ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಠದ ಮೇಲಿನ ಐಟಿ ದಾಳಿ ಖಂಡಿಸಿ ಪ್ರತಿಭಟನೆ

Srinivasa Murthy VN
Updated On : 4 Aug 2013, 12:27 pm

ಕ.ಪ್ರ.ವಾರ್ತೆ ಕೋಲಾರ ಆ.3
ಇತ್ತೀಚೆಗೆ ಬೆಂಗಳೂರಿನಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಆದಿ ಚುಂಚನಗಿರಿ ಮಠಕ್ಕೆ ಸೇರಿದ ಶಿಕ್ಷಣ ಸಂಸ್ಥೆ ಹಾಗೂ ಮಠದ ಕಚೇರಿಗಳ ಮೇಲೆ ನಡೆಸಿರುವ ದಾಳಿ ಹಾಗೂ ವಿಧಾನಸೌಧದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಭಾವಚಿತ್ರ ತೆರವುಗೊಳಿಸಿದ್ದ ಪ್ರಕರಣ ಖಂಡಿಸಿ ನಗರದಲ್ಲಿ ಒಕ್ಕಲಿಗ ಸಮುದಾಯ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟ ಒಕ್ಕಲಿಗ ಸಮುದಾಯದ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ,  ನಂತರ ಮೆಕ್ಕೆ ವೃತ್ತದಲ್ಲಿ ಮಾನವ ಸರಪಳಿ ರಚನೆ ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ರಾಜ್ಯಪಾಲರಿಗೆ ಮನವಿ ಕಳುಹಿಸಿಕೊಡುವಂತೆ ಒತ್ತಾಯಿಸಿದರು.
ರಾಜಕೀಯ ಪ್ರೇರಿತ: ರಾಜಕೀಯ ಪ್ರೇರಿತವಾಗಿ ಆದಿಚುಂಚನಗಿರಿ ಮಠದ ಕಚೇರಿ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳಿಂದ ದಾಳಿ ಮಾಡಿಸುವ ಮೂಲಕ ಒಕ್ಕಲಿಗರ ಸ್ವಾಭಿಮಾನಕ್ಕೆ ದಕ್ಕೆ ತರಲಾಗಿದೆ, ಅನೇಕ ವರ್ಷಗಳಿಂದ ವಿಧಾನಸೌಧದಲ್ಲಿದ್ದ ಮಾಜಿ ಪ್ರಧಾನಿ ದೇವೇಗೌಡರ ಭಾವಚಿತ್ರವನ್ನು ತೆಗೆಸಿದ್ದು ಮುಖ್ಯಮಂತ್ರಿಗಳಿಗೆ ಶೋಭೆ ತರುವುದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಶಕ್ತಿ ಪ್ರದರ್ಶನ: ಒಕ್ಕಲಿಗರ ಸಂಘ, ಕೆಂಪೇಗೌಡ ಜಯಂತಿ ಸಮಿತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಮುಖಂಡರು ವಿವಿಧ ಶಾಲಾ-ಕಾಲೇಜುಗಳಿಗೆ ಹೋಗಿ ವಿದ್ಯಾರ್ಥಿಗಳನ್ನು ಕರೆ ತರುವ ಮೂಲಕ ಶಕ್ತಿ ಪ್ರದರ್ಶಿಸಿದರು.
ದೌರ್ಜನ್ಯ ಸಲ್ಲ: ಒಕ್ಕಲಿಗ ಸಂಘದ ಮುಖಂಡ, ಹಿರಿಯ ವಕೀಲ ಕೆ.ವಿ.ಶಂಕರಪ್ಪ ಮಾತನಾಡಿದರು.
ಹುನ್ನಾರ: ತುಮಕೂರು ಜಿಲ್ಲಾ ಶಿರಾ ತಾಲೂಕಿನ ಮಿಟ್ಟನಾಯಕನಹಳ್ಳಿಯಲ್ಲಿರುವ ಒಕ್ಕಲಿಗ ಜನಾಂಗಕ್ಕೆ ಸೇರಿದ ನಂಜಾವಧೂತ ಮಠದ ಜಮೀನು  ಕಬಳಿಸುವ ಹುನ್ನಾರ ನಡೆಯುತ್ತಿದೆ. ಈ ಹುನ್ನಾರ ಒಕ್ಕಲಿಗ ಜನಾಂಗದ ಮೇಲೆ ನಡೆಯುತ್ತಿರುವ ನೇರ ದಾಳಿ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಒಕ್ಕಲಿಗ ಸಮುದಾಯದ ಮುಖಂಡರಾದ ವಿ. ಕೃಷ್ಣಾರೆಡ್ಡಿ, ನಂಜುಂಡೇಗೌಡ, ಯಲುವಳ್ಳಿ ರಮೇಶ್, ಬಿಸಪ್ಪಗೌಡ, ವಕ್ಕಲೇರಿ ರಾಮು, ಉರಿಗಿಲಿ ರುದ್ರಸ್ವಾಮಿ, ವಡಗೂರು ನಾಗರಾಜ್, ಕಾಡೇನಹಳ್ಳಿ ನಾಗರಾಜ, ಆ.ಮು.ಲಕ್ಷ್ಮೀನಾರಾಯಣ, ವೆಂಕಟೇಶಪ್ಪ, ಕೆ.ಬಿ.ಗೋಪಾಲಕೃಷ್ಣ, ರಾಮಕೃಷ್ಣಪ್ಪ, ಮುನಿರೆಡ್ಡಿ, ನಾರಾಯಣಸ್ವಾಮಿ, ಎಸ್.ಆರ್. ಮುರಳಿಗೌಡ, ಬಿ.ಸುರೇಶ್‌ಗೌಡ, ರಮೇಶ್, ಮಂಜುನಾಥ್, ಕಿಶೋರ್ ಮತ್ತಿತರರು ಪ್ರತಿಭಟನೆ ನೇತೃತ್ವವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement