ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಹಲ್ಲೆ ಆರೋಪ: ಜಿಪಂ ಸದಸ್ಯೆ, ರೈತ ಸಂಘ ಮುಖಂಡರ ವಿರುದ್ಧ ದೂರು, ಪ್ರತಿ ದೂರು

Srinivasa Murthy VN
Updated On : 30 Aug 2013, 12:40 pm

ಕ.ಪ್ರ.ವಾರ್ತೆ ಮಾಲೂರು ಆ.29
ಇಲ್ಲಿನ ಕೈಗಾರಿಕಾ ಪ್ರಾಂಗಣದ ಕಂಪನಿಯೊಂದಕ್ಕೆ ಅತಿಕ್ರಮ ಪ್ರವೇಶ ಮಾಡಿದರಲ್ಲದೇ ವ್ಯವಸ್ಥಾಪಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆಪಾದಿಸಿ ಜಿ.ಪಂ. ಸದಸ್ಯೆ ಯಲ್ಲಮ್ಮ ಹಾಗೂ ರೈತ ಸಂಘದ ಮುಖಂಡ ಅಶ್ವಥ್ ರೆಡ್ಡಿ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಕಾರ್ಖಾನೆಯವರ ದೌರ್ಜನ್ಯ ವಿರುದ್ಧ ಜಿ.ಪಂ. ಸದಸ್ಯೆ ಪ್ರತಿ ದೂರು ದಾಖಲಾಗಿದೆ.
  ಪಟ್ಟಣದ ಹೊರವಲಯದಲ್ಲಿರುವ ಕೈಗಾರಿಕಾ ಪ್ರಾಂಗಣದಲ್ಲಿರುವ ಅಸೋಷಿಯಟ್ ಡೇಕೂರ್ ಲಿ. ಕಂಪನಿಗೆ ರೈತರಿಗೆ ಸರಬರಾಜು ಆಗಬೇಕಾಗಿದ್ದ ರಸಗೊಬ್ಬರಗಳು ಅಕ್ರಮವಾಗಿ ಈ ಕಾರ್ಖಾನೆಗೆ ಸರಬರಾಜು ವಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಮೇಲೆ ಕಾರ್ಖಾನೆಗೆ ರೈತ ಸಂಘದ ಅಶ್ವಥ್ ರೆಡ್ಡಿ ಅವರೊಂದಿಗೆ ಕಾರ್ಖಾನೆಗೆ ತೆರಳಿದ್ದು, ಅಲ್ಲಿ ವ್ಯವಸ್ಥಾಪಕ ಸೀತಾರಾಮ ಗೌಡ ಸೇರಿದಂತೆ ಸಿಬ್ಬಂದಿ ಕ್ಷೇತ್ರದ ಜಿ.ಪಂ. ಸದಸ್ಯೆ ಎಂಬ ಕನಿಷ್ಠ ಗೌರವ ನೀಡದೆ ಅವಾಚ್ಯ ಶಬ್ದಗಳಿಂದ ಬಯ್ದು ಅನುಚಿತವಾಗಿ ವರ್ತಿಸಿದ್ದರು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಯಲ್ಲಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಕಾರ್ಖಾನೆಯ ವ್ಯವಸ್ಥಾಪಕ ಸೀತಾರಾಮ ಗೌಡ ಜಿ.ಪಂ. ಸದಸ್ಯೆ ಯಲ್ಲಮ್ಮ ಹಾಗೂ ರೈತ ಸಂಘದ ಅಶ್ವಥ್ ರೆಡ್ಡಿ ರವರ ಮೇಲೆ ದೂರು ನೀಡಿದ್ದು, ಅದರಂತೆ ಜಿ.ಪಂ. ಸದಸ್ಯೆ ಹಾಗೂ ರೈತ ಸಂಘದ ಹೆಸರಿನಲ್ಲಿ ಬಂದಿದ್ದ ವ್ಯಕ್ತಿಗಳಿಬ್ಬರು ಸಿಬ್ಬಂದಿ ಪ್ರತಿರೋಧ ನಡುವೆ ಕಾರ್ಖಾನೆಗೆ ನುಗಿದ್ದರಲ್ಲದೇ ಎಕವಚನ ಪ್ರಯೋಗ ನಡೆಸಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿರುವ ಸೀತಾರಾಮಗೌಡ ಅವರು ಜಿ.ಪಂ. ಸದಸ್ಯೆ ಯಲ್ಲಮ್ಮ ರವರ ಪತಿ ಅವರು ಕುರ್ಚಿಯಿಂದ ಕಚೇರಿಯ ಕಿಟಿಕಿ ಗಾಜುಗಳನ್ನು ಧ್ವಂಸ ಮಾಡಿದ್ದಾರೆ ಎಂದು ಆಪಾದಿಸಿದ್ದಾರೆ. ಘಟನೆ ನಡೆದು 24 ಗಂಟೆಗಳ ನಂತರ ದೂರು ಹಾಗೂ ಪ್ರತಿ ದೂರು ದಾಖಲಾಗಿರುವ ಹಿಂದೆ ರಾಜಕೀಯದ ಒತ್ತಡ ಕೆಲಸ ಮಾಡಿದೆ ಎಂಬ ಮಾತು ಇಲ್ಲಿನ ರಾಜಕೀಯ ವಲಯದಲ್ಲಿ  ಕೇಳಿ ಬರುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement