ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಂಗಾರಪೇಟೆಯಲ್ಲಿ ಕ್ಷೀರಭಾಗ್ಯ ಯೋಜನೆಗೆ ಶಾಸಕರ ಚಾಲನೆ

Srinivasa Murthy VN
Updated On : 2 Aug 2013, 1:30 am

ಬಂಗಾರಪೇಟೆ: ಕ್ಷೀರಭಾಗ್ಯ ಯೋಜನೆಗೆ ಪಟ್ಟಣದ ಸರ್ಕಾರಿ ಹಿರಿಯ ಮಾದರಿ ಶಾಲೆಯಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಕ್ಕಳಿಗೆ ಹಾಲು ಕೊಡುವ ಮೂಲಕ ಚಾಲನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ಬಳಲುತ್ತಿರುವ ಅಂಗನವಾಡಿ ಮತ್ತು 1ರಿಂದ 10ನೇ ತರಗತಿಯ ಸರ್ಕಾರಿ ಮತ್ತು ಅನುದಾನಿತ ಖಾಸಗಿ ಶಾಲಾ ಮಕ್ಕಳ ಆರೋಗ್ಯ ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ ಶಾಲಾ ಮಕ್ಕಳಿಗೆ ಉಚಿತವಾಗಿ ಕೆನೆಭರಿತ ಹಾಲನ್ನು ವಾರಕ್ಕೆ ಮೂರು ದಿನಗಳು ನೀಡಲು ಮುಂದಾಗಿದ್ದು ಇದರಿಂದ ಬಡ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು.
ಯೋಜನೆ ಯಾವುದೇ ಕಾರಣಕ್ಕೂ ದುರುಪಯೋಗವಾಗದಂತೆ ಆಯಾ ಶಾಲಾ ಶಿಕ್ಷಕರು ನಿಗಾವಹಿಸಬೇಕು,ಲೋಪದೋಷಗಳು ಕಂಡು ಬಂದರೆ ಮುಲಾಜಿಲ್ಲದೆ ಕ್ರಮಕ್ಕೆ ಶಿಪಾರಸು ಮಾಡುವುದಾಗಿ ಎಚ್ಚರಿಕೆ ನೀಡಿದರು.ಬಿಹಾರ ರಾಜ್ಯದಲ್ಲಿ ಬಿಸಿಯೂಟದಲ್ಲಿ ಉಂಟಾದ ದುರ್ಘಟನೆ ಎಲ್ಲಿಯೂ ಸಂಭವಿಸದಂತೆ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಆದ್ದರಿಂದ ಅಡುಗೆ ತಯಾರಕರು ಶುಚಿತ್ವವನ್ನು ಕಾಪಾಡಬೇಕು ಅಡುಗೆ ತಯಾರಿಸುವಾಗ ಕಡ್ಡಾಯವಾಗಿ ಸಮವಸ್ತ್ರಗಳನ್ನು ಧರಿಸಬೇಕು ಗುಣಮಟ್ಟವನ್ನು ಪರಿಶೀಲಿಸಲು ಅನಿರೀಕ್ಷಿತವಾಗಿ ತಾವು ಶಾಲೆಗಳಿಗೆ ಭೇಟಿ ನೀಡುವೆ ಲೋಪಗಳು ಕಾಣಬಾರದು ಎಂದು ಎಚ್ಚರಿಕೆ ನೀಡಿದರು.
ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಈಗಾಗಲೇ ಬಿಸಿಯೂಟ ವರದಾನವಾಗಿದೆ ಇದರ ಜೊತೆಗೆ ಹಾಲು ಕೊಡುವುದರಿಂದ ಅವರ ದೈಹಿಕ ಬೆಳೆವಣಿಗೆಗೆ ಸಹಕಾರಿಯಾಗಳಿಗೆ ಕ್ಷೀರಭಾಗ್ಯ ಯೋಜನೆಯನ್ನು ತಾಲೂಕಿನ 495 ಶಾಲೆಗಳಲ್ಲಿ 36801ಮಕ್ಕಳಿಗೆ ನೆರವಾಗಲಿದೆ ಎಂದು ರಾಜ್ಯ ಸರ್ಕಾರದ ಈ ಸಾಧನೆಯನ್ನು ಶ್ಲಾಘಿಸಿದರು.
ತಹಸೀಲ್ದಾರ್ ಉಷಾ, ಪುರಸಭೆ ಮಾಜಿ ಅಧ್ಯಕ್ಷ ಕೆ. ಚಂದ್ರಾರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ್, ಪಾರ್ಥಸಾರಥಿ, ಪುರಸಭೆ ಸದಸ್ಯ ಶಫಿ, ತಾಪಂ ಅಧ್ಯಕ್ಷೆ ರೇಣುಕಾಬಾಲಚಂದ್ರ, ನೌಕರ ಸಂಘದ ಅಧ್ಯಕ್ಷ ಚಂದ್ರಶೇಖರಗೌಡ, ಅಕ್ಷರ ದಾಸೋಹ ಅಧಿಕಾರಿ ಸಿದ್ದರಾಜು, ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ವೆಂಕಟರಮಣ, ಚಂದ್ರಶೇಖರರಾಜು, ಬಿಇಒ ಕೆ.ಜಯರಾಜ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement