ಮಾಲೂರಿನಲ್ಲಿ ಒಡೆಯರ್ಗೆ ಸ್ಮರಣೆ
ಮಾಲೂರು: ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ಸ್ಥಳೀಯ ಸಂಘ-ಸಂಸ್ಥೆಗಳು ಬುಧವಾರ ಶ್ರದ್ಧಾಂಜಲಿ ಅರ್ಪಿಸಿದರು. ಪಟ್ಟಣದ ಮಹಾರಾಜ ವೃತ್ತದಲ್ಲಿ ಒಡೆಯರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಭುವನೇಶ್ವರಿ ಕಲಾ ಸಂಘ, ಡಾ. ರಾಜ್ ಅಭಿಮಾನಿಗಳ ಸಂಘದವರು ಮೌನ ಆಚರಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಭುವನೇಶ್ವರಿ ಕಲಾ ಸಂಘದ ಹಿರಿಯ ಸದಸ್ಯ ಎಂ.ವಿ. ಹನುಮಂತಯ್ಯ, ರಾಜ್ಯದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದ್ದ ಶ್ರೀ ಕಂಠದತ್ತ ಒಡೆಯರ್ ಅವರು ರಾಜ್ಯದ ರೇಷ್ಮೆ ಅಭಿವೃದ್ಧಿಗಾಗಿ ತಾವೇ ಸಿಲ್ಕ್ಪ್ರಮೋಟರ್ ಆಗಿದ್ದವರು. ಅವರ ನಿಧನದಿಂದ ಯದುವಂಶದ ಕೊನೆಯ ಕುಡಿ ಕಮರಿದ್ದು,ನಮ್ಮೆಲ್ಲರಿಗೂ ಅನಾಥ ಪ್ರಜ್ಞೆ ಕಾಡುವಂತಾಗಿದೆ ಎಂದರು. ಡಾ.ರಾಜ್ ಅಭಿಮಾನಿ ಸಂಘದ ಷಣ್ಮುಖ, ಕಲಾವಿದ ಮಾಲೂರು ಸಿದ್ದಪ್ಪ, ರಾಮಚಂದ್ರ, ಹಿಂದೂ ಜಾಗರಣ ವೇದಿಕೆಯ ಭರತ್ಭೂಷಣ್, ಪುರಸಭೆ ಸದಸ್ಯ ವೆಂಕಟೇಶ್, ಪೆರಮಾಳ್, ಮೋಹನ್ ರಾವ್ ಇದ್ದರು.