ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಕ್ಷೀರಭಾಗ್ಯದಿಂದ ಮಕ್ಕಳ ಅಪೌಷ್ಟಿಕತೆ ನೀಗಲಿ'

Srinivasa Murthy VN
Updated On : 2 Aug 2013, 1:30 am

ಕ.ಪ್ರ.ವಾರ್ತೆ ಮಾಲೂರು ಆ.1
ಮಕ್ಕಳಲ್ಲಿ ಕಾಡುವ ಅಪೌಷ್ಟಿಕತೆ ನೀಗಿಸುವ ಸಲುವಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ 'ಕ್ಷೀರಭಾಗ್ಯ' ಯೋಜನೆ ಮಕ್ಕಳ ಆರೋಗ್ಯ ದೃಷ್ಟಿಯಿಂದ ಉತ್ತಮವಾಗಿದ್ದು, ಶಿಕ್ಷಕರು ಈ ಯೋಜನೆಯಲ್ಲಿ ಶುಚಿತ್ವಕ್ಕೆ ಹೆಚ್ಚು ಗಮನ ನೀಡಬೇಕು ಎಂದು ಶಾಸಕ ಮಂಜುನಾಥ್ ಗೌಡ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಡಶಾಲೆಯಲ್ಲಿ ಸರ್ಕಾರದ 'ಕ್ಷೀರಭಾಗ್ಯ' ಯೋಜನೆಗೆ ಗುರುವಾರ ಚಾಲನೆ ನೀಡಿ ಮಾತನಾಡಿ, ಮಕ್ಕಳಲ್ಲಿ ಕೊರತೆ ಕಾಡುವ ಪೌಷ್ಟಿಕಾಂಶ ಹೆಚ್ಚಿಸಲು ಈ ಯೋಜನೆ ಉತ್ತಮ ಸಹಕಾರಿಯಾಗಿದೆ. ಶೈಕ್ಷಣಿಕ ಮಟ್ಟ ಹೆಚ್ಚುವ ಸಂಭವವು ಇದೆ ಎಂದರು.
ಈ ಯೋಜನೆಯ ದಿನನಿತ್ಯ ಆಹಾರದ ಸೇವನೆ ಕಾರ್ಯಕ್ರಮವಾಗಿದೆ. ನಿರ್ಲಕ್ಷ ತೋರದೆ ಶುಚಿತ್ವ ಕಡೆ ಹೆಚ್ಚು ಗಮನ ನೀಡಬೇಕು. ಒಂದು ವೇಳೆ ಶುಚಿತ್ವದಲ್ಲಿ ಕೊರತೆ ಕಂಡರೆ ಬಿಹಾರದಲ್ಲಿ ಆದ ದುಸ್ಥಿತಿ ನಮ್ಮಲ್ಲೂ ಉಂಟಾಗಲಿದೆ, ಎಚ್ಚರವಿರಲಿ. ಈ ಯೋಜನೆ ಕಾಲೇಜು ಮಟ್ಟಕ್ಕೆ ವಿಸ್ತರಿಸುವ ಜತೆಯಲ್ಲಿ ವಾರದ ಮೂರು ದಿನಗಳ ಬದಲಾಗಿ 5 ದಿನಗಳು ಹಾಲು ವಿತರಿಸುವಂತೆ ಸರ್ಕಾರದೊಡನೆ ಚರ್ಚಿಸುವುದಾಗಿ ತಿಳಿಸಿದರು.
ಕೋಚಿಮುಲ್ ನಿರ್ದೇಶಕ ಹಾಗೂ ಮಾಜಿ ಅಧ್ಯಕ್ಷ ಡಾ.ಪ್ರಸನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹಾಲಿನ ಸಂಗ್ರಹ ಹೆಚ್ಚಾಗಿ ಹಾಲು ಉತ್ಪನಗಳಿಗೆ ಮಾರುಕಟ್ಟೆ ಇಲ್ಲದೆ ಒಕ್ಕೂಟ ನಷ್ಟ ಅನುಭವಿಸುತ್ತಾ ಇತ್ತು. ರಾಜ್ಯದ ಸರ್ಕಾರಿ ಶಾಲೆ ಮಕ್ಕಳಿಗೆ ಬಿಸಿಯೂಟದ ಜತೆಯಲ್ಲಿ ಹಾಲು ನೀಡಿ ಎಂಬ ನಮ್ಮ ಮನವಿಯನ್ನು ಈ 'ಕ್ಷೀರಭಾಗ್ಯ' ಯೋಜನೆ ರೂಪಿಸುವ ಮೂಲಕ ರಾಜ್ಯ ಸರ್ಕಾರದ ಹಾಲು ಉತ್ಪಾದಕರ ಸಹಾಯಕ್ಕೆ ಬಂದಿದೆ. ಇದಕ್ಕಾಗಿ ರಾಜ್ಯ ಸರ್ಕಾರವನ್ನು ಜಿಲ್ಲೆಯ ರೈತರ ಪರವಾಗಿ ಅಭಿನಂದಿಸುತ್ತೇನೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸುಬ್ರಮಣ್ಯಂ ಮಾತನಾಡಿ, ತಾಲೂಕಿನಲ್ಲಿ 345 ಸರ್ಕಾರಿ-ಅನುದಾನಿತ ಶಾಲೆಗಳಲ್ಲಿ ಈ ಯೋಜನೆ ಜಾರಿಗೆ ತರುತ್ತಿದ್ದು, ಅಂಗನವಾಡಿಯ 14,840 ಮಕ್ಕಳು ಸೇರಿದಂತೆ ತಾಲೂಕಿನ ಸರ್ಕಾರಿ ಶಾಲೆಯ 39,720 ವಿದ್ಯಾರ್ಥಿಗಳು ಈ ಯೋಜನೆಯಡಿ ಹಾಲು ಪಡೆಯಲಿದ್ದಾರೆ ಎಂದರು.
ವಾರದಲ್ಲಿ ಮೂರು ದಿನಗಳ ಮಾತ್ರ ಹಾಲು ವಿತರಣೆಯಾಗಲಿದೆ. ಉರ್ದು ಶಾಲೆಗಳಿಗೆ ಶುಕ್ರವಾರ ಬದಲು ಶನಿವಾರ ಹಾಲು ವಿತರಿಸಲಾಗುತ್ತದೆ ಎಂದರು.
ಇದೇ ಸಂದರ್ಭ ಶಾಸಕ ಮಂಜುನಾಥ್ ಗೌಡ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಂಜುಳಾ ವೆಂಕಟೇಶ್, ಯಲ್ಲಮ್ಮ, ರಾಮಸ್ವಾಮಿ ರೆಡ್ಡಿ, ಯಶೋಧಮ್ಮ ಕೃಷ್ಣಮೂರ್ತಿ, ತಾ.ಪಂ. ಸದಸ್ಯರಾದ ಗೋಪಾಲ್ ಗೌಡ, ಪಾರ್ವತಮ್ಮ ಸ್ವಾಮಿ, ಪುರಸಭೆ ಸದಸ್ಯರಾದ ಸಿ.ಪಿ. ನಾಗರಾಜ್, ವೇಮನ, ಸಿ.ಲಕ್ಷ್ಮಿನಾರಾಯಣ್, ಮುರಳೀಧರ್, ಹನುಮಂತರೆಡ್ಡಿ, ಜಾಕೀರ್, ಜಯರಾಂ, ಮುನಿನಾರಾಯಣಪ್ಪ, ಸ.ನೌ.ಸಂ.ಅಧ್ಯಕ್ಷ ಗುಂಡಪ್ಪ, ಮಹೇಶ್ ಬಾಬು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement