ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ಆಯ್ಕೆ

Srinivasa Murthy VN
Updated On : 3 Aug 2013, 12:18 pm

ಕೋಲಾರ: ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಆರೋಗ್ಯ ಇಲಾಖೆಯಿಂದ ಮೂವರು, ಜಿಲ್ಲಾ ಎಸ್.ಎನ್.ಆರ್ ಆಸ್ಪತ್ರೆಯಿಂದ ಇಬ್ಬರು ಸೇರಿದಂತೆ ಒಟ್ಟು 5 ಮಂದಿ ಆಯ್ಕೆಯಾಗಿದ್ದಾರೆ.
ವಿವಿಧ ಇಲಾಖೆಗಳ ಮೂಲಕ ಈಗಾಗಲೇ ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿದ್ದು,  ಆರೋಗ್ಯ ಇಲಾಖೆಯಿಂದ ಪ್ರತಿನಿಧಿಗಳ ಆಯ್ಕೆಗೆ ರಾಜ್ಯ ಸಂಘದಿಂದ ತಡೆಯಿದ್ದರಿಂದ ಚುನಾವಣೆ ವಿಳಂಬವಾಗಿತ್ತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸಿಂಡಿಕೇಟ್ ಮಾಡಿಕೊಂಡು ಮೂರು ಸ್ಥಾನಗಳಿಗೆ ಸ್ಪರ್ಧಿಸಿದ್ದ ವೆಂಕಟೇಶಬಾಬು (108), ಸಂಸೋನ್(108) ಹಾಗೂ ನಾರಾಯಣಪ್ಪ(116) ಹಾಗೂ ಎಸ್.ಎನ್.ಆರ್ ಆಸ್ಪತ್ರೆಯಿಂದ ಗುಂಪಾಗಿ ಸ್ಪರ್ಧಿಸಿದ್ದ ಇಬ್ಬರ ಪೈಕಿ ಆಸ್ಪತ್ರೆಯ ಆಧೀಕ್ಷಕ ಮುನಿರಾಜು(100) ಹಾಗೂ ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದ ಡಿ.ಗ್ರೂಪ್ ನೌಕರರ ಪ್ರತಿನಿಧಿ ಎ.ಮಂಜುನಾಥ್(63) ಚುನಾಯಿತರಾಗಿದ್ದಾರೆ.  ಒಟ್ಟು 200 ಮತಗಳಲ್ಲಿ 190 ಮಂದಿ ಮತ ಚಲಾಯಿಸಿದ್ದು ಇದರಲ್ಲಿ 3 ಮತಗಳು ತಿರಸ್ಕೃತವಾಗಿವೆ. ಮತಕ್ಷೇತ್ರ 18ರ ಎಸ್.ಎನ್.ಆರ್ ಆಸ್ಪತ್ರೆ ವತಿಯಿಂದ 2 ಸ್ಥಾನಗಳಿಗೆ 5 ಮಂದಿ ಸ್ಪರ್ಧಿಸಿದ್ದರು.
ಚುನಾವಣಾ ಕಣದಲ್ಲಿದ್ದ ಬಿ.ಕೆ.ಚಂದ್ರಕಲಾ(32),  ವಿ.ಕೋದಂಡ ಮೂರ್ತಿ (56), ಕೆ.ಟಿ. ಸುರೇಶ್ ಬಾಬು(36) ಮತಗಳನ್ನು ಪಡೆದು ಪರಾಜಿತರಾಗಿದ್ದಾರೆ. ಒಟ್ಟು155ಮತಗಳ ಪೈಕಿ 146 ಮತಗಳು ಚಲಾವಣೆಯಾಗಿದ್ದವು.
ಮುಖ್ಯ ಚುನಾವಣಾಧಿಕಾರಿಯಾಗಿ ನರಸಿಂಹಯ್ಯ, ಸಹಾಯಕ ಚುನಾವಣಾಧಿಕಾರಿಯಾಗಿ ಹಾ.ಮ.ರಾಮಚಂದ್ರ, ಎಣಿಕೆ ಕಾರ್ಯ ಸಹಾಯಕರಾಗಿ ಕೊಮ್ಮಣ್ಣ, ಬಿ.ವಿ.ನರಸಿಂಹ ಮೂರ್ತಿ, ನಾಗರಾಜ್, ಬಿ.ಎಂ.ಮಂಜುನಾಥ, ಪ್ರಮೋದ್‌ರೆಡ್ಡಿ ಮತ್ತಿತರರು ಕಾರ್ಯನಿರ್ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement