ಚಿಂತಾಮಣಿ ಸರ್ಕಾರಿ ನೌಕರರ ಸಂಘಕ್ಕೆ ಜನಾರ್ದನರೆಡ್ಡಿ ಅಧ್ಯಕ್ಷ
ಚಿಂತಾಮಣಿ: ಸರ್ಕಾರಿ ನೌಕರರ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದಿ ಚುನಾವಣೆಯಲ್ಲಿ ಬಿ.ಜನಾರ್ಧನರೆಡ್ಡಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಸ್ಥಾನಕ್ಕೆ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಭ್ಯರ್ಥಿ ಬಿ.ಜನಾರ್ಧನರೆಡ್ಡಿ ಒಂದು ಮತ ಅಂತರದಿಂದ ತಮ್ಮ ಸಮೀಪದ ಪ್ರತಿಸ್ಪರ್ಧಿ ಮುನಿರೆಡ್ಡಿಯನ್ನು ಪರಾಭವಗೊಳಿಸಿದ್ದಾರೆಂದು ಚುನಾವಣಾ ಅಧಿಕಾರಿ ಶ್ರೀರಾಮರೆಡ್ಡಿ ಫಲಿತಾಂಶ ಘೋಷಿಸಿದರು.
ಗುರುವಾರ ಬೆಳಗ್ಗೆ 11 ಗಂಟೆಗೆ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿ ಸಂಜೆ 4ರ ತನಕ ತೀವ್ರ ಕುತೂಹಲದಿಂದ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದ ಶಿಕ್ಷಕರಿಗೆ ಕೊನೆಗೂ ಬಿ.ಜನಾರ್ಧನರೆಡ್ಡಿ 15 ಮತ ಪಡೆದು ಜಯಶೀಲರಾಗಿದ್ದಾರೆ. ಉಪನ್ಯಾಸಕ ಮುನಿರೆಡ್ಡಿ 14 ಮತ ಪಡೆದು ಕೇವಲ ಒಂದು ಮತ ಅಂತರದಿಂದ ಸೋತಿದ್ದಾರೆ.ಚಿಂತಾಮಣಿಯಿಂದ ಕಳೆದ ಭಾನುವಾರ 25 ರಂದು ಪಟ್ಟಣದ ಹರಿಹರೇಶ್ವರ ಸ್ವಾಮಿ ದೇವಸ್ಥಾನದಿಂದ ಕಾಲ್ನಡಿಗೆಯಲ್ಲಿ ಪಶುಸಂಗೋಪನೆ ಇಲಾಖೆಯ ನೌಕರ ಬೈರಾರೆಡ್ಡಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಿದ್ದ ಎನ್ನಲಾಗಿದೆ. ಆದರೆ ಸರ್ಕಾರಿ ನೌಕರರ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಆಕಾಂಕ್ಷಿಗಳು ತಲಾ 14 ಮತ್ತು 14 ಸಮಬಲವಾಗಿ ಮತಗಳನ್ನು ಪಡೆದಿದ್ದರು.
ಆಂಧ್ರಪ್ರದೇಶದ ತೆಲಂಗಾಣ ವಿವಾದದಿಂದ ಸಾರಿಗೆ ಸಂಪರ್ಕ ಇಲ್ಲದೆ ಪಟ್ಟಣಕ್ಕೆ ಖಾಸಗಿ ವಾಹನದಲ್ಲಿ ಬಂದರು. ನಂತರ ಬಿ.ಜನಾರ್ಧನರೆಡ್ಡಿ ಪರ ಮತ ಚಲಾಯಿಸಲು ಹರ ಸಾಹಸ ಪಟ್ಟು ಕಡೆ ಗಳಿಗೆಯಲ್ಲಿ 3ಗಂಟೆ 59 ನಿಮಿಷಕ್ಕೆ ಬಂದು ಮತ ಚಲಾಯಿಸಿದ ಪರಿಣಾಮ ಬಿ.ಜನಾರ್ಧನರೆಡ್ಡಿ ಗೆಲ್ಲಲು ಸಾಧ್ಯವಾಯಿತು.
ರಂಜಾನ್ 'ಕುದಸ್ ಡೇ' ಆಚರಣೆ
ಗೌರಿಬಿದನೂರು: ತಾಲೂಕಿನ ತೊಂಡೇಬಾವಿ ಹೋಬಳಿ ಅಲೀಪುರ ಗ್ರಾಮದ ಮುಸ್ಲಿಮರು ರಂಜಾನ್ ತಿಂಗಳ ಕೊನೆಯ ಶುಕ್ರವಾರದಂದು ಆಚರಿಸುವ 'ಕುದಸ್ ಡೇ' ಉತ್ಸವವನ್ನು ಶ್ರದ್ದಾ ಭಕ್ತಿಯಿಂದ ಆಚರಿಸಿದರು.
ರಂಜಾನ್ ತಿಂಗಳಿನ ಕೊನೆಯ ಶುಕ್ರವಾರದಂದು ದೇಶದಲ್ಲಿನ ಎಲ್ಲಾ ಷಿಯಾ ಪಂಗಡಕ್ಕೆ ಸೇರಿದ ಮುಸಲ್ಮಾನರು ಒಗ್ಗಟ್ಟಿನಿಂದ ತಮ್ಮ ಶತ್ರು ದೇಶಗಳ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಊರಿನ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ (ರ್ಯಾಲಿ) ನಡೆಸುತ್ತೇವೆ ಎಂದು ದಿಲಾವಾರ್ ಹುಸೇನ್ ಜಮಾಯತ್ ಆಪ್ ಅಲೀಪುರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.
ನೂರಾರು ಮುಸ್ಲಿಮರು ಘೋಷಣೆ ಕೂಗುತ್ತಾ ರಾಜಬೀದಿಗಳಲ್ಲಿ ಸಂಚರಿಸಿ ದೇಶದ ವಿವಿಧ ಭಾಗಗಳಲ್ಲಿ ನಡೆಯುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಸ್ಥಳೀಯ ಸಂಘ ಸಂಸ್ಥೆಗಳಾದ ಆಲ್ಬಲಕ್ ಸಂಸ್ಥೆ, ಅಂಜುಮನೆ ಜಾಪ್ರಿಯಾ ಸಂಸ್ಥೆ, ಇದಾರೆ ಜಾಪರೆ ತಯ್ಯಾ (ಶಹಿರಿ ಕಮಿಟಿ) ಮತ್ತಿತರರು ಭಾಗವಹಿಸಿದ್ದರು.