ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬರ ಬರಲಿ ಬಿಡಲಿ ಇಲ್ಲಿ ನೀರಿಗೆ 'ಬರ'ವಿಲ್ಲ!

Srinivasa Murthy VN
Updated On : 3 Aug 2013, 12:19 pm

ಬಂಗಾರಪೇಟೆ: ಕ್ಷೇತ್ರವನ್ನು ಬರ ಆವರಿಸಿ ಬರೋಬ್ಬರಿ 8 ವರ್ಷಗಳೇ ಕಳೆದಿದೆ. ತಾಲೂಕಲ್ಲಿ ಇದುವರೆಗೂ ಮಳೆರಾಯನ ದರ್ಶನವೇ ಆಗಿಲ್ಲ. ಇಂತಹ ಸ್ಥಿತಿಯಲ್ಲಿ ಸರ್ಕಾರ ಈ ಗ್ರಾಮಕ್ಕೆ ಬೋರ್‌ವೆಲ್ ಕೊರೆಸಲಿ ಬಿಡಲಿ ಗ್ರಾಮಸ್ಥರು ಮಾತ್ರ ತಲೆ ಕೆಡಿಸಿಕೊಳ್ಳುವುದಿಲ್ಲ.!
ಹೌದು... ಈ ಗ್ರಾಮದ ಜನ ನೀರಿಗಾಗಿ ಸರ್ಕಾರದ ಮರ್ಜಿ ಕಾಯುವಂತಿಲ್ಲ. ಏಕೆಂದರೆ.. ಗ್ರಾಮದ ತೆರೆದ ಬಾವಿಯಲ್ಲಿ ನೀರು ಎಲ್ಲಾ ಕಾಲಕ್ಕೂ ಸಿಗುವುದರಿಂದ ಜನರು ನೆಮ್ಮದಿಯಾಗಿದ್ದಾರೆ. ಇಂತಹ ಒಂದು ಅಪರೂಪದ ಸಂತಸಕ್ಕೆ ಕಾರಣವಾಗಿರುವುದು ತಾಲೂಕಿನ ಸೂಲಿಕುಂಟೆ ಪಂಚಾಯ್ತಿಯ ರಾಮನಾಯಕನಹಳ್ಳಿ ಗ್ರಾಮ. ಇಲ್ಲಿನ ಗ್ರಾಮದ ಬಾವಿಯೊಂದರಲ್ಲಿ ಸದಾ ನೀರು ಲಭ್ಯವಿರುವುದು ಎಲ್ಲರನ್ನು ಚಕಿತಗೊಳಿಸಿದೆ. ಇಂತಹ ಅಪರೂಪದ ಬಾವಿಯೊಂದು ಸದ್ದು ಗದ್ದಲವಿಲ್ಲದೆ ತನ್ನ ಸಿದ್ದಿಯನ್ನು ಮೌನದಿಂದಲೇ ಸಾಧಿಸುತ್ತಿದೆ. ಕ್ಷೇತ್ರದಾದ್ಯಂತ ಬರದಿಂದ ಅಂತರ್ಜಲ ಮಟ್ಟ ಕುಸಿದಿದೆ 2 ಸಾವಿರ ಅಡಿಗಳಷ್ಟು ಆಳಕ್ಕೆ ಬೋರ್‌ವೆಲ್ ಕೊರೆಸಿದರೂ ನೀರು ಸಿಗದ ಸ್ಥಿತಿ ಕ್ಷೇತ್ರದಲ್ಲಿದೆ. ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಗ್ರಾಮದ ಹೊರವಲಯದಲ್ಲಿರುವ ತೆರೆದ ಬಾವಿಯಲ್ಲಿ ಸಮೃದ್ಧವಾಗಿ ನೀರು ಸದಾ ಸಿಗುತ್ತಿರುವುದರಿಂದ ಗ್ರಾಮದ ಜನರಿಗೆ ಎಲ್ಲಿಲ್ಲದ ಸಂತಸ ತಂದಿದೆ.
ಗ್ರಾಮಸ್ಥರಿಗೆ ಆಶಾಕಿರಣ: ಬರಗಾಲದಲ್ಲಿ ಗ್ರಾಮಸ್ಥರಿಗೆ ಆಶಾಕಿರಣವಾಗಿರುವ ಈ ತೆರೆದ ಬಾವಿಯ ಸುತ್ತಲೂ ಗ್ರಾಮಸ್ಥರೆ ಮುಂದೆ ನಿಂತು ಕಲ್ಲಿನ ಕಟ್ಟಡವನ್ನು ನಿರ್ಮಾಣ ಮಾಡಿದ್ದಾರೆ.ಪಂಚಾಯ್ತಿ ಮುಖ್ಯಸ್ಥರು ಅಂತಹ ಅಪರೂಪದ ಬಾವಿಗಳನ್ನು ಸಂರಕ್ಷಿಸಬೇಕು. ಆದರೆ, ಪಂಚಾಯ್ತಿವರಿಗೆ ಇದನ್ನು ರಕ್ಷಿಸಲು ಸಮಯವಿಲ್ಲ. ಗ್ರಾಮ ಹಿಂದುಳಿದಿದ್ದು, ಯಾವುದೇ ಮೂಲ ನಾಗರಿಕ ಅನುಕೂಲಗಳಿಂದಲೂ ವಂಚಿತವಾಗಿದೆ. ಈ  ನಿಟ್ಟಿನಲ್ಲಿ ಯಾವೊಬ್ಬ ಜನಪ್ರತಿನಿಧಿಗಳೂ ಇತ್ತ ಕಣ್ಣು ಹಾಯಿಸಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಈ ನಿಟ್ಟಿನಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಗ್ರಾಮ ಸಭೆ ಹಮ್ಮಿಕೊಂಡಿದ್ದು, ಈ ವೇಳೆಯಾದರೂ ಈ ಗ್ರಾಮಕ್ಕೆ ಮೂಲ ಅನುಕೂಲಗಳನ್ನು ಕಲ್ಪಿಸಿಕೊಡುವರೆ ಎಂದು ಗ್ರಾಮಸ್ಥರು ಎದುರು ನೋಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement