ತಾಪಂ ಮುಂದೆ ಜಾನುವಾರ ಸಮೇತ ಧರಣಿ
ಶ್ರೀನಿವಾಸಪುರ: ತಾಲೂಕಿನ ತಾಡಿಗೋಳ್ ಪಂಚಾಯ್ತಿಯ ಮರಿಪಲ್ಲಿ ಗ್ರಾಮದಲ್ಲಿನ ಬೋವಿ ಸಮುದಾಯದವರು ನಿವೇಶನಕ್ಕೆ ಹೋಗಿಬರಲು ದಾರಿ ಇಲ್ಲದೆ ಇರುವ ಕಾರಣದಿಂದ ದಾರಿಯನ್ನು ಮಾಡಿಕೊಡುವಂತೆ ಒತ್ತಾಯಿಸಿ ಗ್ರಾಮದ 2-3 ಕುಟುಂಬದವರು ಕುರಿ, ಮೇಕೆ, ಎತ್ತು, ಎಮ್ಮೆಗಳ ಸಮೇತ ತಾಪಂ ಮುಂದೆ ಧರಣಿ ನಡೆಸಿದ ಪ್ರಸಂಗ ಗುರುವಾರ ಜರುಗಿದೆ.
ತಾಲೂಕಿನ ಮರಿಪಲ್ಲಿ ಗ್ರಾಮದ ರಾಮಪ್ಪ ಮತ್ತು ಗಟ್ಟಪ್ಪ ಎಂಬುವರಿಗೆ 1993 ರಲ್ಲಿ ಲಕ್ಷ್ಮೀಪುರ ಮಂಡಲ್ ಪಂಚಾಯ್ತಿಯಲ್ಲಿ 30್ಢ40 ಅಡಿಗಳುಳ್ಳ ನಿವೇಶನಕ್ಕೆ ದಾಖಲಾತಿಗಳನ್ನು ಮತ್ತು ಮನೆ ನಿರ್ಮಾಣಕ್ಕೆ ಲೈಸನ್ಸ್ಸಹ ನೀಡಿತ್ತು. ಆದರೆ ಈ ಸದರಿ ನಿವೇಶನದ ಪಕ್ಕದಲ್ಲಿ 6 ಅಡಿಗಳ ರಸ್ತೆಯು ಇದ್ದು ಇದೇ ಗ್ರಾಮದ ವೆಂಕಟಮ್ಮ ಎಂಬುವರು ಆಕ್ರಮವಾಗಿ ನಕಲಿಯಾಗಿ ಈಗಿರುವ ಪಂಚಾಯ್ತಿಯಲ್ಲಿ ಖಾತೆಯನ್ನು ಮಾಡಿಕೊಂಡು ರಸ್ತೆಗೆ ಅಡ್ಡವಾಗಿ ಕಲ್ಲು ಚಪ್ಪಡಿಗಳನ್ನು ನೆಟ್ಟಿದ್ದರಿಂದ ಗ್ರಾಮದಲ್ಲಿ ಘರ್ಷಣೆಗಳುಂಟಾಗಿದ್ದವು. ಈ ಬಗ್ಗೆ ಪೊಲೀಸ್ ಠಾಣೆ, ಕೋರ್ಟ್ವರೆಗೂ ಪ್ರಕರಣ ಹೋಗಿದೆ.
ಸ್ಥಳಕ್ಕೆ ಆಗಮಿಸಿದ ಕಾರ್ಯನಿರ್ವಹಣಾಧಿಕಾರಿ ಸತೀಶಕುಮಾರ್ ಎರಡು ಕಡೆಯವರ ಸಮಸ್ಯೆಯನ್ನು ಆಲಿಸಿ ವೆಂಕಟಮ್ಮನ ಕಡೆಯವರಿಗೆ ಕೋರ್ಟ್ನಲ್ಲಿ ತಡೆಯಾಜ್ಞೆಯಾಗಿರುವುದಾಗಿ ತಿಳಿಸಿ, ಧರಣಿ ಹಿಂತೆಗೆದುಕೊಂಡು ವಾಪಾಸ್ಸಾಗುವಂತೆ ತಿಳಿಸಿದಾಗ ಪ್ರತಿಭಟನಾಕಾರರು ಮನೆಗಳಿಗೆ ವಾಪಸ್ಸಾದರು.
ವಿಪ್ರ ಬಾಂಧವರಿಂದ ಶ್ರದ್ದಾ ಭಕ್ತಿಯಿಂದ ಉಪಾಕರ್ಮ
ಗೌರಿಬಿದನೂರು: ಸ್ವಾತಂತ್ರ ಹೋರಾಟಗಾರ ಮುದುಗೆರೆ ನಂಜಪ್ಪ ಅವರ ನೇತೃತ್ವದಲ್ಲಿ ಹೊಸೂರಿನ ಗಾಯತ್ರಿ ಮಂದಿರದಲ್ಲಿ ಋಗ್ವೇದ ಹಾಗೂ ಯಜುರ್ವೇದ ಉಪಾಕರ್ಮ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರದ್ಧಾ, ಭಕ್ತಿಯಿಂದ ವಿಪ್ರ ಭಾಂಧವರು ನೆರವೇರಿಸಿದರು.
ಪುರೋಹಿತರಾದ ರಾಮಮೂರ್ತಿ ಶಾಸ್ತ್ರಿ, ರಮೇಶ್ ಶಾಸ್ತ್ರಿ ಅವರು ಕಾರ್ಯಕ್ರಮ ನಡೆಸಿಕೊಟ್ಟರು. ಹೋಮ ಹವನಾದಿ ಧಾರ್ಮಿಕ ಕಾರ್ಯಕ್ರಮ ನಡೆಸಲಾಯಿತು.