ಖಾತ್ರಿ ಕೂಲಿ ಪಾವತಿಗೆ ಒತ್ತಾಯ
ಚಿತ್ತಾಪುರ:ತಾಲೂಕಿನಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಮಾಡಿದ ಕೂಲಿಕಾರರಿಗೆ ವರ್ಷಗಳು ಕಳೆದರೂ ವೇತನ ಬಿಡುಗಡೆ ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಗ್ರಾಪಂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಕೂಲಿಕಾರರಿಗೆ ವೇತನ ಬಿಡುಗಡೆ ಮಾಡಬೇಕೆಂದು ಕರ್ನಾಟಕ ಪ್ರಾಂತ ಕಣಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಮ್ಯಾಗೇರಿ ಒತ್ತಾಯಿಸಿದರು.
ತಾಪಂ ಅವರಣದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಿ ತಾಪಂ ಇಓಗೆ ನೀಡಿದ ಮನವಿ ಪತ್ರದಲ್ಲಿ ತಾಲೂಕಿನ ಭಂಕೂರ, ಪೇಠಶಿರೂರ, ಗೋಟೂರ, ಚಿಂಚೋಳಿ(ಎಚ್), ಕಾಳಗಿ, ಕೋಡದೂರ ಸೇರಿದಂತೆ ವಿವಿಧ ಗ್ರಾಪಂಗಳಲ್ಲಿ ಖಾತ್ರಿ ಕಾಮಗಾರಿಗಳಲ್ಲಿ ಬದು ನಿರ್ಮಾಣ, ಜಂಗಲ್ ಕಟಿಂಗ್, ಸೇರಿದಂತೆ ಹಲವು ಕಾಮಗಾರಿಗಳಲ್ಲಿ ಕೆಲಸ ಮಾಡಿರುವ ಕೂಲಿಕಾರರ ಹಣವನ್ನು 15 ದಿನಗಳಲ್ಲಿ ಪಾವತಿಸಬೇಕೆಂದು ಅದೇಶ ಇದ್ದರೂ ಕೂಲಿಕಾರರಿಗೆ ಹಣ ಪಾವತಿಸದೇ ಸತಾಯಿಸುತ್ತಿದ್ದಾರೆ. ಇದರಿಂದ ಕೂಲಿಕಾರರು ತೊಂದರೆ ಅನುಭವಿಸುವಂತಾಗಿದೆ ಎಂದು ಅವರು ರೋಪಿಸಿದರು.
ಮಾ.14ರ ಜಿಪಂ ಸಿಇಓ ರವರ ಅದೇಶದಂತೆ ಕೋಡದೂರ ಸೇರಿದಂತೆ ಮೇಲೆ ಹೆಸರಿಸಿದ ಎಲ್ಲ ಗ್ರಾಪಂ ಕೂಲಿಕಾರರಿಗೆ ನಿರುದ್ಯೋಗ ಭತ್ಯೆ ಪಾವತಿಸಬೇಕು ಎಂದು ಆಗ್ರಹಿಸಿದ್ದಾರೆ.
ಎಐಎಡಬ್ಲೂಯು ತಾಲೂಕು ಅಧ್ಯಕ್ಷ ಅಶೋಕ ಕಲಶೆಟ್ಟಿ, ಸಾಯಬಣ್ಣಾ ಮುಗಳನಾಗಾಂವ, ರೇವಯ್ಯ ಸ್ವಾಮಿ, ಬಸವರಾಜ ಗುಂಡನೋರ, ಬಾಬು ಕುಂಬಾರ, ಶಂಕರ ರಾಠೋಡ, ದೇವಿಬಾಯಿ ಪವಾರ, ಶಿವಶರಣ, ನಾಗಣ್ಣಾ ಬಡಿಗೇರ ಸೇರಿದಂತೆ ಇತರರು ಇದ್ದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಗುಲ್ಬರ್ಗ: ಇತ್ತೀಚೆಗೆ ಸ್ಫೂರ್ತಿ ಮಹಿಳಾ ಮಂಡಳಿವತಿಯಡಿ ಮಹಾವೀರ ನಗರ ಬಡಾವಣೆಯ ಮಹಿಳೆಯರು ಸೇರಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಿದರು. ಅದರ ಪ್ರಯುಕ್ತ ಆಹಾರ ತಜ್ಞೆ ಡಾ.ಶೀಲಾ ಸಿದ್ದರಾಮ ನೇತೃತ್ವದಲ್ಲಿ ಆಹಾರ, ವಿಜ್ಞಾನ ಜಾಗೃತಿ ಶಿಬಿರ ಜರುಗಿತು. ಅಧ್ಯಕ್ಷರಾದ ವೈಜಯಂತಿಮಾಲಾ ಚಿತಾನಂದ, ಕಾರ್ಯರ್ಶಿ ಗೀತಾ ಕುಲಕರ್ಣಿ ಸೇರಿದಂತೆ ಮಂಡಳದ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗಿಯಾಗಿದ್ದರು.