ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೊಡಗು

ಕೊಡಗು, ಕೇರಳ ಗಡಿ ಭಾಗದಲ್ಲಿ ಕೂಬಿಂಗ್: ನಕ್ಸಲ್ ನಿಗ್ರಹ ಪಡೆ ಐಜಿಪಿ

Parashurama
Updated On : 15 Feb 2013, 1:20 am

ಮಡಿಕೇರಿ: ಕೊಡಗು ಮತ್ತು ಕೇರಳ ಗಡಿ ಭಾಗದಲ್ಲಿ ನಕ್ಸಲ್‌ರ ಚಲನವಲನ ಇದೆ ಎಂಬುದು ಸದ್ಯಕ್ಕೆ ಕೇವಲ ವದಂತಿ. ಆದರೂ, ವದಂತಿ ಹಿನ್ನೆಲೆಯಲ್ಲಿಯೂ ಕಳೆದ ಮೂರು ದಿನದಿಂದ ಈ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಕೂಬಿಂಗ್ ನಡೆಸಲಾಗುತ್ತಿದೆ ಎಂದು ನಕ್ಸಲ್ ನಿಗ್ರಹ ಪಡೆ ಐಜಿ ಅಲೋಕ್ ಕುಮಾರ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳ ರಾಜ್ಯದ ಪೊಲೀಸರು ಕೂಡ ಕೊಡಗು- ಕೇರಳ  ಗಡಿಯಲ್ಲಿ ನಕ್ಸಲ್ ಚಟುವಟಿಕೆ ಕಂಡು ಬಂದಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಕಾರ್ಯಾಚರಣೆ ಆರಂಭಿಸಿದ್ದೇವೆ ಎಂದರು. ಕೊಡಗಿನಲ್ಲಿ ನಕ್ಸಲರು ಇದ್ದಾರೆ ಎಂಬುದು ಸದ್ಯಕ್ಕೆ ಖಚಿತಗೊಂಡಿಲ್ಲ. ಈ ವದಂತಿಯನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಅಗತ್ಯ ಬಿದ್ದರೆ ಮಂಗಳೂರು ಕಡೆಗೂ ಕೂಂಬಿಂಗ್ ಕಾರ್ಯಾಚರಣೆ ವಿಸ್ತರಿಸಲಾಗುತ್ತದೆ ಎಂದು ತಿಳಿಸಿದರು.
  ಈ ಮೊದಲು ನಕ್ಸಲ್ ನಿಗ್ರಹ ಕಾರ್ಯಪಡೆಯು ಬೆಳಗ್ಗೆ ಕಾಡಿಗೆ ಹೋಗಿ ಕೂಂಬಿಂಗ್ ನಡೆಸಿ ವಾಪಾಸ್ಸಾಗುತ್ತಿತ್ತು. ಇದರಿಂದಾಗಿ ನಕ್ಸಲರು ರಾತ್ರಿ ತಮ್ಮ ಚಟುವಟಿಕೆ ನಡೆಸುತ್ತಿದ್ದರು. ಈಗ ಕಾರ್ಯಪಡೆಯು ಕಾಡಿನಲ್ಲೇ ಉಳಿದು ನಕ್ಸಲ್ ಚಲನವಲನದ ಮೇಲೆ ನಿಗಾ ಇಡುತ್ತಿದ್ದೇವೆ ಎಂದು ಅಲೋಕ್ ಕುಮಾರ್ ಹೇಳಿದರು. ನಕ್ಸಲ್ ನಿಗ್ರಹ ಪಡೆಯ ಎಸ್ಪಿ ವಾಸುದೇವ ಮೂರ್ತಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments