ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಪಘಾತ: ಪ್ರಾಣಾಪಾಯವಿಲ್ಲದೆ ಮಕ್ಕಳು ಪಾರು

Srinivasa Murthy VN
Updated On : 27 Aug 2013, 11:46 am

ಮುಳಬಾಗಲು: ಶಾಲಾ ಮಕ್ಕಳಿದ್ದ ವಾಹನ ಆಕಸ್ಮಿಕವಾಗಿ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದು ನಂತರ ವಿದ್ಯುತ್ ಕಂಬಕ್ಕೆ ಡಿಕ್ಕಿ ಮಾಡಿದ ಘಟನೆ ಮಂಗಳವಾರ ಬೆಳಗ್ಗೆ ಕೆಜಿಎಫ್ ರಸ್ತೆಯಲ್ಲಿ ಸಂಭವಿಸಿದೆ. ಘಟನೆಯಲ್ಲಿ ಶಾಲಾ ವಾಹನ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಅದೃಷ್ಟವಾಶಾತ್ ಶಾಲಾ ಮಕ್ಕಳಿಗೆ ಸಣ್ಣ ಪುಟ್ಚ ಗಾಯಗಳಾಗಿ ಯಾವುದೇ ಪ್ರಾಣಪಾಯವಾಗದೆ ಪಾರಾಗಿದ್ದಾರೆ. ಮತ್ತೂ ಅದೃಷ್ಟವೆಂದರೆ ಘಟನೆ ಸಂಭವಿಸಿದಾಗ ಶಿಫ್ಟ್ ಕಾರಣ ವಿದ್ಯುತ್ ಇರಲಿಲ್ಲ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಕೂಡ ಮುರಿದಿದೆ. ಮುಳಬಾಗಲು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಕೈತೋಟದ ಮಹತ್ವದ ಅರಿವು
ಟೇಕಲ್:
ಬನಹಳ್ಳಿ ಗ್ರಾಮದಲ್ಲಿ ಕ.ವಿ.ವಿ., ಜಿ.ಕೆ.ವಿ.ಕೆ., ಬೆಂಗಳೂರು ಇವರ ವತಿಯಿಂದ ಆಯೋಜಿಸಲಾಗಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಕೈತೋಟದ ಮಹತ್ವದ ಕುರಿತು ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಡಾ. ನರಸೇಗೌಡ, ಡಾ. ಎನ್.ಬಿ. ಪ್ರಕಾಶ್ ಮತ್ತು ಡಾ. ಬಿ. ಕೃಷ್ಣಮೂರ್ತಿರವರ ನೇತೃತ್ವದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಶಿಭಿರಾರ್ಥಿಗಳು ತಾವೇ ಸಿದ್ದಪಡಿಸಿದ ಕೈತೋಟವನ್ನು ಪ್ರದರ್ಶಿಸಿ ರೈತರಲ್ಲಿ ಅರಿವು ಮೂಡಿಸಿದರು.
ತಂಡದ ಶಿಬಿರಾರ್ಥಿಗಳಾದ ರಮೇಶ್, ಶಶಿಕುಮಾರ್, ಶಿವಶಂಕರ್, ಸುಧಾಕರ್, ಸುಮಂತ್, ಶಿಲ್ಪಶ್ರೀವಾಸ್ತವ, ಶೃತಿ, ಶುಭ, ಶ್ವೇತ, ಸೌಮ್ಯ ಹಾಗೂ ಪ್ರಗತಿ ಪರ ರೈತರಾದ ಅನಿತಾರಮೇಶ್ ಮುಂತಾದವರು ಉಪಸ್ಥಿತರಿದ್ದರು.

'ಉತ್ತಮ ಜೀವನಕ್ಕೆ ವಿದ್ಯಾಭ್ಯಾಸ ಅಗತ್ಯ'
ಕೆಜಿಎಫ್:
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ವಿದ್ಯಾಭ್ಯಾಸ ಅತಿಮುಖ್ಯ ಎಂದು ಲಯಲ್ಸ್ ಕ್ಲಬ್‌ನ ಕಾರ್ಯದರ್ಶಿ ಎಂ. ರಾಜಗೋಪಾಲ್ ತಿಳಿಸಿದರು. ತಾಲೂಕಿನ ಕಂಗಾಂಡ್ಲಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಲಿಜ ಸಂಘದ ಮುಖಂಡ ರಾಮಮೂರ್ತಿನಾಯ್ಡು ಅವರ ನೇತೃತ್ವದಲ್ಲಿ ಏರ್ಪಡಿಸಿದ್ದ ಲಯನ್ಸ್ ಕ್ಲಬ್ ವತಿಯಿಂದ ತಟ್ಟೆ ಮತ್ತು ಲೋಟಗಳನ್ನು ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಲಯನ್ಸ್ ಕ್ಲಬ್‌ನ ಜೋನಲ್ ಅಧಿಕಾರಿ ವಿ.ಡಿ. ದಿನೇಶ್, ಹಾಗೂ ಮೋಹನ್ ರಾಜ್ ಮಾತನಾಡಿ, ತಮ್ಮ ಸಂಸ್ಥೆ ವತಿಯಿಂದ ಗ್ರಾಮೀಣ ಭಾಗದಲ್ಲಿ ಹಲವು ಜನಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಕಂಗಾಂಡ್ಲಹಳ್ಳಿ ಗ್ರಾಮದ ಮುಖಂಡರಾದ ನವೀನ್ ರಾಮ್, ಪಾರಂಡಹಳ್ಳಿ ಗ್ರಾಮದ ರಮಣ ಮಹರ್ಷಿ ವೃದ್ಧಾಶ್ರಮದ ಅಧ್ಯಕ್ಷ ಅಪ್ಪಾಜಿಗೌಡ, ಶಾಲಾ ಮುಖ್ಯ ಶಿಕ್ಷಕಿ ವನಜಾಕ್ಷಿ, ಶಿಕ್ಷಕರಾದ ಯಾಸಿನ್ ತಾಜ್, ಎಂ.ಎನ್. ಜಯಂತಿ, ಎಂ.ವಿ. ನಟರಾಜ್ ಮತ್ತಿತರರು ಹಾಜರಿದ್ದರು.

ಪ್ರತಿಭಟನೆ ವಾಪಸ್
ಶ್ರೀನಿವಾಸಪುರ:
ತಾಲೂಕಿನ ಕೂರಿಗೇಪಲ್ಲಿ ಪಿ.ಡಿ.ಓ. ಮೇಲೆ ನಡೆಸಿರುವ ಹಲ್ಲೆಯನ್ನು ಖಂಡಿಸಿ ಹಾಗೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆಂದು ಆರೋಪಿಸಿ ಪೊಲೀಸರ ವಿರುದ್ಧ ಸತತವಾಗಿ 5 ದಿವಸಗಳಿಂದ ನಡೆಸುತ್ತಿದ್ದ ಧರಣಿಯನ್ನು ಹಿಂದಕ್ಕೆ ಪಡೆದುಕೊಂಡಿದೆ. ತಾಲೂಕಿನ 25 ಪಂಚಾಯ್ತಿಗಳ ಗ್ರಾಮ ಪಂಚಾಯ್ತಿ ನೌಕರರೆಲ್ಲಾ ಸೇರಿ ಕ್ಷುಲ್ಲಕ ಕಾರಣಕ್ಕಾಗಿ ಕೂರಿಗೇಪಲ್ಲಿ ಪಿ.ಡಿ.ಓ. ವಿ. ಸುಬ್ರಮಣಿ ಎಂಬುವವರ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ಆರೋಪಿಗಳಾದ ಸ್ಟೋರ್ ಮಂಜುನಾಥನ್ನು ಹಾಗೂ ಕೆ.ವಿ. ಶ್ರೀನಿವಾಸನನ್ನು ಬಂಧಿಸುವಂತೆ ಒತ್ತಾಯಿಸಿ ಎಲ್ಲಾ ಪಂಚಾಯ್ತಿಗಳ ನೌಕರರು ತಾಲೂಕು ಪಂಚಾಯ್ತಿ ಕಾರ್ಯಾಲಯದ ಮುಂದೆ 5 ದಿವಸಗಳಿಂದ ಧರಣಿಯನ್ನು ನಡೆಸುತ್ತಿದರು. ಸರ್ಕಲ್ ಇನ್ಸ್‌ಪೆಕ್ಟರ್ ಜಿ. ಶಿವಪ್ರಸಾದ್ ಧರಣಿ ಸ್ಥಳಕ್ಕೆ ಬಂದು 3 ದಿವಸಗಳ ಕಾಲಾವಶವನ್ನು ನೀಡಿ ತಪ್ಪು ಮಾಡಿದ ಆರೋಪಿಗಳನ್ನು ಖಂಡಿತ ಬಂಧಿಸುತ್ತೇವೆಂದು ಭರವಸೆಯನ್ನು ನೀಡಿದ ಬಳಿಕ ಪ್ರತಿಭಟನಾಕಾರರು ಧರಣಿಯನ್ನು ಹಿಂದಕ್ಕೆ ಪಡೆದುಕೊಂಡು ವಾಪಾಸ್ಸಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement