ವಿದ್ಯುತ್ಗೆ ಮಾರ್ಗಕ್ಕೆ ಕಾಮಗಾರಿ: ಆಕ್ಷೇಪ
ಮಡಿಕೇರಿ: ಕೈಗಾ ಅಣುಸ್ಥಾವರದಿಂದ ಕೇರಳದ ಕೋಯಿಕೋಡ್ಗೆ 400 ಕೆ.ವಿ ಹೈಟೆನ್ಶನ್ ಅಣು ವಿದ್ಯುತ್ ಮಾರ್ಗ ಅಳವಡಿಸಲು ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದ ಬ್ರಹ್ಮಗಿರಿ ಅಭಯಾರಣ್ಯ ಮೂಲಕ ಜೆಸಿಬಿ ಯಂತ್ರದಲ್ಲಿ ಕಾಮಗಾರಿ ನಡೆಸಲಾಗಿದೆ ಎಂದು ಕಾವೇರಿ ಸೇನೆ ಸಂಚಾಲಕ ರವಿಚಂಗಪ್ಪ ಆರೋಪಿಸಿದ್ದಾರೆ. ಈಗಾಗಲೇ ಈ ಮಾರ್ಗ ಹಾದು ಹೋಗುವ 8 ಗ್ರಾ.ಪಂ.ಗಳು ಯೋಜನೆಯ ವಿರುದ್ಧ ನಿರ್ಣಯ ಕೈಗೊಂಡಿದ್ದರೂ, ಅದನ್ನು ಗಣನೆಗೆ ತೆಗೆದುಕೊಳ್ಳದೆ ವಿದ್ಯುತ್ ಟವರ್ ಅಳವಡಿಸಲು ಮುಂದಾಗಿರುವ ಕಾಮಗಾರಿ ಗುತ್ತಿಗೆ ಪಡೆದುಕೊಂಡಿರುವ ಪವರ್ ಗ್ರಿಡ್ ಕಾರ್ಪೊರೇಶನ್ ಲಿಮಿಟೆಡ್ ವಿರುದ್ಧ ಶೀಘ್ರದಲ್ಲೇ ಬೃಹತ್ ಸಮಾವೇಶ ಸಂಘಟಿಸುವುದಾಗಿ ತಿಳಿಸಿದ್ದಾರೆ. ಕಾವೇರಿ ಸೇನೆ ಸಂಚಾಲಕ ರವಿಚಂಗಪ್ಪ, ಕುಟ್ಟ ವ್ಯಾಪ್ತಿಯ ಬ್ರಹ್ಮಗಿರಿ ಅಭಯಾರಣ್ಯದೊಳಗೆ ಅರಣ್ಯ ಇಲಾಖೆ ಅನುಮತಿ ಪಡೆಯದೆ ಜೆಸಿಬಿ ಮೂಲಕ ಮಣ್ಣು ಕೆಲಸ ಮಾಡಿರುವುದು ಹಾಗೂ ಅಣು ಮಾರ್ಗದ ಸ್ಥಾವರ ನಿರ್ಮಾಣಕ್ಕೆ ಸಿಮೆಂಟ್ ಫೌಂಡೇಶನ್ ಹಾಕಿರುವುದನ್ನು ಪರಿಶೀಲಿಸಿ ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸಿದರು. ಅನುಮತಿ ಇಲ್ಲದೆ ಬ್ರಹ್ಮಗಿರಿ ಅಭಯಾರಣ್ಯದ ಒಳಗೆ ಅಣು ವಿದ್ಯುತ್ ಮಾರ್ಗ ಅಳವಡಿಸಲು ಮುಂದಾಗಿರುವುದು ಕಾನೂನು ಬಾಹಿರ ಎಂದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.