ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಯೋಜನೆಗಳಿಗೆ ಪ್ರಶಂಸೆಯ ಸುರಿಮಳೆ: ಖರ್ಗೆ

Srinivasa Murthy VN
Updated On : 28 Mar 2014, 11:36 am

ಗುರುಮಠಕಲ್: ಕೇಂದ್ರ ಕಾರ್ಮಿಕ ಸಚಿವನಾಗಿ ದೇಶದಲ್ಲಿನ ಅಸಂಘಟಿತ ಕಾರ್ಮಿಕರ ಅಭಿವೃದ್ಧಿಗಾಗಿ 11 ಕಾನೂನುಗಳಿಗೆ ತಿದ್ದುಪಡಿ ತಂದು ಎರಡೂವರೆ ವರ್ಷಗಳಲ್ಲಿ 2,500 ಕೋಟಿ ವೆಚ್ಚದಲ್ಲಿ 3.70 ಕೋಟಿ ಬಡ ಕಾರ್ಮಿಕರು ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಈ ಬಗ್ಗೆ ವಿಶ್ವದ ಆನೇಕ ದೇಶಗಳು ಪ್ರಶಂಸೆ ವ್ಯಕ್ತಪಡಿಸಿವೆ ಎಂದು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಅವರು ಗುರುವಾರ ಗುಲ್ಬರ್ಗ ಲೋಕಸಭಾ ಕ್ಷೇತ್ರದ ಗುರುಮಠಕಲ್, ಗಾಜರಕೋಟ್, ಪುಟಪಾಕ ಮತ್ತು ಕಂದಕೂರ ಗ್ರಾಮಗಳಲ್ಲಿ ಚುನಾವಣೆ ಸಭೆಯಲ್ಲಿ ಮತಯಾಚಿಸಿ ಮಾತನಾಡಿದರು.
ಗುಲ್ಬರ್ಗದಲ್ಲಿ ಕೆಲಸ ಮಾಡುವುದು ನಾನೇ: ಇಲ್ಲಿ ಮೋದಿ ಅಲೆ ಇಲ್ಲ. ಅದು ಕೆಲಸವೂ ಮಾಡಲ್ಲ, ಗುಲ್ಬರ್ಗದಲ್ಲಿ ಕೆಲಸ ಮಾಡುವುದು ನಾನೇ ಹೊರತು ಇಲ್ಲಿಗೆ ಬಂದು ಅವರು ಕೆಲಸ ಮಾಡಲು ಸಾಧ್ಯವಿಲ್ಲ ಎಂದರು.
ಖರ್ಗೆ ವ್ಯಕ್ತಿಯಲ್ಲ, ಅಭಿವೃದ್ಧಿಯ ಶಕ್ತಿ: ಸಚಿವ ಬಾಬುರಾವ ಚಿಂಚನಸೂರ ಮಾತನಾಡಿ, ಖರ್ಗೆಯವರು ಸಂಸತ್ತಿನಲ್ಲಿ ಇರದಿದ ಪಕ್ಶದಲ್ಲಿ ನೂರು ಜನ್ಮ ಕಳೆದರೂ ಹೆ-ಕ ಭಾಗಕ್ಕೆ 371 ಜೆ ಕಲಂ ಜಾರಿಯಾಗುತ್ತಿರಲಿಲ್ಲ. ಇದು ಐತಿಹಾಸಿಕ ಸಾಧನೆ ಎಂದರು. ಬಿಜೆಪಿ ಎರಡು ಹೋಳಾಗಿ ಪರಸ್ಪರ ಒಬ್ಬರನ್ನೊಬ್ಬರು ಸೋಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದ ಅವರು ಖರ್ಗೆ ವ್ಯಕ್ತಿಯಲ್ಲ. ಅಭಿವೃದ್ಧಿಯ ಶಕ್ತಿ. ಹಾಗಾಗಿ ಖರ್ಗೆ ಅವರನ್ನು ಅತ್ಯಂತ ಪ್ರಚಂಡ ಬಹುಮತದಿಂದ ಆರಿಸಿ ತರುವಂತೆ ಮನವಿ ಮಾಡಿದರು. ಗುಲ್ಬರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭಾಗಣ್ಣಗೌಡ ಪಾಟೀಲ, ಯಾದಗಿರಿ ಜಿ.ಕಾಂ.ಅಧ್ಯಕ್ಷ ಮರಿಗೌಡ ಹುಲಕಲ್, ಮಾಜಿ ವಿಧಾನಪರಿಷತ್ ಸದಸ್ಯ ಚನ್ನಾರೆಡ್ಡಿ ಪಾಟೀಲ ತುನ್ನೂರ, ಮಾಜಿ ಸಂಸದ ಇಕ್ಬಾಲ ಅಹ್ಮದ ಸರಡಗಿ, ಮಾಜಿ ಪ.ಪಂ ಅಧ್ಯಕ್ಷ ಭೀಮರೆಡ್ಡಿ ಉಟ್ಕೂರ, ತಾಪಂ. ಅಧ್ಯಕ್ಷೆ ಶೋಭಾ ರಾಣಿ, ಜಿಪಂ. ಮಾಜಿ ಉಪಾಧ್ಯಕ್ಷ ಶರಣಿಕ ಕುಮಾರ ಧೋಖಾ, ಬ್ಲಾಕ್ ಅಧ್ಯಕ್ಷ ಮಹಿಪಾಲರೆಡ್ಡಿ ಹತ್ತಿಕುಣಿ, ಜಿ.ಪಂ. ಅಧ್ಯಕ್ಷೆ ಭೀಮಮ್ಮ ಚಪೆಟ್ಲಾ ಇತರರಿದ್ದರು.

ಚುನಾವಣೆ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ
ಗುಲ್ಬರ್ಗ: ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ಆಳಂದ ತಾಲೂಕಿನ ಬೆಣ್ಣೆಶಿರೂರ ಗ್ರಾಮಸ್ಥರು ನಿರ್ಧಾರಿಸಿದ್ದಾರೆ. ಆಳಂದ ತಾಲೂಕಿನ ಕೊಗ್ರಾಮವಾದ ಬೆಣ್ಣೆಶಿರೂರ ಗ್ರಾಮಕ್ಕೆ ಮೂಲ ಸೌಕರ್ಯ ಇದುವರೆಗೆ ದೊರೆತ್ತಿಲ್ಲ. ಗ್ರಾಮಕ್ಕೆ ಬಸ್ ಸೌಕರ್ಯವಿಲ್ಲ, ಗ್ರಾಮದಲ್ಲಿ ಸಿಸಿ ರಸ್ತೆ, ಗ್ರಾಮದಿಂದ ಅಂಕಲಗಿ ಮಡಿಯಾಳ ಹಾಗೂ ಕುಲಾಲಿ ರೇಲ್ವೆ ಸ್ಟೇಷನ್ಗೆ ರಸ್ತೆ ನಿರ್ಮಾಣ ಮಾಡಿಲ್ಲ. ಇದರಿಂದಾಗಿ ತಾಲೂಕ ಕೇಂದ್ರಕ್ಕೆ ಹಾಗೂ ಜಿಲ್ಲಾ ಕೇಂದ್ರಕ್ಕೆ ಗ್ರಾಮಸ್ಥರು ಹೋಗಬೇಕಾದರೆ ಮೈಲಿಗಟ್ಟಲೇ ನಡೆವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ರುದ್ರಭೂಮಿ ಇಲ್ಲದಿರುವುದು ಗ್ರಾಮಸ್ಥರ ದುರಾದೃಷ್ಟ. ಮಹಿಳೆಯರಿಗಾಗಿ ಶೌಚಾಲಯವಿಲ್ಲದೆ ಪರದಾಡುವ ಪರಿಸ್ಥಿತಿ ಗ್ರಾಮದಲ್ಲಿದೆ.
ಕುಡಿವ ನೀರಿನ ಕೊರತೆಯಿದ್ದು, ಬೇಸಿಗೆ ಬಂದರೆ ಎಲ್ಲಾ ಕೆಲಸಗಳನ್ನು ಬಿಟ್ಟು ದೂರದಿಂದ ನೀರು ತರುವ  ಪರಿಸ್ಥಿತಿ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement