ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೊಡಗು

ಚೂರಿಯಿಂದ ಇರಿದು ಪರಾರಿಯಾದ ವ್ಯಕ್ತಿಗೆ ಜೀಪು ಡಿಕ್ಕಿಯಾಗಿ ಸಾವು

Parashurama
Updated On : 10 Feb 2013, 12:30 pm

ಮಡಿಕೇರಿ: ಸೋದರ ಸಂಬಂಧಿಗೆ ಚೂರಿಯಿಂದ ಇರಿದು ಪರಾರಿಯಾಗಲು ಯತ್ನಿಸಿದ ಸಂದರ್ಭ ವ್ಯಕ್ತಿಯೊಬ್ಬ ಜೀಪಿಗೆ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದಲ್ಲಿ ಶನಿವಾರ ಸಂಭವಿಸಿದೆ. ಚನ್ನಪ್ಪಂಡ ಶರಣು (29) ಮೃತರು.
ಆಸ್ತಿ ವಿವಾದ ಹಿನ್ನಲೆಯಲ್ಲಿ ಚನ್ನಪ್ಪಂಡ ಶರಣು ತನ್ನ ಸಹೋದರ ಸಂಬಂಧಿ ಪುಷ್ಪಾ ಪೂಣಚ್ಚ ಅವರೊಂದಿಗೆ ಮಡಿಕೇರಿಯ ಬಾರ್ ಒಂದರಲ್ಲಿ ಮಾತುಕತೆ ನಡೆಸುತ್ತಿದ್ದ ಸಂದರ್ಭ ಆಸ್ತಿ ವಿವಾದ ಭುಗಿಲೆದ್ದು, ಶರಣು ತನ್ನೊಂದಿಗಿದ್ದ ಚೂರಿಯಿಂದ ಪುಷ್ಪಾ ಪೂಣಚ್ಚ ಹೊಟ್ಟೆ ಹಾಗೂ ಎಡಗೈಗೆ ಬಲವಾಗಿ ತಿವಿದರು. ಈ ಸಂದರ್ಭ ತೀವ್ರ ರಕ್ತಸ್ರಾವಗೊಂಡ ಪೂಣಚ್ಚ ಮಡಿಕೇರಿ ಪೊಲೀಸರಿಗೆ ಮೊಬೈಲ್‌ನಲ್ಲಿ ಮಾಹಿತಿ ನೀಡತೊಡಗಿದರು.
ಈ ಸಂದರ್ಭ ಗಾಬರಿಗೊಂಡ ಶರಣು ತನ್ನ ಬೈಕ್‌ನಲ್ಲಿ ಪರಾರಿಯಾಗಲು ವೇಗವಾಗಿ ತೆರಳಿದಾಗ ಬಾರ್ ಪಕ್ಕದ ತಿರುವಿನಲ್ಲಿ ಎದುರು ಭಾಗದಿಂದ ಬಂದ ಇಬ್ಬನಿ ವಳವಾಡಿ ಗ್ರಾಮದ ಕಾರ್ಯಪ್ಪ ಅವರ ಜೀಪಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದರು.
ಮಡಿಕೇರಿ ನಗರ ಬ್ಲಾಕ್ ಕಾಂಗ್ರೆಸ್‌ನ ಉಪಾಧ್ಯಕ್ಷರೂ ಆಗಿರುವ ಪ್ರಕರಣದ ಗಾಯಾಳು ಪುಷ್ಪಾ ಪೂಣಚ್ಚ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿಕೊಂಡು ನಗರ ಪೊಲೀಸರು ದೂರು ದಾಖಲಿಸಿದ್ದು ತನಿಖೆ ಮುಂದುವರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments