ಅನುಮಾನಾಸ್ಪದ ವ್ಯಕ್ತಿ ಬಗ್ಗೆ ಎಚ್ಚರ ಇರಲಿ: ಶಿವಕುಮಾರ್
ಮುಳಬಾಗಲು: ಜನ ಸಾಮಾನ್ಯರು ತಮ್ಮ ಸುತ್ತಮುತ್ತಲಿನ ಪ್ರಾಂತ್ಯದಲ್ಲಿ ಅನುಮಾನಾಸ್ಪದವಾಗಿ ಕಂಡು ಬರುವ ವ್ಯಕ್ತಿಗಳ ಕುರಿತು ಜಾಗ್ರತೆ ವಹಿಸಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಸಹಕರಿಸಬೇಕು ವೃತ್ತ ನಿರೀಕ್ಷಕ ಎಂ. ಶಿವಕುಮಾರ್ ಕಿವಿಮಾತು ಹೇಳಿದರು. ಪಟ್ಟಣದ ಶಿವಕೇಶವನಗರದ ಸಮುದಾಯ ಭವನದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಏರ್ಪಡಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಭರಣ ಪ್ರದರ್ಶನ ಸಲ್ಲದು: ಮುಳಬಾಗಲು ಪಟ್ಟಣದ ಠಾಣೆಯ ವ್ಯಾಪ್ತಿಯಲ್ಲಿ ಈಚಿನ ದಿವಸಗಳಲ್ಲಿ ಸರ ಅಪಹರಣ. ಸುಲಿಗೆ, ಮತ್ತು ಕಳ್ಳತನದ ಪ್ರಕರಣಗಳು ವರದಿಯಾಗುತ್ತಿದ್ದು ಜನರು ಸಾಧ್ಯವಾದಷ್ಚು ಮಟ್ಚಿಗೆ ಬೆಲೆಬಾಳುವ ವಸ್ತುಗಳನ್ನು ಪ್ರದರ್ಶಿಸಬಾರದು. ಅನಿವಾರ್ಯವಾಗಿ ಅಭರಣ ಉಪಯೋಗಿಸಬೇಕಾದಲ್ಲಿ ಅವುಗಳನ್ನು ಬೇರೆಯವರಿಗೆ ಕಾಣಿಸದಂತೆ ಹಾಕಿಕೊಳ್ಳಬೇಕು ಹೊರಗಡೆ ಅನುಮಾನ್ಪದ ವ್ಯಕ್ತಿಗಳ ಕುರಿತು ಜಾಗೃತರಾಗಿರಬೇಕು ಎಂದು ಸಲಹೆ ನೀಡಿದರು.
ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಸಿ.ವಿ.ಗೋಪಾಲ್ ಮಾತನಾಡಿ, ಬೀದಿ ಕಾಮಣ್ಣರ ಕಾಟದಿಂದ ಹೆಣ್ಣು ಮಕ್ಕಳನ್ನು ರಕ್ಷಿಸಬೇಕು ಎಂದರು.
ಪುರಸಭೆ ಸದಸ್ಯ ಠಾಕೂರುಸಿಂಗ್, ಮಂಜು, ಹೊಳಲಿ ಸತೀಶ್ ಮುಂತಾದವರು ಭಾಗವಹಿಸಿದ್ದರು.