ಧರ್ಮಸ್ಥಳಕ್ಕೆ ನೂತನ ಬಸ್
ಸೋಮವಾರಪೇಟೆ: ಮೈಸೂರು- ಸೋಮವಾರಪೇಟೆ- ಶಾಂತಳ್ಳಿ ಮಾರ್ಗವಾಗಿ ಧರ್ಮಸ್ಥಳಕ್ಕೆ ನೂತನವಾಗಿ ರಾಜ್ಯ ರಸ್ತೆ ಸಾರಿಗೆ ಬಸ್ ಸಂಚಾರ ಆರಂಭಿಸಲಾಗಿದೆ.
ಪ್ರತಿದಿನ ಮೈಸೂರಿನಿಂದ ಬೆಳಗ್ಗೆ 5.30ಕ್ಕೆ ಹೊರಟು ಸೋಮವಾರಪೇಟೆಗೆ 8.30ಕ್ಕೆ ತಲುಪಲಿದೆ. ಇಲ್ಲಿಂದ ಹೊರಡುವ ಬಸ್ 9 ಗಂಟೆಗೆ ಶಾಂತಳ್ಳಿಗೆ ತೆರಳಿ ಬಿಸಿಲೆ ಮಾರ್ಗವಾಗಿ 11 ಗಂಟೆಗೆ ಕುಕ್ಕೆಸುಬ್ರಹ್ಮಣ್ಯ, 12.30ಕ್ಕೆ ಧರ್ಮಸ್ಥಳ ತಲುಪಲಿದೆ. ಮಧ್ಯಾಹ್ನ 2.30ಕ್ಕೆ ಧರ್ಮಸ್ಥಳದಿಂದ ಹೊರಟು, ಅದೇ ಮಾರ್ಗವಾಗಿ ಸೋಮವಾರಪೇಟೆ, ಕುಶಾಲನಗರ ಮಾರ್ಗವಾಗಿ ಮೈಸೂರಿಗೆ ರಾತ್ರಿ 10 ಗಂಟೆಗೆ ತಲುಪಲಿದೆ.
ನೂತನ ಬಸ್ಗೆ ಶಾಂತಳ್ಳಿಯ ಶ್ರೀಕುಮಾರಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ದೇವಾಲಯದ ಪ್ರಧಾನ ಅರ್ಚಕ ಶಾಂತಳ್ಳಿ ಗಣೇಶ್ ಪೌರೋಹಿತ್ಯದಲ್ಲಿ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಜಿ.ಪಂ. ಸದಸ್ಯ ವೆಂಕಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್, ದೇವಾಲಯ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆ.ಕೆ. ಸುಬ್ಬಯ್ಯ, ಕಾರ್ಯದರ್ಶಿ ಮನೋಹರ್, ಗ್ರಾ.ಪಂ ಸದಸ್ಯರಾದ ಉತ್ತಯ್ಯ, ಪ್ರದೀಪ್ ಕುಮಾರ್, ಪ್ರಮುಖರಾದ ರತ್ನ ಕುಮಾರ್, ಧರ್ಮಪ್ಪ, ಪ್ರತಾಪ್ ಸೇರಿದಂತೆ ಇತರರು ಹಾಜರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.