ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೊಡಗು

ಮಾ.17: ಮಡಿಕೇರಿ ತಾ. ಸಮ್ಮೇಳನ

Parashurama
Updated On : 15 Feb 2013, 1:21 am

ಮಡಿಕೇರಿ: ಮಡಿಕೇರಿ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಡಿಕೇರಿ ಸಮೀಪದ ಕಡಗದಾಳು ಗ್ರಾಮದಲ್ಲಿ ಮಾರ್ಚ್ 17ರಂದು ನಡೆಸಲು ಕಡಗದಾಳು ಪ್ರೌಢಶಾಲೆಯಲ್ಲಿ ನಡೆದ ಕಡಗದಾಳು ಗ್ರಾಮದ ಜನಪ್ರತಿನಿಧಿಗಳ ಸಂಘ, ಸಂಸ್ಥೆಗಳ ಹಾಗೂ ಗಣ್ಯರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷ ಎಸ್.ವೈ. ಮುನೀರ್ ಅಹ್ಮದ್ ವಹಿಸಿದ್ದರು. ಸಭೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ.ಸಾ.ಪ. ಜಿಲ್ಲಾ ಅಧ್ಯಕ್ಷ ಟಿ.ಪಿ. ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಹಳ್ಳಿಗಳ ಕಡೆ ಕನ್ನಡ ಸಾಹಿತ್ಯದ ಕೆಲಸ ವಿಕೇಂದ್ರೀಕರಣಗೊಳ್ಳಬೇಕು. ಗ್ರಾಮಗಳ ಜನರಿಗೆ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ಪರಿಚಯವಾಗಬೇಕು. ಆ ಮೂಲಕ ನಾಡು- ನುಡಿಯ ಸೇವೆಯನ್ನು ಎಲ್ಲರೂ ಒಗ್ಗಟ್ಟಿನಿಂದ ಹೆಚ್ಚಿಸಬೇಕು ಎಂದು ಹೇಳಿದರು.
ಮೈಸೂರು ರಾಜರ ಆಸ್ಥಾನದಲ್ಲಿ ವೈದ್ಯರಾಗಿದ್ದ ಕೊರವಂಡ ಅಪ್ಪಯ್ಯನವರ ಊರು ಇದಾಗಿದ್ದು ಅವರು ಕನ್ನಡ ಸಾಹಿತ್ಯಕ್ಕಾಗಿ ಹಾಗೂ ಕೊಡಗು ಭಾಷಾ ಲಿಪಿಗಾಗಿ ದುಡಿದವರಾಗಿದ್ದು, ಅಂತಹ ಸಾಹಿತಿಯ ಊರಲ್ಲಿ ಸಮ್ಮೇಳನ ನಡೆಸಲು ಗ್ರಾಮಸ್ಥರು ಮುಂದಾಗಿರುವುದು ಶ್ಲಾಘನೀಯ ಕಾರ್ಯ ಎಂದರು. ಗ್ರಾಮದ ಪ್ರಮುಖರು ಹಾಗೂ ಗ್ರಾ.ಪಂ. ಅಧ್ಯಕ್ಷ ಶ್ರೀಪತಿ, ಜಿಪಂ ಸದಸ್ಯೆ ಬೀನಾ ಬೊಳ್ಳಮ್ಮ ಇನ್ನಿತರರು ಮಾತನಾಡಿ ಕಡಗದಾಳುವಿಗೆ ಸಮ್ಮೇಳನ ನೀಡುವುದಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದರು.
ಉಪ ಸಮಿತಿ ರಚನೆ: ಸ್ವಾಗತ ಸಮಿತಿಯಲ್ಲಿ ಅಧ್ಯಕ್ಷರಾಗಿ ಉಸ್ತುವಾರಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್, ಮಹಾಪೋಷಕರಾಗಿ ಜಿ.ಪಂ. ಅಧ್ಯಕ್ಷ ಬಿ. ಶಿವಪ್ಪ,  ತಾಲೂಕು ಪಂಚಾಯತ್ ಅಧ್ಯಕ್ಷೆ ರೀನಾ ಜಗನ್ನಾಥ್, ಜಿಲ್ಲಾ ಕಸಾಪ ಅಧ್ಯಕ್ಷ ಟಿ.ಪಿ. ರಮೇಶ್, ಗ್ರಾ.ಪಂ. ಅಧ್ಯಕ್ಷ ಶ್ರೀಪತಿ, ಪೋಷಕರಾಗಿ ಜಿ.ಪಂ. ಸದಸ್ಯೆ ರೀನಾ ಬೊಳ್ಳಮ್ಮ, ತಾ.ಪಂ. ಸದಸ್ಯೆ ರೇಣುಕಾ ಚೆನ್ನಿಗಯ್ಯ, ಮಡಿಕೇರಿ ನಗರಸಭಾ ಅಧ್ಯಕ್ಷ ಎಚ್.ಎಂ. ನಂದಕುಮಾರ್, ವಿ.ಎಸ್.ಎಸ್.ಎನ್ ಅಧ್ಯಕ್ಷ ಕೆಚ್ಚೆಟ್ಟಿರ ಬೆಳ್ಯಪ್ಪ, ಕಾರ್ಯಾಧ್ಯಕ್ಷರಾಗಿ ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷ ಮುನೀರ್ ಅಹ್ಮದ್, ಪ್ರಧಾನ ಕಾರ್ಯದರ್ಶಿಗಳಾಗಿ ಕೆ.ಎಂ. ವೆಂಕಟೇಶ್, ಸುಜಾತಾ ತಳವಾರ್, ಮಾದೇಟಿರ ಬೆಳ್ಯಪ್ಪ, ಎಂ.ಎಸ್. ಶಂಭಯ್ಯ, ಬಿ.ಎಂ. ಜಯಪ್ಪ ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ರಾಘವೇಂದ್ರ ಅವರನ್ನು ನೇಮಿಸಲಾಯಿತು.
ಹಣಕಾಸು ಸಮಿತಿಗೆ ಅಧ್ಯಕ್ಷರಾಗಿ ಬಿ.ಆರ್. ವಿನೋದ್ ಕುಮಾರ್, ಸಂಚಾಲಕರಾಗಿ ಕೆಚ್ಟೆಟ್ಟಿರ ಮಂಜು ಅಚ್ಚಯ್ಯ ಮತ್ತು ತಾಲೂಕು ಕೋಶಾಧಿಕಾರಿ ಮಂದ್ರಿ ಮೋಹನ್‌ದಾಸ್ ಅವರನ್ನು ನೇಮಿಸಿಕೊಳ್ಳಲಾಯಿತು. ಇನ್ನಿತರ ಉಪ ಸಮಿತಿಗಳನ್ನು ಫೆ.17ರಂದು ಸಂಜೆ 3.30ಕ್ಕೆ ಕಡಗದಾಳು ಪ್ರೌಢಶಾಲೆಯಲ್ಲಿ ನಡೆಯುವ ಸಭೆಯಲ್ಲಿ ತೀರ್ಮಾನಿಸಲು ಸಭೆ ನಿರ್ಣಯಿಸಿತು. ತಾಲೂಕು ಕಸಾಪ ಅಧ್ಯಕ್ಷ ಮುನೀರ್ ಅಹ್ಮದ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಶಾಲಾ ಮುಖ್ಯೋಪಾಧ್ಯಾಯ ರಾಘವೇಂದ್ರ ಸ್ವಾಗತಿಸಿದರು. ತಾಲೂಕು ಗೌರವ ಕಾರ್ಯದರ್ಶಿ ವೆಂಕಟೇಶ್ ನಿರೂಪಿಸಿದರು. ಸಂಪಾಜೆ ಹೋಬಳಿ ಕಸಾಪ ಅಧ್ಯಕ್ಷ ಅಮೆಚೂರು ಲೋಕನಾಥ್ ವಂದಿಸಿದರು. ವೇದಿಕೆಯಲ್ಲಿ ಹಿರಿಯ ಸಾಹಿತಿ ಎನ್. ಮಹಾಬಲೇಶ್ವರ್ ಭಟ್, ಜಿಲ್ಲಾ ಕೋಶಾಧಿಕಾರಿ ವಾಸು ರೈ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments