ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕ್ಷೀರಭಾಗ್ಯಕ್ಕೆ ಚಾಲನೆ

Srinivasa Murthy VN
Updated On : 2 Aug 2013, 1:32 am

ಟೇಕಲ್: ದೊಡ್ಡಮಲ್ಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆಯನ್ನು ಗ್ರಾಪಂ ಸದಸ್ಯ ಡಿ.ಆರ್. ವೆಂಕಟೇಶಪ್ಪ ಹಾಗೂ ಗ್ರಾಪಂ ಮಾಜಿ ಸದಸ್ಯ ಗೋಪಾಲಪ್ಪ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಕೆ.ಎನ್. ಮಂಜುನಾಥ್ ಯೋಜನೆಯ ಮಹತ್ವದ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಸ್.ಬಿ. ಸುನಂದಮ್ಮ, ಎನ್.ವಿ. ಸುರೇಖಾ, ವಿ. ಲಲಿತಾ, ಸಹಶಿಕ್ಷಕ ಆರ್. ರಮೇಶ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಚಿಂತಾಮಣಿಯಲ್ಲಿ ನೀರಿನ ಸಂಪರ್ಕಕ್ಕಾಗಿ ಎರಡು ಬಣಗಳ ಕಾದಾಟ
ಚಿಂತಾಮಣಿ: ಕುಡಿಯುವ ನೀರಿನ ಪೈಪ್‌ಲೈನ್ ಸಂಪರ್ಕಕ್ಕಾಗಿ ಹಾಲಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಹಾಗೂ ಮಾಜಿ ಶಾಸಕ ಸುಧಾಕರ್ ಗುಂಪಿನ ನಡುವೆ ಪರಸ್ಪರ ಮಾತಿನ ಚಕಮುಖಿ ನಡೆದು, ಕೈ ಕೈ ಮಿಲಾಯಿಸಲು ಮುಂದಾಗಿರುವ ಘಟನೆ ಪಟ್ಟಣದ ವೆಂಕಟಗಿರಿಕೋಟೆಯಲ್ಲಿ ಗುರುವಾರ ನಡೆದಿದೆ.ನಡೆದಿದೆ.
ನೀರು ಬಿಡದಂತೆ ಶಾಸಕರ ಪರ ಗುಂಪು ಪೊಲೀಸ್ ಜೀಪಿಗೆ ಅಡ್ಡಲಾಗಿ ರಸ್ತೆಯಲ್ಲೆ ಕುಳಿತು ಪ್ರತಿಭಟಿಸಿದರು. ಪಟ್ಟಣದ ವಾರ್ಡ್ ನಂ.1ರ ವೆಂಕಟಗಿರಿಕೋಟೆ ಮಾಜಿ ಶಾಸಕ ಡಾ. ಎಂ.ಸಿ.ಸುಧಾಕರ್ ಬಣದಲ್ಲಿ ಗುರುತಿಸಿಕೊಂಡಿದ್ದ ನಗರಸಭಾ ಸದಸ್ಯ ದೇವರಾಜ್ ಕಳೆದ 4 ತಿಂಗಳಿಂದ ಈ ಭಾಗದ ನಿವಾಸಿಗಳಿಗೆ ನೀರಿಲ್ಲ. ಹೀಗಾಗಿ ನಗರಸಭೆ ಆಯುಕ್ತರಿಗೆ ದೂರು ನೀಡಿದ್ದರು. ಬುಧವಾರ ಪ್ರತಿಭಟನೆಯನ್ನೂ ನಡೆಸಿದರು. ಇದನ್ನು ಸಹಿಸದ ಆಡಳಿತರೂಢ ಹಲವು ಸದಸ್ಯರಿಗೆ ಕಣ್ಣು ಕೆಂಡಾಮಂಡಲವಾಯಿತು. ಗುರುವಾರ ಬೆಳಗ್ಗೆ ಅಧಿಕಾರಿಗಳು ವೆಂಕಟಗಿರಿಕೋಟೆ ನಿವಾಸಿಗಳಿಗೆ ಕುಡಿವ ನೀರಿನ ಸಂಪರ್ಕ ಕಲ್ಪಿಸಲು ಮುಂದಾದಾಗ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಶಾಸಕ ಕೃಷ್ಣಾರೆಡ್ಡಿ ಪರ ನಗರಸಭಾ ಸದಸ್ಯರಾದ ಅನ್ವರ್ (ಅಣ್ಣು) ಮತ್ತು ತುಳಸಿ ಗುಂಪಿನ ನೂರಾರು ಜನರು, ಇದಕ್ಕೆ ಅಡ್ಡಿಪಡಿಸಿದ್ದಾರೆ. ನೀರು ಬಿಟ್ಟರೆ, ನಮಗೆ ತೊಂದರೆಯಾಗುತ್ತದೆಯೆಂದು ಆನಂದ್, ದೇವಮ್ಮ, ಆಂಜಮ್ಮ, ಮುನಿರಾಜು, ನೂರಾರು ಜನ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದರು. 2 ಗುಂಪುಗಳು ಜಮಾವಣೆಗೊಂಡು ಪರಸ್ಪರ ವಾಗ್ವಾದಕ್ಕಿಳಿದು ಕೈ ಕೈ ಮಿಲಾಯಿಸುವ ಹಂತಕ್ಕೆ ಮುಂದಾದಾಗ ಕೂಡಲೇ ಎಚ್ಚೆತ್ತ ವೃತ್ತ ನಿರೀಕ್ಷಕ ನಂಜಪ್ಪ ಪರಿಸ್ಥಿತಿ ಹತೋಟಿಗೆ ತರಲು ಮುಂದಾದರು. ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು. ನಂತರ ಡಿವೈಎಸ್‌ಪಿ ದೇವಯ್ಯ ಶಾಂತಿ ಕಾಪಾಡುವಂತೆ ಪ್ರತಿಭಟನಾಕಾರರಲ್ಲಿ ಮನವಿ ಮಾಡಿದರು. ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸುದಾಗಿ ಭರವಸೆ ನೀಡಿದರು.

ಟೇಕಲ್‌ನಲ್ಲಿ ಕ್ಷೀರಭಾಗ್ಯಕ್ಕೆ ಚಾಲನೆ
ಟೇಕಲ್: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಕ್ಷೀರಭಾಗ್ಯ ಬಹಳ ಉತ್ತಮವಾಗಿದ್ದು ಮಕ್ಕಳ ದೈಹಿಕ ಮತ್ತು ಮಾನಸಿಕ ಮಟ್ಟ ಬೆಳೆಯಲು ಪೂರಕವಾಗಿದೆ ಎಂದು ಟೇಕಲ್ ಜಿಪಂ ಸದಸ್ಯೆ ರತ್ನಮ್ಮ ನಂಜೇಗೌಡ ಅಭಿಪ್ರಾಯಪಟ್ಟರು. ಅವರು ಟೇಕಲ್‌ನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳಿಗೆ ಹಾಲು ನೀಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.ಸಭೆಯಲ್ಲಿ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡ, ತಾ.ಪಂ. ಸದಸ್ಯೆ ಮಂಜುಳವೆಂಕಟೇಶ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಉಪಾಧ್ಯಕ್ಷ ಎ.ಕೆ. ವೆಂಕಟೇಶ್ ಮುಂತಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಸ್‌ಬಿಸಿ ಕಮಿಟಿ ಅಧ್ಯಕ್ಷ ಕೆ.ಬಿ.ನಾರಾಯಣಸ್ವಾಮಿ, ಪ್ರಾಂಶುಪಾಲ ಎ.ಕೆ. ಪಾಪಣ್ಣ, ಉಪ ಪ್ರಾಂಶುಪಾಲ ಎನ್.ವಿ. ವೆಂಕಟೇಶ್, ಮುಖ್ಯ ಶಿಕ್ಷಕ ಬಿ.ಎಂ. ಚಂದ್ರಪ್ಪ, ಪ್ರೌಢಶಾಲಾ ವಿಭಾಗದ ಎಸ್ ಡಿ ಎಂ ಸಿ ಅಧ್ಯಕ್ಷ ವೆಂಕಟಪತಿ, ಗ್ರಾ.ಪಂ. ಸದಸ್ಯ ಶ್ರೀನಿವಾಸ್ ಕಿರಣ್, ಮುಖಂಡ ಪಾಚಾ ಸಾಬಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ನಾರಾಯಣಸ್ವಾಮಿ ಅಧ್ಯಕ್ಷರಾಗಿ ಆಯ್ಕೆ
ಗುಡಿಬಂಡೆ: ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಗಾದಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ ಕೆ.ವಿ. ನಾರಾಯಣಸ್ವಾಮಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರ ಪ್ರತಿಸ್ಪರ್ಧಿಯಾಗಿ ಆಯ್ಕೆ ಬಯಸಿದ್ದ ಶಿಕ್ಷಕ ಕೃಷ್ಣಪ್ಪ 5 ಮತಗಳನ್ನು ಗಳಿಸುವುದರ ಮೂಲಕ ಸೋಲುಂಡಿದ್ದಾರೆ. ಚುನಾವಣೆಯಲ್ಲಿ ಒಟ್ಟು 27 ಮತಗಳ ಪೈಕಿ ನಾರಾಯಣಸ್ವಾಮಿ 15 ಮತಗಳನ್ನು ಗಳಿಸಿ ವಿಜಯ ಗಳಿಸಿದ್ದಾರೆಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಬಿ.ಆರ್.ಸಿ ಸಮನ್ವಯಾಧಿಕಾರಿ ಗಂಗಿರೆಡ್ಡಿ ತಿಳಿಸಿದ್ದಾರೆ.

ಕೆ.ಜಿ.ಹಳ್ಳಿಯಲ್ಲಿ ಕ್ಷೀರಭಾಗ್ಯಕ್ಕೆ ಚಾಲನೆ
ಟೇಕಲ್: ಸಮೀಪದ ಕೆ.ಜಿ.ಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆಗೆ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡ ಚಾಲನೆ ನೀಡಿ ರಾಜ್ಯ ಸರ್ಕಾರದ ಈ ಯೋಜನೆ ಉತ್ತಮವಾಗಿದ್ದು ಮಕ್ಕಳು ಶಕ್ತಿಯುತವಾಗಿ, ಯುಕ್ತಿಯುತವಾಗಿ ಇರಲು ಸಹಕಾರಿಯಾಗಿದೆ ಎಂದರು. ಮಾಲೂರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಉಪಾಧ್ಯಕ್ಷ ಎ.ಕೆ. ವೆಂಕಟೇಶ್, ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶಪ್ಪ, ಕೆ.ಜಿ.ಹಳ್ಳಿ ಕ್ಲಸ್ಟರ್ ಶಿಕ್ಷಣ ಸಂಯೋಜಕ ಮಂಜಪ್ಪ, ಗ್ರಾ.ಪಂ. ಸದಸ್ಯ ಶ್ರೀನಿವಾಸ್ ಕಿರಣ್ ಇನ್ನು ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement