ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕನ್ನಡ ಉಳಿವಿಗೆ ಇಚ್ಚಾಶಕ್ತಿ ಅಗತ್ಯ: ಶಾಸಕ ಸುಧಾಕರ್

Srinivasa Murthy VN
Updated On : 12 Dec 2013, 1:17 am

ಗೌರಿಬಿದನೂರು: ಮಾತೃಭಾಷೆ ಕನ್ನಡವನ್ನು ಉಳಿಸಿ ಬೆಳೆಸಬೇಕಾದರೆ ಇಚ್ಚಾಶಕ್ತಿ ಮುಖ್ಯ ಎಂದು ಚಿಕ್ಕಬಳ್ಳಾಪುರ ಶಾಸಕ ಕೆ. ಸುಧಾಕರ್ ತಿಳಿಸಿದರು.
ತಾಲೂಕಿನ ಮಂಚೇನಹಳ್ಳಿಯಲ್ಲಿ ಜೈಕರ್ನಾಟಕ ಕನ್ನಡ ಬಳಗ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಯಾವುದೇ ಕನ್ನಡ ಕಾರ್ಯಕ್ರಮವನ್ನು ಕನ್ನಡ ನಾಡಗೀತೆಯ ಮೂಲಕ ಪ್ರಾರಂಭಿಸಿ ಮೈಮನ ರೋಮಾಂಚನವಾಗುತ್ತದೆ, ಕನ್ನಡ ಕಾರ್ಯಕ್ರಮದಲ್ಲಿ ಹಬ್ಬದ ವಾತಾವರಣವಿರಬೇಕು ಎಂದರು.
ಕನ್ನಡ ಭಾಷೆಯ ಅಭಿವೃದ್ಧಿಗೆ ವರ್ಷಪೂರ್ತಿ ಕನ್ನಡ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಇದಕ್ಕೆ ಎಲ್ಲಾ ರೀತಿಯಲ್ಲೂ ಸಹಕರಿಸುವುದಾಗಿ ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಶಾಸಕ ಎಸ್.ವಿ. ಅಶ್ವತ್ಥನಾರಾಯಣರೆಡ್ಡಿ, ಕನ್ನಡ ಪ್ರಾಚೀನ ಭಾಷೆ. ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯಾಗಿದ್ದರೂ ಕನ್ನಡ ಜನರ ಅತಿಯಾದ ಉದಾರ ಮನೋಭಾವದಿಂದ ಬೇರೆ ಭಾಷಿಕರು ನಮ್ಮ ಭಾಷೆಯನ್ನು ಕಲಿಯುವುದನ್ನು ಬಿಟ್ಟು ಅವರ ಭಾಷೆಯನ್ನು ನಮಗೆ ಕಲಿಸುತ್ತಿದ್ದಾರೆ ಎಂದರು. ತಾಪಂ ಸದಸ್ಯ ನಾರಾಯಣಸ್ವಾಮಿ, ಜಿಪಂ ಸದಸ್ಯ ರಾಧಮ್ಮ ಗಂಗಾಧರಪ್ಪ, ರಿಯಾಸ್, ಬಾಲಕೃಷ್ಣ, ಸುದರ್ಶನ್, ಸಂತೋಷ್, ನೌಶಾದ್, ಸುಬ್ರಮಣಿ, ಪಿ.ಎನ್. ಪ್ರಕಾಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement