ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಹಂದಿ ಹಾವಳಿ ತಡೆಗೆ ಪುರಸಭೆ ಕ್ರಮ

Srinivasa Murthy VN
Updated On : 4 Aug 2013, 12:27 pm

ಶ್ರೀನಿವಾಸಪುರ: ಪಟ್ಟಣದಲ್ಲಿ ಹಂದಿಗಳ ಹಾವಳಿ ಬಗ್ಗೆ ಬಂದ ದೂರಿನನ್ವಯ ಸಮಾಲೋಚನೆ ನಡೆಸಲು ಪುರಭವನದಲ್ಲಿ ಕರೆದಿದ್ದ ಸಭೆಗೆ ಹಂದಿ ಸಾಕಣೆದಾರರು ಹಾಜರಾಗದ ಕಾರಣ ಪುರಸಭಾ ಕಾಯ್ದೆ 1964 ಪ್ರಕರಣದ 223 ರಂತೆ ಬೀದಿಗಳಲ್ಲಿ ಓಡಾಡುವ ಹಂದಿಗಳನ್ನು ನಾಶಪಡಿಸುವ ಬಗ್ಗೆ ಪುರಸಭೆ  ತೀರ್ಮಾನ ಕೈಗೊಂಡಿದೆ.
ಪಟ್ಟಣದ ರಾಮಕೃಷ್ಣ ಬಡಾವಣೆ, ವೆಂಕಟೇಶ್ವರ ಬಡಾವಣೆ, ಜಾಕಿರ್ ಹುಸೇನ್ ಮೊಹಲ್ಲಾ, ಗಫಾರ್‌ಖಾನ್ ಮೊಹಲ್ಲಾ, ಹಾಗೂ ಇನ್ನು ಇತರೆ ಬಡಾವಣೆಗಳಲ್ಲಿ ಹಗಲಿರಳು ಯಥೇಚ್ಚವಾಗಿ ಹಂದಿ ಗುಂಪು ಗುಂಪುಗಳಾಗಿ ಓಡಾಡುತ್ತಾ ವಾಸದ ಮೆನಗಳ ಸಂದಿಗೊಂದಿಗಳಲ್ಲಿ ಚರಂಡಿಗಳಲ್ಲಿನ ನೀರಿನಲ್ಲಿ ಮುಳುಗಿ ಎದ್ದು ಬಂದು ರಸ್ತೆಗಳಲ್ಲಿನ ಸ್ವಚ್ಛತೆ ಮಲೀನಗೊಳಿಸಿ ಮಕ್ಕಳಿಗೆ ಮತ್ತು ಮುದಕರಿಗೆ ನಾನಾ ರೀತಿ ರೋಗ ರುಜುನಿಗಳನ್ನುಂಟು ಮಾಡುತ್ತಿವೆ.
ಈ ನಿಟ್ಟಿನಲ್ಲಿ ಹಂದಿ ಸಾಕುವವರು ಪಟ್ಟಣದಿಂದ 5 ಕಿಲೋ ಮೀಟರಗಳಷ್ಟು ದೂರ ಆಚೆಗೆ ಸಾಗಿಸಿ ಸಾಕಾಣಿಕೆಯನ್ನು ಮಾಡಲು ಹಲವು ರೀತಿಯ ಕ್ರಮಗಳ ಬಗ್ಗೆ ಪುರಸಭೆ ಕೈಗೊಂಡಿದೆ ಈ ನಿಟ್ಟಿನಲ್ಲಿ ಇದನ್ನು ಅನುಸರಿಸಿಬೇಕಿದೆ. ಹಾಹಾಗಿ, ಇನ್ನು ಮುಂದೆ ಹಂದಿಗಳು ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡಿದರೆ ಪುರಸಭಾ ಕಾಯ್ದೆ 1964ರ ಪ್ರಕರಣದ 223 ರಂತೆ ಸಾಯಿಸಿ ನಾಗ ಪಡಿಸುವುದಾಗಿ ತಿರ್ಮಾನಗಳನ್ನು ತೆಗೆದುಕೊಂಡಿರುವುದಾಗಿ ತಿಳಿದು ಬಂದಿದೆ.

ಸೋಮಾರಿತನದಿಂದ ವಿದ್ಯೆ ಬುದ್ಧಿ ನಾಶ:  ಶ್ರೀರಾಮಯ್ಯ
ಗುಡಿಬಂಡೆ: ಸೋಮಾರಿತನದಿಂದ ವಿದ್ಯೆ ಮತ್ತು ಬುದ್ಧಿ ನಾಶ. ಈ  ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದಿಸೆಯಲ್ಲಿ ಆಲಸಿಗಳಾಗದೆ ವಿದ್ಯೆಯೆಡೆಗೆ ಸಂಪೂರ್ಣ ಗಮನವಿಟ್ಟು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಗುತ್ತಿಗೆದಾರ ಶ್ರೀರಾಮಯ್ಯ ಕಿವಿಮಾತು ಹೇಳಿದ್ದಾರೆ. ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ತಟ್ಟೆ ಮತ್ತು ಲೋಟಗಳನ್ನು ವಿತರಿಸಿ ಅವರು ಮಾತನಾಡಿದರು.
ವಿದ್ಯೆ ಅಪಹರಿಸಲಾಗದ ಸೊತ್ತು: ವಿದ್ಯೆ ಎಂಬುದು ಯಾರಿಂದಲೂ ಅಪಹರಿಸಲಾಗದ ಸೊತ್ತು. ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಬೇಕಾದರೆ ಶ್ರದ್ಧೆಯಿಂದ ವಿದ್ಯೆ ಮತ್ತು ಜ್ಞಾನ ಗಳಿಸಬೇಕು. ಪ್ರಾಮಾಣಿಕತೆ ಶಿಸ್ತು ರೂಢಿಸಿಕೊಂಡಾಗ ಮಾತ್ರ ಅಭಿವೃದ್ಧಿ ಸಾಧ್ಯವೆಂದು  ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಅವರು ಶಾಲೆಗೆ ಸುಮಾರು 400 ತಟ್ಟೆ ಲೋಟಗಳನ್ನು ಉಚಿತವಾಗಿ ವಿತರಿಸಿದರು.
ದಾನಿಗಳ ನೆರವು ಅತ್ಯಗತ್ಯ: ಬಿಇಒ ರವಿಕುಮಾರ್ ಮಾತನಾಡಿ, ಸರ್ಕಾರಿ ಶಾಲೆಗಳು ಉತ್ತಮ ಸಾಧನೆ ತೋರಲು ಸಾರ್ವಜನಿಕರ ಪಾತ್ರ ಅಗತ್ಯ ಶಾಲೆಗಳಲ್ಲಿ ಮೂಲಭೂತ ಸೌಲಭ್ಯ, ವಿದ್ಯಾರ್ಥಿಗಳ ಯೋಗಕ್ಷೇವು ಮುಂತಾದ ವಿಚಾರಗಳಲ್ಲಿ ದಾನಿಗಳ ನೆರವು ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಶಾಲೆಗೆ ನೆರವು ನೀಡುವಂತೆ ದಾನಿಗಳನ್ನು ಪ್ರೇರೇಪಿಸಬೇಕು ಎಂದರು.
ಶಿಕ್ಷಣ ಪ್ರೇಮಿ ಅಶ್ವತ್ಥನಾರಾಯಣ್, ಶಾಲೆಗೆ ಬೇಕಾದ ವ್ಯವಸ್ಥೆ ಮಾಡಿ ಕೊಡುವುದಾಗಿ ನುಡಿದರು.
ಮುಖ್ಯ ಶಿಕ್ಷಕ ನಾರಾಯಣಸ್ವಾಮಿ, ಸಹ ಶಿಕ್ಷಕ ಸಿಬ್ಬಂದಿ ಮತ್ತಿತರಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement