ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬ್ರೆಕ್ಟ್ ಶ್ರೇಷ್ಠ ನಾಟಕಕಾರ'

Srinivasa Murthy VN
Updated On : 12 Dec 2013, 1:17 am

ಕೋಲಾರ: ಸರ್ವಾಧಿಕಾರಿಯಾಗಿದ್ದ ಹಿಟ್ಲರ್ ಬಗ್ಗೆ ಬ್ರೆಕ್ಟ್ ತನ್ನ ನಾಟಕಕಗಳ ಮೂಲಕ ಸತ್ಯವನ್ನು ಬಹಿರಂಗಪಡಿಸುತ್ತಿದ್ದ. ಖ್ಯಾತ ಜರ್ಮನ್ ನಾಟಕಕಾರರಾಗಿದ್ದ  ಬ್ರೆಕ್ಟ್ನ ಬೆಳವಣಿಗೆ ಕಂಡು ಅವನ ನಾಟಕವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು ಎಂದು ರಂಗಕರ್ಮಿ ಎನ್.ಕೆ. ವರದರಾಜ್ ತಿಳಿಸಿದರು.
ಬಂಗಾರಪೇಟೆ ತಾಲೂಕಿನ ಪಾಕರಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಆದರ್ಶ ಕಾಲೇಜಿನ ಎನ್ನೆಸ್ಸೆಸ್ ಎರಡನೇ ದಿನದ ಶಿಬಿರದಲ್ಲಿ ಉಪನ್ಯಾಸ ನೀಡಿದ ಅವರು, 38 ನಾಟಕಗಳನ್ನು ಬರೆದಿರುವ ಜರ್ಮನ್ ದೇಶದ ಬ್ರೆಕ್ಟ್ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ  ನಾಟಕಗಳನ್ನು ರಚನೆ ಮಾಡುವ ಮೂಲಕ ಶೇಕ್ಸ್ಪಿಯರ್ ಅವರಿಗೆ ಸರಿಸಮಾನ ನಾಟಕಕಾರರಾಗಿದ್ದಾರೆಂದು ಅಬಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಚಿಕ್ಕಅಂಕಂಡಹಳ್ಳಿಯ ಮುಖಂಡ ಚಂದ್ರಯ್ಯ ಶೆಟ್ಟಿ ಎನ್.ಎಸ್.ಎಸ್ ಶಿಬಿರಗಳಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರ ನಿರ್ಮಾಣದ ಮೇಲೆ ಪ್ರೀತಿ ಹೆಚ್ಚುತ್ತದೆ ಎಂದರು. ಕಾಲೇಜಿನ ಪ್ರಾಂಶುಪಾಲ ಎಸ್.ಕೆ. ಕಲಾಂ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವ್ಯವಸ್ಥಾಪಕ ಸಿ. ರವೀಂದ್ರ ಸಿಂಗ್ ಇದ್ದರು, ವಿದ್ಯಾರ್ಥಿ ಪಿ.ಎನ್. ನಾಗರಾಜ್ ನಿರೂಪಿಸಿ, ಕೆ.ಎನ್. ಹೇಮಂತ್ ಸ್ವಾಗತಿಸಿ, ಮಹೇಶ್ಕುಮಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement