ಅಸುರಕ್ಷಿತ ಕ್ರಮಗಳಿಂದ ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದ್ದು, ಮನುಷ್ಯನಿಗೆ ಅದು ಬಾರದಂತೆ ಎಚ್ಚರ ವಹಿಸುವುದೇ ಹೆಚ್ಚು ಸೂಕ್ತ. ್ಸ್ರ್ಡ್ಸ  ಏಡ್ಸ್ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
  ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ ಜೋಶಿ ಮಾನತಾಡಿ, ಏಡ್ಸ್ ರೋಗಿಯನ್ನು ಪ್ರತ್ಯಕವಾಗಿ ನೋಡಬೇಕಾಗಿಲ್ಲ. ಇದರ ನಿಯಂತ್ರಣಕ್ಕೆ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಇಂದು ಕರ್ನಾಟಕದಲ್ಲಿ ಪ್ರತಿಶತ 1.5ರಷ್ಟು ಏಡ್ಸ್ ರೋಗಿಗಳಿದ್ದಾರೆ. ಎಚ್ಐವಿ ಕುರಿತ ತಿಳಿವಳಿಕೆ ಕೊರತೆಯಿಂದ ಸೋಂಕು ಅಂಟಿಸಿಕೊಂಡು ರೋಗಿಗಳು ಪ್ರಾಣಾಪಾಯದ ಹಂತ ತಲುಪುತ್ತಿದ್ದಾರೆ. ಆದ್ದರಿಂದ ಮುಂಜಾಗ್ರತೆ ಚಿಕಿತ್ಸೆ ಪಡೆಯುವ ಮೂಲಕ ರೋಗ ನಿಯಂತ್ರಣ ಮಾಡಬಹುದು. ಎಚ್ಐವಿ ಪೀಡಿತರು ಚಿಕಿತ್ಸೆಗೆ ಮುಂದಾಗಲು ಸಂಕೋಚ ಪಡುತ್ತಿದ್ದಾರೆ. ಇದರಿಂದ ಈ ಸೋಂಕು ಇತರರಿಗೆ ಹರಡುವ ಸಾಧ್ಯತೆಯಿದೆ. ಎಚ್ಐವಿ ಪೀಡಿತರು ಸಂಕೋಚ ಮನೋಭಾವವನ್ನು ತೊರೆದು ಚಿಕಿತ್ಸೆ ಪಡೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement