ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪ.ಪೂ. ಕಾಲೇಜು ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ

Srinivasa Murthy VN
Updated On : 4 Aug 2013, 12:29 pm

ಮಾಲೂರು: ಸ್ವಾತಂತ್ರ್ಯ ದಿನಾಚರಣೆಯನ್ನು ಇದೇ ಪ್ರಥಮ ಬಾರಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಸಲು ಶಾಸಕ ಮಂಜುನಾಥ್ ಗೌಡ ಅಧ್ಯಕ್ಷತೆಯಲ್ಲಿ ಶನಿವಾರ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಸಭೆ ತೀರ್ಮಾನಿಸಿದೆ. ಪ್ರತಿ ಬಾರಿ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ನಡೆಯುತ್ತಿದ್ದ ಸ್ವಾತ್ರಂತ್ರ್ಯೋತ್ಸವ ಕಾರ್ಯಕ್ರಮವನ್ನು ಮೈದಾನದಲ್ಲಿ ನಡೆಯುತ್ತಿರುವ ಕಾಮಗಾರಿ ಹಿನ್ನೆಲೆಯಲ್ಲಿ ಈ ಬಾರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಸಲು ಸಭೆ ತೀರ್ಮಾನಿದೆ ಎಂದು ತಹಸೀಲ್ದಾರ್ ನಾಗರಾಜ್‌ರವರು ತಿಳಿಸಿದರು. ಸ್ವಾತಂತ್ರ್ಯೋತ್ಸವದ ಹಿಂದಿನ ದಿನದಂದು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ದೀಪಾಲಂಕಾರ ಮಾಡಬೇಕು. ಸ್ವಾತಂತ್ರ್ಯ ದಿನಾಚರಣೆಯಂದು ಎಲ್ಲ ಸರ್ಕಾರಿ ಅಧಿಕಾರಿಗಳು ತಪ್ಪದೇ ಭಾಗವಹಿಸಬೇಕು ಎಂದು ತಹಸೀಲ್ದಾರ್ ನಾಗರಾಜ್ ಹೇಳಿದರು. ಸಾಂಸ್ಕೃತಿಕ ಸ್ಪರ್ಧೆಗಳನ್ನು ಮಕ್ಕಳಿಗಾಗಿ ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದ ತಹಸೀಲ್ದಾರ್, ಈ ಬಾರಿ ವಿಶೇಷವಾಗಿ ಶಾಸಕರು ಪಟ್ಟಣದ 12 ಸಾವಿರ ಮಕ್ಕಳಿಗೆ ಸಿಹಿ ಹಂಚುವ ಜತೆಯಲ್ಲಿ ಊಡುಗೊರೆ ಸಹ ನೀಡಲಿದ್ದಾರೆ ಎಂದು ಸಭೆಗೆ ತಿಳಿಸಿದರು. ಸಭೆಗೆ ಅಧಿಕಾರಿಗಳು ಗೈರು ಹಾಜರಾಗಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದ ಶಾಸಕ ಮಂಜುನಾಥ್‌ಗೌಡ ರವರ ಆದೇಶದಂತೆ ನೋಟಿಸ್ ನೀಡುವುದಾಗಿ ಇದೇ ಸಂದರ್ಭದಲ್ಲಿ ತಹಸೀಲ್ದಾರ್ ರವರು ತಿಳಿಸಿದರು.ಬಿಇಓ ಸುಬ್ರಮಣ್ಯಂ, ಪ್ರಾಂಶುಪಾಲ ರಾಮಕೃಷ್ಣಪ್ಪ, ತಾ.ಪಂ.ಸದಸ್ಯ ಲೋಕೇಶ್, ಪುರಸಭೆ ಮುಖ್ಯಾಧಿಕಾರಿ ರೇಣುಕಾ, ತಾ.ಪಂ.ಮಾಜಿ ಅಧ್ಯಕ್ಷ ನಂಜೇಗೌಡ, ಸ.ನೌ.ಸಂ. ಅಧ್ಯಕ್ಷ ಗುಂಡಪ್ಪ, ಆರ್.ಐ.ನರೇಶ್, ನಾರಾಯಣಸ್ವಾಮಿ, ಪ್ರಾ.ಶಿ.ಸಂಘದ ಅಧ್ಯಕ್ಷ ಮುನಿನಾರಾಯಣ, ಎಸ್.ಬಿ.ಎಂ.ವ್ಯವಸ್ಥಾಪಕ ಕೃಷ್ಣಮೂರ್ತಿ, ಇನ್‌ಸ್ಪೆಕ್ಟರ್ ಕೇಶವ ಮೂರ್ತಿ ಇದ್ದರು.

ಲೇಖನಿ ಬದಲು ಲಾಂಗು ಹಿಡಿಯುತ್ತಿರುವ ಯುವಜನತೆ: ವಿಷಾದ
ಮಾಲೂರು:  ಲೇಖನಿ ಮೂಲಕ ಶಿಕ್ಷಣ ಪಡೆದು ಉತ್ತಮ ಸಮಾಜ ನಿರ್ಮಾಣ ಮಾಡಬೇಕಾಗಿದ್ದ ಯುವ ಜನತೆ ಐಷಾರಾಮಿ ಜೀವನಕ್ಕಾಗಿ ಲಾಂಗು ಮಚ್ಚುಗಳ ಮೂಲಕ ಅಡ್ಡದಾರಿ ಹಿಡಿದು ರಕ್ತ-ಸಿಕ್ತ ಜಗತ್ತನ್ನು ಸೃಷ್ಟಿಸುತ್ತಿರುವುದು ದುರದೃಷ್ಟಕರ ಎಂದು ರಾಜ್ಯ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಡಾ.ಆನಂದ ಗುರೂಜಿ ಹೇಳಿದರು.
ಪಟ್ಟಣದ ಸುಬ್ರಮಣ್ಯ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಕಾವಡಿ ಮಹೋತ್ಸವ ಅಂಗವಾಗಿ ಬುಧವಾರ ದೇವಾಲಯದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮಾತನಾದರು.
ಸಾಹಿತಿ ವೇಣು ಗೋಪಾಲ್ ವಹ್ನಿ ಮಾತನಾದರು. ಸುವರ್ಣ ಚಾನಲ್‌ನಲ್ಲಿ ಜ್ಯೋತಿಷ್ಯ ಕಾರ್ಯಕ್ರಮ ನಡೆಸಿಕೊಡುವ ಡಾ.ಆನಂದ್ ಗುರೂಜಿ  ಭಕ್ತಾದಿಗಳು ಕೇಳಿದ ಪ್ರಶ್ನೆ-ಸಮಸ್ಯೆಗಳಿಗೆ ಪರಿಹಾರ ನೀಡಿದರು.
ಸಂಪಾದಕ ಎಂ.ಎಸ್.ಸುರೇಶ್ ಕುಮಾರ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ವಿ.ರವೀಂದ್ರ, ತಮಿಳುನಾಡಿನ ಸೆಂಗುಂದರ್ ಸಂಘದ ಮಣಿ, ತಾಲೂಕು ಸೆಂಗುಂದರ್ ಸಂಘದ ಅಧ್ಯಕ್ಷ ದೇವರಾಜ್ ಇದ್ದರು.
ಪೂರ್ಣಕುಂಭ ಸ್ವಾಗತ: ಪಟ್ಟಣಕ್ಕೆ ಆಗಮಿಸಿದ ಡಾ.ಆನಂದಗುರೂಜಿ ಅವರನ್ನು ನೂರಾರು ಮಹಿಳೆಯರು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದರು. ಮಾರಿಕಾಂಬ ದೇಗುಲದಿಂದ ಸುಬ್ರಮಣ್ಯಸ್ವಾಮಿ ದೇಗುಲವರೆಗೆ ತೆರೆದ ಜೀಪಿನಲ್ಲಿ ಶ್ರೀಗಳನ್ನು ಕರೆ ತರಲಾಯಿತು.
ಬಿಬಿಎಂಪಿ ಹಿರಿಯ ಅಭಿಯಂತರ ಕೆ.ವೆಂಕಟೇಶ್, ದಾನಿ ನಾಗರಾಜ್, ರಾಮಪ್ಪ, ರವಿಚಂದ್ರ, ಬೆಮೆಲ್ ಗೋಪಾಲ್, ಕೃಷ್ಣಮೂರ್ತಿ, ಸೌಂದರ್, ನೂರಾರು ಮುಖಂಡರುಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement