ಬಂಗಾರಪೇಟೆಯಲ್ಲಿ ಶ್ರದ್ಧಾಂಜಲಿ
ಬಂಗಾರಪೇಟೆ: ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅಕಾಲಿಕ ಮರಣಕ್ಕೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಕುವೆಂಪು ವೃತ್ತದಲ್ಲಿ ಕನ್ನಡ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಒಡಯರ್ಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡುತ್ತಾ ಒಡೆಯರ್ ಬರೀ ರಾಜಕಾರಣಿಯಲ್ಲದೆ ಉತ್ತಮ ಕ್ರೀಡಾಭಿಮಾನಿ ಆಗಿದ್ದರು. ನಾಲ್ಕು ಬಾರಿ ಸಂಸದರಾಗಿದ್ದರೂ ಎಂದೂ ಅಪ್ಪಟ ರಾಜಕಾರಣಿಯಂತೆ ಕಾಣಲಿಲ್ಲ ಹಾಗೂ ಕಾಂಗ್ರೆಸ್ನೊಂದಿಗೆ ಗುರುತಿಸಿಕೊಂಡಿದ್ದರೂ ಸಹ ಎಲ್ಲಾ ಪಕ್ಷಗಳ ಮುಖಂಡರೊಂದಿಗೆ ಉತ್ತಮ ಭಾಂದವ್ಯ ಹೊಂದುವ ಮೂಲಕ ಸ್ನೇಹ ಪ್ರಿಯರಾಗಿದ್ದರು. ಒಡೆಯರ್ ನಿಧನದ ವಾರ್ತೆ ರಾಜ್ಯದ ಜನತೆಗೆ ದುಃಖದಂತಿದೆ ಅವರನ್ನು ಕಳೆದುಕೊಂಡಿರುವ ರಾಜ್ಯ ಬಡವಾಗಿದೆ. ಒಡೆಯರ್ ಇಲ್ಲದೆ ಮುಂದಿನ ವರ್ಷ ನಡೆಯಲಿರುವ ಮೈಸೂರು ದಸರಾ ಕಳೆಗುಂದಬಹುದು ಎಂಬ ಅನುಮಾನವನ್ನು ವ್ಯಕ್ತಪಡಿಸಿದರು.
ಕನ್ನಡ ಹೋರಾಟಗಾರ ಹಾಗೂ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ರಂಗರಾಮಯ್ಯ ಮಾತನಾಡಿ ಮೈಸೂರು ಸಂಸ್ಥಾನದ ಕೊನೆ ಕೊಂಡಿಯಾಗಿದ್ದ ಒಡೆಯರ್ ತಮ್ಮನ್ನು ಅಗಲಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅಷ್ಟರ ಮಟ್ಟಿಗೆ ರಾಜ್ಯದ ಜನರನ್ನು ತಮ್ಮ ಉತ್ತಮ ವ್ಯಕ್ತಿತ್ವದಿಂದ ಸಳೆದಿದ್ದರು ಅವರ ಅಗಲಿಕೆಯಿಂದ ತುಂಬಲಾರದ ನಷ್ಟವಾಗಿದೆ ಭಗವಂತ ಈ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ನೀಡಲಿದೆ ಎಂದು ಹಾರೈಸಿದರು. ನಂತರ ಒಂದು ನಿಮಿಷ ಮೌನಾಚರಣೆ ಮಾಡಿದರು. ಈ ವೇಳೆ ಹಿರಿಯ ವಕೀಲ ಕುಸುಮಾ ಕೃಷ್ಣಮೂರ್ತಿ, ಪುರಸಭೆ ಮಾಜಿ ಅಧ್ಯಕ್ಷ ಕೆ. ಚಂದ್ರಾರೆಡ್ಡಿ, ಸದಸ್ಯ ಶಫಿ, ವೆಂಕಟೇಶಗೌಡ, ಮುಖಂಡರಾದ ಪ್ರಸಾದ್, ಮುರಳಿ, ಬೇಕರಿ ಶ್ರೀನಿವಾಸ್, ಆರ್. ಜಗದೀಶ್, ಲಯನ್ನಂದಾ, ಪೊಲೇನಹಳ್ಳಿ ಕೆ. ರಮೇಶ್, ಹೊಯ್ಸಲ ವೆಂಕಟೇಶ್, ಸಾಹಿತಿ ಲಕ್ಷ್ಮಯ್ಯ ಮತ್ತಿತರರು ಇದ್ದರು.
ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆತ್ಮವಿಶ್ವಾಸ ವೇದಿಕೆಯಿಂದ ಅಗಲಿದ ಮೈಸೂರು ರಾಜ ವಂಶಸ್ಥರ ಕೊನೆಯ ಕೊಂಡಿ ಶ್ರೀಕಂಠದತ್ತ ಒಡೆಯರರ್ನಿಧನಕ್ಕೆ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಲಾಗಿತ್ತು,ಒಡೆಯರ್ ್ವ್ಯಕ್ತಿತ್ವವನ್ನು ಗುಣಗಾನ ಮಾಡಿದರು.ವೇದಿಕೆ ರಾಜ್ಯಧ್ಯಕ್ಷ ಎಂ.ಎನ್.ಭಾರದ್ವಾಜ್,ಸೂಲಿಕುಂಟೆ ಆನಂದ್,ಪಿಳ್ಳಪ್ಪ,ಹುಣಸನಹಳ್ಳಿ ರಮೇಶ್ಮ್ತ್ತಿತರರು ಇದ್ದರು.