ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವರ್ತಕರಿಂದ ಪಾದಚಾರಿ ಮಾರ್ಗ ಮಾಯ!

Srinivasa Murthy VN
Updated On : 3 Aug 2013, 12:16 pm

ಬಂಗಾರಪೇಟೆ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಾದಚಾರಿಗಳ ಸಂಚಾರಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಅಂಗಡಿ ಮಾಲೀಕರು ಆಕ್ರಮಿಸಿಕೊಂಡಿರುವುದರಿಂದ ಪಾದಚಾರಿಗಳಿಗೆ ಪ್ರತಿ ನಿತ್ಯ ಕಿರಿಕಿರಿ ಉಂಟಾಗಿದ್ದು, ಈ ಸಂಬಂಧ ಪುರಸಭೆ ಜಾಣ ಕುರುಡತನದಿಂದ ಹೊರ ಬಂದು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸ್ಥಳೀಯರು ನಾಗರಿಕರು ಒತ್ತಾಯಿಸಿದ್ದಾರೆ.
ಪಟ್ಟಣದ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೆ ಇವೆಯಾದರೂ ಜನ ಸಂಖ್ಯೆಯಗೆ ತಕ್ಕಂತೆ ಮೂಲಭೂತವಾಗಿ ನಾಗರಿಕ ಸೌಲಭ್ಯಗಳು ಮಾತ್ರ ಇಲ್ಲ. ಪುರಸಭೆ ಇದ್ದು ಇಲ್ಲದಂತಾಗಿದೆ. ಪಟ್ಟಣದ ಯಾವುದೇ ಪ್ರಮುಖ ರಸ್ತೆಗಳಲ್ಲಿ ಸಾಮಾನ್ಯ ಜನರು ಒಡಾಟಕ್ಕೆ ಅವಕಾಶವೇ ಇಲ್ಲದಂತಾಗಿದೆ.ರಸ್ತೆಗಳಿದ್ದರೆ ಫುಟ್‌ಪಾತ್ ಇರಲೇಬೇಕು. ಆದರೆ, ಪಟ್ಟಣದಲ್ಲಿ ಅವು ಮಾಯವಾಗಿರುವುದರಿಂದ ಸಾರ್ವಜನಿಕರು ವಾಹನಗಳು ಸಂಚರಿಸುವ ರಸ್ತೆಗಳ ಮಧ್ಯದಲ್ಲೇ ಒಡಾಟ ಮಾಡುವುದು ಅನಿವಾರ್ಯತೆ ಉಂಟಾಗಿದೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿತ್ಯ ಕಿರಿಕಿರಿ ತಪ್ಪಿಲ್ಲ: ಒಂದು ಕಡೆ ಪಾದಚಾರಿಗಳಿಗಾಗಿ ಮೀಸಲಿಟ್ಟಿರುವ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡು ಅಂಗಡಿ ಮುಂಗಟ್ಟುಗಳನ್ನು ನಿರ್ಮಿಸಿಕೊಂಡಿದ್ದರೆ, ಇನ್ನು ಕೆಲವು ಕಡೆ ಸಣ್ಣ ವ್ಯಾಪಾರಿಗಳು ಆಕ್ರಮಿಸಿಕೊಂಡಿರುವುದರಿಂದ ಜನರಿಗೆ ಪ್ರತಿ ನಿತ್ಯ ಕಿರಿಕಿರಿ ತಪ್ಪಿಲ್ಲ.
ಚಟುವಟಿಕೆ ಕೇಂದ್ರದಲ್ಲಿ ತೊಂದರೆ: ಪಟ್ಟಣದ ಪುರಸಭೆ ಬಸ್ ನಿಲ್ದಾಣದ ಬಳಿಯಿರುವ ಬಾಲಚಂದರ್ ಚಿತ್ರಮಂದಿರ ರಸ್ತೆಯಲ್ಲಂತೂ ಪಾದಚಾರಿಗಳು ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲಿ ಮೊದಲೇ ಕಿರಿದಾದ ರಸ್ತೆ ಅದರಲ್ಲಿ ಪಾದಚಾರಿಗಳ ಒಡಾಟಕ್ಕೆ ಸ್ಥಳವೇ ಇಲ್ಲ ಈ ರಸ್ತೆ ವಾಣಿಜ್ಯ ಚಟುವಟಿಕೆಗಳ ಕೇಂದ್ರವಾಗಿದ್ದು, ಪ್ರತಿದಿನ ಜನರಿಂದ ಹಾಗೂ ವಾಹನಗಳಿಂದ ತುಂಬಿರುತ್ತದೆ ಅಲ್ಲದೆ ಚಿತ್ರಮಂದಿರ ಬೇರೆ ಇರುವುದರಿಂದ ಚಿತ್ರ ಬಿಟ್ಟಾಗ ಮತ್ತಷ್ಟು ಕಿರಿಕಿರಿ ಈ ರಸ್ತೆಯಲ್ಲಿ ಮಹಿಳೆಯರು ಮಕ್ಕಳು ಮತ್ತು ವೃದ್ಧರಂತೂ ಓಡಾಡಲು ಹರಸಾಹಸ ಮಾಡಬೇಕು ಸ್ವಲ್ಪ ಯಾಮಾರಿದರೆ ಅಪಘಾತ ಕಟ್ಟಿಟ್ಟ ಬುತ್ತಿ.
ದುರ್ವಾಸನೆ ಸಹಿಸಬೇಕಿದೆ: ಇನ್ನು ಸಂಜೆ ವೇಳೆ ಸಾರ್ವಜನಿಕರೂ ಸಾಹಸ ಮಾಡಿ ಸಂಚರಿಸಬೇಕು ಅಷ್ಟರ ಮಟ್ಟಿಗೆ ರಸ್ತೆ ವಾಹನಗಳಿಂದ ತುಂಬಿರುತ್ತೆ. ಇದಲ್ಲದೆ ರಸ್ತೆಗಳ ಪಕ್ಕದಲ್ಲಿಯೇ ಮಾಂಸದ ಅಂಗಡಿಗಳು ಹಾಗೂ ಕಬಾಬ್ ಅಂಗಡಿಗಳಿದ್ದು ಅದರಿಂದ ಬರುವ ದುರ್ವಾಸನೆ ಮತ್ತಷ್ಟು ಜನರನ್ನು ಕಂಗೆಡಿಸಿದೆ.
ಶಾಸಕರು ಗಮನಹರಿಸಲಿ: ಇಂತಹ ರಸ್ತೆಗಳು ಪಟ್ಟಣದಲ್ಲಿ ಹಲವು ಇವೆ, ಅದರಲ್ಲಿ ಬಜಾರ್ ರಸ್ತೆ, ಸರ್ಕಾರಿ ಆಸ್ಪತ್ರೆ ಹಿಂಭಾಗದ ರಸ್ತೆ ಪ್ರಮುಖದ್ದು. ಈ ರಸ್ತೆಗಳಲ್ಲಿ ಸಾಮಾನ್ಯ ದಿನಗಳಲ್ಲೇ ಜನರು ಸಂಚರಿಸಲು ಅಸಾಧ್ಯ. ಈ ನಿಟ್ಟಿನಲ್ಲಿ ಪುರಸಭೆ ಮಾತ್ರ ಅಂತಹ ಪ್ರಕ್ರಿಯೆ ನಡದೇ ಇಲ್ಲ ಎಂಬಂತೆ ವರ್ತಿಸುತ್ತಿದೆ. ನೂತನ ಪುರಸಭೆ ಆಡಳಿತ ಮಂಡಳಿ ಮತ್ತು ನೂತನ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕ್ಷೇತ್ರ ಅಭಿವೃದ್ಧಿಗೆ ವಿಶೇಷ ಗಮನ ನೀಡುತ್ತಿರುವುದರಿಂದ ಅವರು ಮೊದಲು ಪಟ್ಟಣದಲ್ಲಿ ಒತ್ತುವರಿಯಾಗಿರುವ ಪಾದಚಾರಿಗಳ ಜಾಗವನ್ನು ತೆರವುಗೊಳಿಸುವತ್ತ ಗಮನಹರಿ ಪಾದಚಾರಿಗಳು ಮುಕ್ತ ಸಂಚಾರಕ್ಕೆ ಅನುವುಮಾಡಿಕೊಡಲಿ ಎಂದು  ಸಾರ್ವಜನಿಕರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement