ವಸತಿ ನಿಲಯ, ಕಚೇರಿಗಳಿಗೆ ಜಿ.ಪಂ. ಅಧ್ಯಕ್ಷರ ದಿಢೀರ್ ಭೇಟಿ, ಪರಿಶೀಲನೆ
ಬಂಗಾರಪೇಟೆ: ಕೋಲಾರ ಜಿಲ್ಲಾ ಪಂಚಾಯ್ತಿ ಹಂಗಾಮಿ ಅಧ್ಯಕ್ಷ ನಾಗರಾಜ್ ಅವರು ಶನಿವಾರ ದಿಢೀರನೆ ಪಟ್ಟಣದ ಹಲವು ಕಚೇರಿಗಳಿಗೆ ಹಾಗೂ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಇಲ್ಲಿನ ಕೃಷಿ ಇಲಾಖೆ ಕಚೇರಿಗೆ ತೆರಳಿದ ಅಧ್ಯಕ್ಷರು ಇಲಾಖೆಯಲ್ಲಿ ರೈತರಿಗೆ ಸರ್ಕಾರಿಂದ ಬಂದಿರುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು ನಂತರ ಅದು ಸಮರ್ಪಕವಾಗಿ ಫಲಾನುಭವಿಗಳಿಗೆ ಸಂದಿದೆಯೇ ಎಂಬ ಬಗ್ಗೆ ಸುಮಾರು ಅರ್ಧಗಂಟೆ ಅಧಿಕಾರಿ ಕೃಷ್ಣಪ್ಪರಿಂದ ಮಾಹಿತಿ ಪಡೆದುಕೊಳ್ಳುವ ವೇಳೆ ಕಳೆದ ಸಾಲಿನಲ್ಲಿ ಎಸ್ಸಿಪಿ ಯೋಜನೆಯಲ್ಲಿ ವಿವಿಧ ಯೋಜನೆಯಲ್ಲಿ ಫಲಾನುಭವಿಗಳಿಗೆ ಮಂಜೂರಾಗಿದ್ದ ಸುಮಾರು 6.75ಲಕ್ಷದ ಹಣದ ಬಿಲ್‌ಗಳನ್ನು ಉಪ ಖಜಾನೆಗೆ ಕಳುಹಿಸಿದ್ದು ಅದು ಅಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಎಲ್ಲಾ ಬಿಲ್ಗಳು ಕಳೆದುಹೋಗಿದ್ದರಿಂದ ಅಷ್ಟೂ ಮೊತ್ತದ ಹಣ ಲ್ಯಾಪ್ಸ್ ಆಗಿದೆ ಎಂದು ಅಧಿಕಾರಿ ಕೃಷ್ಣಪ್ಪ ಅಧ್ಯಕ್ಷರಿಗೆ ತಿಳಿಸಿದರು. ಇದರಿಂದ ಅಸಮಾಧಾನಗೊಂಡ ಅಧ್ಯಕ್ಷರು ನಿಮ್ಮ ಬೇಜವಾಬ್ದಾರಿಯಿಂದ ಫಲಾನುಭವಿಗಳಿಗೆ ನಷ್ಟ ಉಂಟಾಗಿದೆ ಎಂದು ತರಾಟೆಗೆ ತೆಗೆದುಕೊಂಡರು. ಸಮಯಕ್ಕೆ ಗುಣಮಟ್ಟದ ಆಹಾರ ಮಕ್ಕಳಿಗೆ ಸಿಗುತ್ತಿದೆಯೇ ಎಂದು ಮಕ್ಕಳಿಂದಲೇ ಅಧ್ಯಕ್ಷ ನಾಗರಾಜ್ ಮಾಹಿತಿ ಪಡೆದುಕೊಂಡರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಬಯಸದೇ ಸಿಕ್ಕಿರುವ ಹಂಗಾಮಿ ಅಧ್ಯಕ್ಷ ಸ್ಥಾನವನ್ನು ಉಪಯೋಗಿಸಿಕೊಂಡು ರೈತರಿಗೆ ತೊಂದರೆಯಾಗದಂತೆ ಸರ್ಕಾರ ಹಣ ಸದ್ಬಳಕೆಯಾಗಬೇಕೆಂದು ಅನಿರೀಕ್ಷಿತವಾಗಿ ಎಲ್ಲಾ ಕಡೆ ದಾಳಿ ಮಾಡುತ್ತಿರುವೆ ಎಂದರು.
ಕೆಜಿಎಫ್‌ನಲ್ಲಿ ಪ್ರತಿಭಟನೆ
ಕೆಜಿಎಫ್: ಪತ್ರಿಕಾ ಛಾಯಾಗ್ರಾಹಕಿ ಮೇಲೆ ನಡೆದಿರುವ ಅಮಾನುಷ ಅತ್ಯಾಚಾರ ಪ್ರಕರಣವನ್ನು ತೀವ್ರವಾಗಿ ಖಂಡಿಸಿ ಅತ್ಯಾಚಾರ ವೆಸಗಿದ ಆರೋಪಿಗಳ ವಿರುದ್ಧ ಕೂಡಲೇ ನಿದ್ರಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕೆಜಿಎಫ್ ಕಾರ್ಯನಿರತ ಪತ್ರಕರ್ತರ ಸಂಘದಲ ಕಾರ್ಯಕರ್ತರು ಶನಿವಾರ ಸಂಜೆ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಪತ್ರಕರ್ತರು ಸೂರಜ್‌ಮುಲ್ ವೃತ್ತದಲ್ಲಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ಥಂಭವಾದ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹ ರೀತಿಯಲ್ಲಿ ಪತ್ರಕರ್ತರ ಮೇಲೆ ದಿನೇ ದಿನೇ ದೌರ್ಜನ್ಯಗಳು, ಹಲ್ಲೆಗಳು, ಹತ್ಯೆಗಳು ಅಮಾನವೀಯ ರೀತಿಯಲ್ಲಿ ನಡೆಯುತ್ತಿದ್ದು ಪತ್ರಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆರೋಪಿಸಿದರು. ಪತ್ರಕರ್ತರಿಗೆ ಸೂಕ್ತ ರಕ್ಷಣೆಯನ್ನು ಒದಗಿಸಬೇಕು ಮತ್ತು ಅವರ ಮೇಲೆ ಅನಗತ್ಯವಾಗಿ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆಗಳನ್ನು ಕೂಡಲೇ ತಡೆಯಬೇಕು ಎಂದು ಆಗ್ರಹಿಸಿ ರಾಷ್ಟ್ರಪತಿಗಳಿಗೆ ಮನವಿ ಪತ್ರವನ್ನು ಕೆಜಿಎಫ್ ಪೊಲೀಸ್ ರಕ್ಷಣಾಧಿಕಾರಿ ಡಾ. ರೋಹಿಣಿಕಟೋಚ್ ಸೆಪಟ್ ಅವರಿಗೆ ಸಲ್ಲಿಸಲಾಯಿತು.
ಶ್ರೀಧರ್‌ಪಿಲೈ, ಕೃಷ್ಣಮೂರ್ತಿ, ಶ್ರೀಕಾಂತ್, ವೇಲಾಯುದಂ, ಗೋಪಿನಾಥ್, ಹಸ್ಮುಖ್‌ಜೈನ್, ಶಿವಶಂಕರ್, ಪುರುಷೋತ್ತಮ, ಪ್ರಕಾಶ್, ದೋರೈಅರಸು, ಕ್ರಾಂತಿ ಚಂದ್ರು, ಗೋಪಿನಾಥ್, ಸುದರ್ಶನ್, ಸತೀಶ್, ತ್ಯಾಗರಾಜ್, ರಜನೀಕಾಂತ್, ಸತ್ಯನಾರಾಯಣ, ಮುರಳೀಧರ್‌ರಾವ್,ರಾಜ. ಭಾಸ್ಕರನ್, ಭರಣಿಪ್ರಕಾಶ್, ತಂಗಗಣೇಶ್, ಮಲರ್‌ಶೇಖರ್, ನಂದಕುಮಾರ್ ಹಾಜರಿದ್ದರು.