ಪ್ರತಿಭಾ ಪರೀಕ್ಷೆ: ನತಾಶ ಪ್ರಥಮ
ಸಿದ್ದಾಪುರ: ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಪ್ರತಿಭಾ ಪರೀಕ್ಷೆಯಲ್ಲಿ ಸ್ಥಳೀಯ ಇಕ್ರಾ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ನದಿರ ನತಾಶ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾಳೆ. ಚಿತ್ರದುರ್ಗದ ಅಂತಾರಾಷ್ಟ್ರೀಯ ಚಿಂತನ ಗಣಿತ 2012ನೇ ಪರಿಕ್ಷೆಯಲ್ಲಿ ಭಾಗವಹಿಸಿದ ಇಕ್ರಾ ಶಾಲೆಯ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಇದರಲ್ಲಿ ಎಸ್.ಎಸ್. ಜಫ್ರಿಯಾ, ಟಿ.ಕೆ. ಸುಮಯ್ಯ, ಎಂ.ಕೆ. ಆಶಿಫ್, ಪಿ.ವಿ. ಅಜ್ಮಲ್ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಕೆ.ಆರ್. ಆದಿರ, ಮುಹಮ್ಮದ್ ಶಾಫಿ, ಫಸೀಲ, ಶಫೀಕ್ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಇದರೊಂದಿಗೆ ರಾಜ್ಯ ಮಟ್ಟದಲ್ಲಿ ಉತ್ತಮ ಶಾಲಾ ಶಿಕ್ಷಕಿ ಹಾಗೂ ಉತ್ತಮ ಪರೀಕ್ಷಾ ಸಂಘಟಕಿ ಪ್ರಶಸ್ತಿಯನ್ನು ಇಕ್ರಾ ಶಾಲಾ ಶಿಕ್ಷಕಿ ಟಿ.ಪಿ. ಸೌಮ್ಯ ಪಡೆದುಕೊಂಡಿದ್ದಾರೆ. ಮುಖ್ಯಶಿಕ್ಷಕ ಸಿ.ಪಿ. ಜಾನ್, ಶಿಕ್ಷಕಿ ಸೌಮ್ಯ ಇದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.