ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೊಡಗು

31ರೊಳಗೆ ಸನ್ನಿಸೈಡ್‌ನಿಂದ ಆರ್‌ಟಿಒ ಕಚೇರಿ ತೆರವುಗೊಳಿಸಲು ಫೋರಂ ಆಗ್ರಹ

Parashurama
Updated On : 17 Mar 2013, 12:17 pm

ಮಡಿಕೇರಿ: ಜನರಲ್ ತಿಮ್ಮಯ್ಯ ಹುಟ್ಟಿದ ಮನೆಯಾಗಿರುವ ಮಡಿಕೇರಿಯ ಸನ್ನಿಸೈಡ್‌ನಿಂದ ಆರ್‌ಟಿಒ ಕಚೇರಿಯನ್ನು ಮಾ.31ರೊಳಗೆ ತೆರವುಗೊಳಿಸಬೇಕು ಇಲ್ಲವೆ ಈ ಬಗೆಗಿನ ಸ್ಪಷ್ಟ ದಿನಾಂಕವನ್ನು ತಿಳಿಸಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂ ಎಚ್ಚರಿಸಿದೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೋರಂನ ನಿವೃತ್ತ ಕರ್ನಲ್ ಕಂಡ್ರತಂಡ ಸುಬ್ಬಯ್ಯ ಮಾತನಾಡಿ, ಫೋರಂ ವತಿಯಿಂದ ಜನರಲ್ ತಿಮ್ಮಯ್ಯ ಜನ್ಮದಿನಾಚರಣೆಯನ್ನು ಮಾ.31ರಂದು ಆಚರಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿ ಜಿಲ್ಲಾಡಳಿತವೇ ಸಮಾರಂಭ ಆಯೋಜಿಸಲಿದೆ ಎಂದು ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಸಂದರ್ಭ ತಿಳಿಸಿರುವುದರಿಂದ ಫೋರಂ ಕೂಡ ಹುಟ್ಟುಹಬ್ಬಕ್ಕೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸುತ್ತದೆ ಎಂದು ಹೇಳಿದರು.
ಸನ್ನಿಸೈಡ್ ಮನೆಯನ್ನು ತಿಮ್ಮಯ್ಯ ಜನ್ಮದಿನಾಚರಣೆಯ ದಿನದಂದೇ ಬಿಟ್ಟು ಕೊಡುವುದು ಸರ್ಕಾರ ಕೊಡಗಿನ ಜನತೆಗೆ ನೀಡುವ ದೊಡ್ಡ ಕೊಡುಗೆಯಾಗುತ್ತದೆ ಎಂದು ಅಭಿಪ್ರಾಯಪಟ್ಟ ಕರ್ನಲ್ ಸುಬ್ಬಯ್ಯ, ಈ ಸಂಬಂಧ ಆರ್‌ಟಿಒ ಅವರನ್ನು ಸಂಪರ್ಕಿಸಿದಾಗ ಕಚೇರಿ ಸ್ಥಳಾಂತರ ಕೆಲದಿನಗಳ ಕಾಲ ವಿಳಂಬವಾಗಬಹುದೆಂದು ತಿಳಿಸಿದ್ದಾರೆ. ಮಾ.31ರಂದೇ ಆರ್‌ಟಿಒ ಕಚೇರಿ ಸ್ಥಳಾಂತರಗೊಳ್ಳುವ ನಿರ್ದಿಷ್ಟ ದಿನಾಂಕವನ್ನು ತಿಳಿಸಬೇಕೆಂದು ಆಗ್ರಹಿಸಿದರು.
ಉಳ್ಳಿಯಡ ಎಂ. ಪೂವಯ್ಯ, ಅನೀಶ್ ಮಾದಪ್ಪ, ಪ್ರಮೋದ್ ಸೋಮಯ್ಯ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments