ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಹಸುಗಳ ಕಾಲು, ಬಾಯಿ ಜ್ವರ ಹತೋಟಿಗೆ: ಶಾಸಕ

Srinivasa Murthy VN
Updated On : 25 Aug 2013, 12:34 pm

ಮಾಲೂರು: ತಾಲೂಕಿನ ರಾಜೇನಹಳ್ಳಿಯಲ್ಲಿ ಹಸುಗಳಲ್ಲಿ ಕಂಡು ಬಂದಿದ ಕಾಲು, ಬಾಯಿ ಜ್ವರ ಹತೋಟಿಗೆ ಬಂದಿದ್ದು, ಗ್ರಾಮದ ಇತರೆ ರಾಸುಗಳಿಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಶಾಸಕ ಮಂಜುನಾಥ್ ಗೌಡ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಎಪಿಎಂಸಿ ಕಚೇರಿಗೆ ಭೇಟಿ ನೀಡಿ ಮಾತನಾಡಿ, ಕಳೆದೆರಡು ದಿನಗಳಲ್ಲಿ ರಾಜೇನಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಕಾಲು, ಬಾಯಿ ಜ್ವರದಿಂದ ಈಗಾಗಲೇ ಸತ್ತರಿರುವ 20 ಹಸುಗಳಿಗೆ ಸರ್ಕಾರದ ವತಿಯಿಂದ ಪರಿಹಾರವಾಗಿ ತಲಾ 16 ಸಾವಿರ ವಿತರಿಸಲಾಗುತ್ತಿದೆ ಎಂದರು.
ಜಾನುವಾರುಗಳಿಗೆ ಲಸಿಕೆ: ಗ್ರಾಮದ ಜನತೆ ಕಾಲು ಬಾಯಿ ಜ್ವರದ ಭಯದಿಂದ ತಮ್ಮ ಜಾನುವಾರಗಳ ಜತೆ ಗ್ರಾಮ ತೊರೆದು ಕಾಡು-ತೋಪುಗಳಲ್ಲಿ ವಾಸ ಮಾಡುತ್ತಿದ್ದು, ಅವರ ಬಳಿ ಇದ್ದ ಎಲ್ಲ ರೀತಿಯ ಜಾನುವಾರುಗಳಿಗೆ ಲಸಿಕೆ ಹಾಕಲು ಪಶು ವೈದ್ಯರ ತಂಡ ಜಿಲ್ಲಾ ಪಶುವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯೋನ್ಮುಖವಾಗಿದ್ದು, ಕಾಡು ಸೇರಿರುವ ಜನರನ್ನು ಮನವೊಳಿಸಿ ಗ್ರಾಮಕ್ಕೆ ಕರೆ ತರೆಲಾಗಿದೆ ಎಂದರು.
ತಾಲೂಕು ಎಪಿಎಂಸಿ ಮಾರುಕಟ್ಟೆಯನ್ನು ತಾತ್ಕಲಿಕವಾಗಿ ರೇಲ್ವೆ ಸೇತುವೆ ಬಳಿಯ 4 ಎಕರೆ 20 ಗುಂಟೆ ಜಾಗದಲ್ಲಿ ನಿರ್ಮಿಸಲಾಗುತ್ತಿದೆ ಎಂದ ಶಾಸಕರು ಕೋರ್ಟ್‌ನಲ್ಲಿರುವ ಬೆಂಗಳೂರು ರಸ್ತೆಯಲ್ಲಿರುವ ಎಪಿಎಂಸಿ ಯಾರ್ಡ್ ಬಗ್ಗೆ ಕೋರ್ಟ್‌ನಲ್ಲಿ ಸಮರ್ಥವಾಗಿ ವಾದಿಸಬಲ್ಲ ವಕೀಲರನ್ನು ನೇಮಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.
ಪರಿಹಾರ: ಇದೇ ಸಂಧರ್ಭದಲ್ಲಿ ಕೃಷಿ ವೇಳೆಯಲ್ಲಿ ತೆಂಗಿನ ಮರದಿಂದ ಬಿದ್ದು ಸಾವನ್ನಪ್ಪಿದ್ದ ಮಾಸ್ತಿ ಹೋಬಳಿಯ ಸಲ್ಮಾನ್(18) ಇಲಾಖೆ ವತಿಯಿಂದ ಮೃತನ ತಾಯಿ ಗುಲಾಬ್ ಬೀನ್ ಅವರಿಗೆ 50 ಸಾವಿರ ಪರಿಹಾರ ಧನದ ಚೆಕ್ ಶಾಸಕ ಮಂಜುನಾಥ್ ಗೌಡರು ವಿತರಿಸಿದರು.
ಎಪಿಎಂಸಿ ಅಧ್ಯಕ್ಷ ಮಹೇಶ್ ಬಾಬು, ಉಪಾಧ್ಯಕ್ಷ ಸಿ.ವಿ. ಕುಮಾರ್, ರಾಜಣ್ಣ,ಅಲೂಮಂಜು, ಮಂಜುನಾಥ್ ರೆಡ್ಡಿ, ರಮೇಶ್, ಕಾರ್ಯದರ್ಶಿ ಕುಮಾರ್ ಸೇರಿದಂತೆ ಎಪಿಎಂಸಿ ಸದಸ್ಯರು,ಸಿಬ್ಬಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement