ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಸಾಮಾಜಿಕ ಭದ್ರತೆ ಅರ್ಹರಿಗೆ ತಲುಪಲಿ'

Srinivasa Murthy VN
Updated On : 25 Aug 2013, 12:32 pm

ಮುಳಬಾಗಲು: ಸಾಮಾಜಿಕ ಭದ್ರತೆ ಯೋಜನೆಗಳಾದ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ ಮುಂತಾದ ಯೋಜನೆಗಳು ಅರ್ಹರಿಗೆ ತಲುಪುವಂತೆ ಮಾಡಲು ಅಧಿಕಾರಿಗಳು ಶ್ರಮಿಸಬೇಕು ಎಂದು ಕೋಲಾರ ಜಿಲ್ಲಾ ಸಾಮಾಜಿಕ ಭದ್ರತೆ ಸಹಾಯಕ ನಿರ್ದೇಶಕ ಎ. ಆರೋಗ್ಯಸ್ವಾಮಿ ನುಡಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಶುಕ್ರವಾರ ನಡೆದ ಸಾಮಾಜಿಕ ಭದ್ರತೆ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರುವ ಕುರಿತು ನಡೆದ ಸಭೆಯಲ್ಲಿ ಮಾತನಾಡಿ, ಸಾಮಾಜಿಕ ಭದ್ರತೆ ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ ಎಂದರು.
ಸಾಮಾಜಿಕ ಭದ್ರತೆ ಯೋಜನೆಯಲ್ಲಿ ಅರ್ಜಿ ಪಡೆಯುವ ಕಂಪ್ಯೂಟರ್ ಆಪರೇಟರ್‌ಗಳು ಪ್ರಥಮ ಹಂತದಲ್ಲಿಯೇ ಅಗತ್ಯ ದಾಖಲೆಗಳನ್ನು ಪಡೆಯಬೇಕು, ಫಲಾನುಭವಿಗಳು ಸ್ವತಃ ಬಂದು ಅರ್ಜಿ ಸಲ್ಲಿಸಬೇಕು, ಮಧ್ಯವರ್ತಿಗಳನ್ನು ದೂರವಿಡಬೇಕು.
 ನಂತರ ಹಂತದಲ್ಲಿ ಕಂದಾಯ ಇಲಾಖೆಯವರು ವೇತನ ನೀಡಲು ಫಲಾನುಭವಿಗಳ ಹಿನ್ನೆಲೆಯನ್ನು ಪರಿಶೀಲಿಸಿ ವರದಿ ನೀಡಬೇಕು ಎಂದರು.
ಜಿಲ್ಲಾ ಸಂಖ್ಯಾಧಿಕಾರಿ ವಿ. ಶಂಕರನಾರಾಯಣ್, ತಹಸೀಲ್ದಾರ್ ಡಿ.ವಿ. ರಾಮಮೂರ್ತಿ, ಸಂಖ್ಯಾ ಇಲಾಖೆಯ ವೆಂಕಟರವಣಪ್ಪ ಉಪ ತಹಸೀಲ್ದಾರ್ ಅನಂದ್, ವೆಂಕಟೇಶ್. ಬಲರಾಮಚಂದ್ರೇಗೌಡ, ವಿಜಯಕುಮಾರ್, ಕಂಪ್ಯೂಟರ್ ಆಪರೇಟರ್ ಆರ್ಮಣೆ ಇದ್ದರು.

ವಿದ್ಯುತ್ ತಂತಿ ತುಳಿದು ವ್ಯಕ್ತಿ ಸಾವು
ಕೆಜಿಎಫ್: ತೋಟದಲ್ಲಿ ಹರಿದು ಬಿದ್ದ ವಿದ್ಯುತ್ ತಂತಿತುಳಿದು ಶಾಕ್ ಹೊಡೆದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಬೇತಮಂಗಲದಲ್ಲಿ ನಡೆದಿದೆ. ಬೇತಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ನಲ್ಲೂರು ಗ್ರಾಮದ ನಿವಾಸಿ ರಾಮಪ್ಪ ಅವರ ಮಗ ಮಂಜುನಾಥ್(26) ಮೃತಪಟ್ಟ ದುರ್ದೈವಿ.ಶನಿವಾರ ಮಧ್ಯಾಹ್ನ ಮಂಜುನಾಥ್ ನೆಲ್ಲೂರು ಗ್ರಾಮದಲ್ಲಿರುವ ತೋಟದ ಕೆಲಸಕ್ಕೆ ಹೋಗುತ್ತಿದ್ದಾಗ ತೋಟದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ಅದರ ಮೇಲೆ ಕಾಲನ್ನು ಇಟ್ಟಾಗ ವಿದ್ಯುತ್ ಶಾಕ್ ಹೊಡೆದು ಅಲ್ಲೇ ಕುಸಿದು ಬಿದ್ದಿದ್ದ ಮಂಜುನಾಥ್ ಅವರನ್ನು ಪಕ್ಕದ ತೋಟದವರು ನೋಡಿ ತಕ್ಷಣ ಬೇತಮಂಗಲ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಬೇತಮಂಗಲ ಗ್ರಾಮದ ಬೆಸ್ಕಾಂ ಇಲಾಖೆಯ ಕಾರ್ಯಪಾಲಕ ಅಭಿಯಂತರ ಚಲಪತಿ ಹಾಗೂ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಜಗದೀಶ್ ಭೇಟಿ ನೀಡಿ ಪರಿಶೀಲಿಸಿದರು. ಮೃತ ಕುಟುಂಬಕ್ಕೆ 2 ಲಕ್ಷ ಪರಿಹಾರ ನೀಡುವುದಾಗಿ ಬೆಸ್ಕಾಂ ಇಲಾಖೆ ಘೋಷಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement