ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೊಡಗು

ಚೋರನ ಹೊಳೆಗೆ ಕಲುಷಿತ ನೀರು; ಜಲಚರಗಳ ಸಾವು

Parashurama
Updated On : 15 Feb 2013, 1:21 am

ಸೋಮವಾರಪೇಟೆ: ತಾಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬ್ಬಿಣ ಸೇತುವೆ ಮೂಲಕ ಹರಿದು ಹಾರಂಗಿ ಡ್ಯಾಂ ಸೇರುತ್ತಿರುವ ಚೋರನ ಹೊಳೆ ಕಲುಷಿತಗೊಂಡು ಜಲಚರಗಳು ಸತ್ತು ತೇಲುತ್ತಿರುವ ದೃಶ್ಯ ಐಗೂರು ವ್ಯಾಪ್ತಿಯಲ್ಲಿ ಹರಿಯುತ್ತಿರುವ ನದಿಯಲ್ಲಿ ಕಾಣ ಬಂದಿದೆ.
ತಾಲೂಕಿನ ಕಿರಗಂದೂರು ಹಾಗು ಐಗೂರು ಗ್ರಾ.ಪಂ.ವ್ಯಾಪ್ತಿಯಲ್ಲಿರುವ ಕೆಲವು ಪಲ್ಪಿಂಗ್ ಘಟಕಗಳ ಮಾಲೀಕರು ಕಾಫಿ ಪಲ್ಪಿಂಗ್‌ನ ಕಲುಷಿತ ನೀರನ್ನು ನೇರವಾಗಿ ಹೊಳೆಗೆ ಬಿಡುತ್ತಿರುವ ಪರಿಣಾಮ ಈ ಅನಾಹುತ ಸಂಭವಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಹರಿಯುವ ನೀರು ಕಲುಷಿತಗೊಂಡು, ದುರ್ವಾಸನೆ ಬೀರುತ್ತಿದ್ದು, ಮೀನುಗಳು ಸತ್ತು ತೇಲುತ್ತಿದ್ದ ಹಿನ್ನಲೆಯಲ್ಲಿ ಭಯಗೊಂಡ ಸಾರ್ವಜನಿಕರು ಐಗೂರು ಗ್ರಾ.ಪಂ.ಗೆ ದೂರು ನೀಡಿದ್ದಾರೆ.
ದೂರು ಸ್ವೀಕರಿಸಿದ ಗ್ರಾ.ಪಂ. ಅಧಿಕಾರಿಗಳು, ಸೋಮವಾರಪೇಟೆ ತಹಸೀಲ್ದಾರರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಕಂದಾಯ ನಿರೀಕ್ಷಕ ಉಮೇಶ್, ಐಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಮ್ಮಯ್ಯ, ಗ್ರಾಮ ಲೆಕ್ಕಿಗ ದಾಮೋದರ್, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಬಿ. ದಿನೇಶ್ ಹಾಗೂ ಶೋಭ ಸ್ಥಳ ಪರಿಶೀಲನೆ ನಡೆಸಿದರು.
ಕಲುಷಿತ ನೀರನ್ನು ಹೊಳೆಗೆ ಬಿಟ್ಟ ಪರಿಣಾಮ, ಜಲಚರಗಳು ಸತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು, ವರಿದಿಯನ್ನು ತಹಸೀಲ್ದಾರರಿಗೆ ನೀಡಲಾಗುವುದು ಎಂದು ಕಂದಾಯ ನಿರೀಕ್ಷಕ ಉಮೇಶ್ ಹೇಳಿದರು. ಕಾಫಿ ಪಲ್ಪಿಂಗ್ ಮಾಡಿದ ಕಲುಷಿತ ನೀರನ್ನು ಸಂಗ್ರಹಿಸಿಡುವ ಕೆಲವು ಎಸ್ಟೇಟ್ ಮಾಲೀಕರು ಮಳೆಬಿದ್ದ ದಿನ ಹೊಳೆಗೆ ಬಿಡುತ್ತಾರೆ. ಮಳೆ ಬಂದಾಗ ಹೊಳೆಯ ನೀರು ತಿಳಿಯಾಗಿರುವುದಿಲ್ಲ. ಈ ಕಾರಣದಿಂದ ಕಲುಷಿತ ನೀರನ್ನು ಹೊಳೆಗೆ ಬಿಡುವುದು ಸಾರ್ವಜನಿಕರ ಗಮನಕ್ಕೆ ಬರುವುದಿಲ್ಲ ಎಂದು ಗ್ರಾಪಂ ಸದಸ್ಯ ಕೆ.ಬಿ. ದಿನೇಶ ದೂರಿದರು.
ಒಂದು ವಾರ ಕಳೆದಂತೆ ಹೊಳೆಯಲ್ಲಿರುವ ಜಲಚರಗಳು ಸಾಯಲು ಪ್ರಾರಂಭಿಸುತ್ತವೆ. ಮುಂದಿನ ದಿನಗಳಲ್ಲಿ ಜಾನುವಾರುಗಳು ಈ ನೀರನ್ನು ಕುಡಿದರೆ ಅಪಾಯವಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ಕಾಫಿ ಪಲ್ಪಿಂಗ್  ಘಟಕದಿಂದ ಹೊರಬರುವ ಕಲುಷಿತ ನೀರನ್ನು ಹೊಳೆಗೆ ಹರಿ ಬಿಡುತ್ತಿರುವ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments