ಮೇ 26ರಂದು ಪೊನ್ನಂಪೇಟೆ 'ಕರ್ನಾಟಕ ಸಂಗಮ'
ಮಡಿಕೇರಿ: ಪೊನ್ನಂಪೇಟೆಯ ನಿಸರ್ಗ ಜೆಸಿಐ ಸಂಸ್ಥೆಯ ಆಶ್ರಯದಲ್ಲಿ ಮೇ 26ರಂದು ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ಮೇ 26ರಂದು ರಾಜ್ಯಮಟ್ಟದ ಸಾಂಸ್ಕೃತಿಕ ಹಬ್ಬ 'ಕರ್ನಾಟಕ ಸಂಗಮ'ವನ್ನು ಆಯೋಜಿಸಲಾಗಿದೆ ಎಂದು ಜೆಸಿಐನ ವಲಯ ಉಪಾಧ್ಯಕ್ಷ ಮಲ್ಲೇಂಗಡ ಮಧೋಷ್ ಪೂವಯ್ಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು 3 ಸಾವಿರ ಜೆಸಿಐ ಸದಸ್ಯರು ಪಾಲ್ಗೊಳ್ಳುವ ನಿರೀಕ್ಷೆ ಇರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸುಮನ್, ಉಪಾಧ್ಯಕ್ಷ ಟಾಟು ಮೊಣ್ಣಪ್ಪ, ಪ್ರಥ್ಯು, ನಿಲನ್ ಇದ್ದರು.
ಸುಂಟಿಕೊಪ್ಪ: ವಿವಿಧ ಮಳಿಗೆಗಳ ಹರಾಜು
ಸುಂಟಿಕೊಪ್ಪ: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ 2013-14ನೇ ಸಾಲಿನ ವಿವಿಧ ಮಳಿಗೆಗಳ ಹರಾಜು ಮತ್ತು ಲೈಸನ್ಸ್ ಪ್ರಕ್ರಿಯೆ ಶನಿವಾರ ನಡೆದಿದ್ದು, ಕಳೆದ ಸಾಲಿಗಿಂತ ರು. 6,02,550 ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಎಂ.ಎ. ಉಸ್ಮಾನ್ ಮತ್ತು ಪಿಡಿಒ ಪುಟ್ಟಬಸಪ್ಪ ತಿಳಿಸಿದ್ದಾರೆ. ಕಳೆದ ಸಾಲಿನಲ್ಲಿ ರು. 22,03,600 ಆದಾಯ ಗಳಿಸಿದ್ದರೆ ಪ್ರಸಕ್ತ ಸಾಲಿನಲ್ಲಿ ಒಟ್ಟು ರು. 28,06,150 (ಕುರಿ ಮಾಂಸ ಮಳಿಗೆ ಹೊರತುಪಡಿಸಿ) ಸಂದಾಯವಾಗಿದೆ. ಸಂತೆ ಸುಂಕದಿಂದ ರು. 3,90,100, ಗೋಡಾನ್ಗಳಿಂದ ರು. 1,02,750, ಕೋಳಿ ಮಾಂಸ ಮಳಿಗೆಗಳಿಂದ ರು. 10,40,000, ಹಸಿಮೀನು ಮಳಿಗೆಗಳಿಂದ ರು. 10,00,000, ಒಣಮೀನು ಮಳಿಗೆಯಿಂದ ರು. 70,000, ಹಂದಿ ಮಾಂಸ ಮಳಿಗೆಗಳಿಂದ ರು. 1,80,000 ಮತ್ತು ಶೌಚಾಲಯದಿಂದ ರು. 23,300 ಸಂದಾಯವಾಗಿದೆ. ಈ ಬಾರಿ ಕುರಿಮಾಂಸ ಮಾರಾಟಕ್ಕೆ ನಿಗದಿತ ಲೈಸನ್ಸ್ದಾರರು ಮುಂದೆ ಬಾರದ ಕಾರಣ ಪಂಚಾಯಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು. ಎಚ್.ಎನ್. ಲಕ್ಷ್ಮಿ, ಬಿ.ಐ. ಭವಾನಿ, ಬಿ.ಎಸ್. ಸದಾಶಿವ ರೈ, ಕೆ.ಎಂ. ರಜಾಕ್, ಪಿ.ಆರ್. ಸುಕುಮಾರ್, ವೈ.ಎಸ್. ಸುಮಿತಾ, ಎಂ. ಸೋಮಯ್ಯ, ರೋಸ್ಮೇರಿ ರಾಡ್ರಿಗಸ್, ಎಂ.ಟಿ. ರಾಣಿ, ನಿರ್ಮಲ ಶೇಷಪ್ಪ, ಜ್ಯೋತಿ, ಬಿ.ಬಿ. ಯಶೋಧರ, ಆನಂದ, ಬಿ.ಎಂ. ವೆಂಕಪ್ಪ, ಕಾರ್ಯದರ್ಶಿ ಶೈಲಾ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.