ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಾಲೂರಲ್ಲಿ ವಿಜಯೋತ್ಸವ

Srinivasa Murthy VN
Updated On : 25 Aug 2013, 12:35 pm

ಕ.ಪ್ರ.ವಾರ್ತೆ ಮಾಲೂರು ಆ. 24
ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭೂತವೂರ್ವ ವಿಜೇಯ ಸಾಧಿಸಿದ ಹಿನ್ನೆಲೆಯಲ್ಲಿ ತಾಲೂಕು ಕಾಂಗ್ರೆಸ್ ಘಟಕ ಪಟ್ಟಣದಲ್ಲಿ ವಿಜಯೋತ್ಸವ ಆಚರಿಸಿತ್ತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿರಾಜು, ಚೆನ್ನರಾಯಪ್ಪ ನೇತೃತ್ವದಲ್ಲಿ ಇಲ್ಲಿನ ಬಸ್ ನಿಲ್ದಾಣ ಬಳಿಯ ಮಾರಿಕಾಂಭ ಮಹಾದ್ವಾರದ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.ಈ ಸಂಧರ್ಭದಲ್ಲಿ ಮಾತನಾಡಿದ ಬಂಗಾರ ಪೇಟೆ ಶಾಸಕ ಎಸ್.ನಾರಾಯಣಸ್ವಾಮಿ ಮಾತನಾಡಿ ಇಂದಿನ ಗೆಲವು ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದ್ದು, ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮುಂದಿನ ಲೋಕಸಭೆಯಲ್ಲಿ ರಾಜ್ಯದ ಎಲ್ಲ 28 ಸ್ಥಾನಗಳನ್ನು ಗೆಲ್ಲಲಿದ್ದೇವಿ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೆನ್ನರಾಯಪ್ಪ ಮಾತನಾಡಿ ಅಧಿಕಾರ ದಾಹಿ ಜೆಡಿಎಸ್ ಹಾಗೂ ಬಿಜೆಪಿಯ ಅಪವಿತ್ರ ಮೈತ್ರಿಯನ್ನು ಮತದಾರರ ಸಾರಸಗಟಾಗಿ ತಿರಸ್ಕರಿಸಿದ್ದು, ನುಡಿದಂತೆ ನಡಿಯುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸಿದ್ದಾರೆ. ಈ ಗೆಲವಿನ ನಾಗಲೋಟ ಮುಂದಿನ ಲೋಕಸಭೆಯಲ್ಲೂ ಮುಂದುವರೆಯಲಿದ್ದು, ಸೋನಿಯಾ ಗಾಂಧೀ ನೇತೃತ್ವದಲ್ಲಿ ಕೇಂದ್ರದಲ್ಲಿ ಮತ್ತೇ ಕಾಂಗ್ರೆಸ್ ನೇತೃತ್ವದ ಸರ್ಕಾರ ಬರಲಿದೆ ಎಂದರು. ಬ್ಲಾಕ್ ಕಾಂಗ್ರೆಸ್‌ನ ಇನ್ನೊಬ್ಬ ಅಧ್ಯಕ್ಷ ಮುನಿರಾಜು, ಕೆ.ಪಿ.ಸಿ.ಸಿ. ಸದಸ್ಯ ರಘುನಾಥ್ ಇತರರು ಮಾತನಾಡಿದರು. ಯುವ ಕಾಂಗ್ರೆಸ್ ಅಧ್ಯಕ್ಷ ಲೋಕೇಶ್, ಅಂಜನಿ ಸೋಮಣ್ಣ, ರಾಜಗೋಪಾಲ್ ರೆಡ್ಡಿ, ಗುಂಡಣ್ಣ, ಮೋಹನ್ ಕೃಷ್ಣ, ಶಶಿಧರ್, ಟಿ.ಬಿ.ಕೃಷ್ಣಪ್ಪ, ಶಬೀರ್, ಪ್ರವೀಣ್, ವೆಂಕಟಸ್ವಾಮಿ,ಚಲಪತಿ,ಆಶೋಕ್ ಕುಮಾರ್ ಇದ್ದರು.

ಜಿಲ್ಲಾ ಬಿಜೆಪಿ ಟೀಂ ಪ್ರಕಟ
ಕೋಲಾರ: ಜಿಲ್ಲೆಯ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಘಟಕಕ್ಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮಾಗೇರಿ ಎಂ.ಪಿ.ನಾರಾಯಣ ಸ್ವಾಮಿ, ಟಿ.ಎನ್. ನರಸಿಂಹರಾಜು, ನಾಗಪ್ರಕಾಶ್ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾಧ್ಯಕ್ಷ ಎಸ್. ಕೃಷ್ಣಾರೆಡ್ಡಿ ತಿಳಿಸಿದ್ದಾರೆ. ಜಿಲ್ಲಾ ಉಪಾಧ್ಯಕ್ಷರಾಗಿ ಮಾಲೂರು ತಬ್ಬಲ ನಾರಾಯಣಪ್ಪ, ಮುಳಬಾಗಿಲು ಪಲ್ಲಿಪಾಳ್ಯ ವೆಂಕಟೇಶ್, ಬಂಗಾರಪೇಟೆ ವಿಜಯಲಕ್ಷ್ಮಮ್ಮ, ಲಕ್ಷ್ಮಣಗೌಡ, ಹೂಹಳ್ಳಿ ಚಲಪತಿ, ಗುಟ್ಲೂರು ಮಂಜುನಾಥ್, ವಿಜಯ್ಕುಮಾರ್. ಜಿಲ್ಲಾ ಕಾರ್ಯದರ್ಶಿಗಳಾಗಿ  ಮುನಿಶಾಮಿರೆಡ್ಡಿ, ರಾಘವೇಂದ್ರ, ಗೋಪಾಲಗೌಡ, ಕೃಷ್ಣಾರೆಡ್ಡಿ, ಸುಧಾಕರ್, ಮಮತ, ವಿಜಯ್‌ಕುಮಾರ್, ಹಾರೋಹಳ್ಳಿ ನಾರಾಯಣಸ್ವಾಮಿ, ಜಿಲ್ಲಾ ಖಜಾಂಚಿಯಾಗಿ ಡಿ.ಆರ್. ನಾಗರಾಜ್, ಜಿಲ್ಲಾ ವಕ್ತಾರರಾಗಿ ಮಹೇಶ್‌ಬಾಬು ಆಯ್ಕೆಯಾಗಿದ್ದಾರೆ. ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾಗಿ ಕೆಂಬೋಡಿ ನಾರಾಯಣ ಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ಬಣಿ ನಾಗರಾಜು, ಮುನಿಯಪ್ಪ. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ, ನಿರ್ಮಲಮ್ಮ, ಪ್ರಧಾನ ಕಾರ್ಯದರ್ಶಿಗಳಾಗಿ ದೇವಿಕಾ, ಉಮಾದೇವಿ. ಜಿಲ್ಲಾ ಎಸ್.ಸಿ. ಮೋರ್ಚಾ ಆರ್.ಜಿ. ನಾಗರಾಜ್, ಪ್ರಧಾನಕಾರ್ಯದರ್ಶಿಯಾಗಿ ಮುರಳಿ, ಶಂಕರಪ್ಪ, ಜಿಲ್ಲಾ ಎಸ್.ಟಿ ಅಧ್ಯಕ್ಷರಾಗಿ ತಿಮ್ಮರಾಯಪ್ಪ, ಪ್ರಧಾನಕಾರ್ಯದರ್ಶಿಗಳಾಗಿ ಹರಿ, ತಿಮ್ಮರಾಯಪ್ಪ ತನಿಮಡಗು.
ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿ ಪ್ರಮೋಧ್, ಪ್ರಧಾನಕಾರ್ಯದರ್ಶಿಯಾಗಿ ಶ್ರೀನಾಥ, ನರೇಶ್. ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿ ಕೀಲ್‌ಕೊಪ್ಪ ಶ್ರೀನಿವಾಸ, ಪ್ರಧಾನಕಾರ್ಯದರ್ಶಿಯಾಗಿ ಚಂದ್ರಶೇಖರ್, ಪದ್ಮನಾಭ್. ಜಿಲ್ಲಾ ಸ್ಲಂ ಮೋರ್ಚಾ ಅಧ್ಯಕ್ಷರಾಗಿ ಸಾಹುಕಾರ್ ಶಂಕರಪ್ಪ. ಕೋಲಾರ ಮಂಡಲ ಅಧ್ಯಕ್ಷರಾಗಿ ಜಯಂತಿಲಾಲ್, ಪ್ರಧಾನಕಾರ್ಯದರ್ಶಿಗಳಾಗಿ ಸಾಮ ಅನಿಲ್‌ಕುಮಾರ್, ಕಂಟ್ರಾಕ್ಟರ್‌ಸುರೇಶ್‌ಕುಮಾರ್. ಕೋಲಾರ ಗ್ರಾಮಾಂತರ ಅಧ್ಯಕ್ಷರಾಗಿ ಚಿನ್ನಪುರ ನಾರಾಯಣ ಸ್ವಾಮಿ, ಪ್ರಧಾನಕಾರ್ಯದರ್ಶಿಯಾಗಿ ವೆಂಕಟರೆಡ್ಡಿ, ಓಹೀಲೇಶ್ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಯರ ಉತ್ತರಾಧನೆ
ಮಾಲೂರು: ಪಟ್ಟಣದ ರಾಘವೇಂದ್ರ ಮಠದಲ್ಲಿ ತಾಲೂಕು ಬ್ರಾಹ್ಮಣರ ಸಂಘ ಏರ್ಪಡಿಸಿದ್ದ ಗುರುಸಾರ್ವಭೌಮ ರಾಘವೇಂದ್ರ ಸ್ವಾಮಿಗಳ 342ನೇ ಆರಾಧನಾ ಮಹೋತ್ಸವದ ಅಂಗವಾಗಿ ಶುಕ್ರವಾರ ಉತ್ತರಾಧನೆ ನಡೆಯಿತು. ಆರಾಧನಾ ಮಹೋತ್ಸವದ ಅಂಗವಾಗಿ ಗುರುಗಳ ಬೃಂದಾವನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸ್ವಾಮಿಗಳ ವಿಗ್ರಹಕ್ಕೆ ಕನಕಾಭಿಷೇಕ ನಡೆಯಿತು. ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ ನಡೆಯಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಜನೆ ನಡೆಯಿತು. ಸಂಘದ ಅಧ್ಯಕ್ಷ ನಾಗರಾಜ್‌ರಾವ್, ಶೇಖರ್, ಚಂದ್ರಶೇಖರ್, ಅಂಜನಾ ಕುಮಾರ್, ಪ್ರಸನ್ನ, ವೆಂಕಟರಾವ್, ಭದ್ರಿನಾಥ್, ಮಂಜುನಾಥ್, ಜೈರಾವ್, ಆನಂದ್ ಚಾರ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement