ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಚಿವ ಮುನಿಯಪ್ಪ ದಲಿತ ವಿರೋಧಿ: ಆರೋಪ

Srinivasa Murthy VN
Updated On : 12 Dec 2013, 1:19 am

ಕೋಲಾರ: ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಕೋಲಾರದಿಂದ ಸಂಸತ್ತಿಗೆ ಆರು ಬಾರಿ ಆಯ್ಕೆಯಾಗಿ ಸಚಿವರೂ ಆಗಿರುವ ಕೆ.ಎಚ್. ಮುನಿಯಪ್ಪನವರು ದಲಿತರ ಅಭಿವೃದ್ಧಿಗೆ ಹೇಳಿ ಕೊಳ್ಳುವಂತಹ ಯಾವುದೇ ಕಾರ್ಯಕ್ರಮಗಳನ್ನು ಕೈಗೊಂಡಿಲ್ಲವೆಂದು ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ವೆಂಕಟೇಶ್ ಮೌರ್ಯ ಆರೋಪಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಎಸ್ಸಿ ಮತ್ತು ಎಸ್ಟಿ ಜನಾಂಗವಿದ್ದು, ಇವರ ಮತಗಳಿಂದ ಆಯ್ಕೆಗೊಂಡಿರುವ ಕೆ.ಎಚ್. ಮುನಿಯಪ್ಪನವರು ಈ ಜನಾಂಗದ ಅಭಿವೃದ್ಧಿಗೆ ಗಮನ ನೀಡದೆ ದಲಿತ ವಿರೋಧಿಯಾಗಿದ್ದಾರೆಂದು ತಿಳಿಸಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮುನಿಯಪ್ಪನವರಿಗೆ ಸೋಲಿನ ರುಚಿ ತೋರಿಸುತ್ತೇವೆ. ಇದಕ್ಕಾಗಿ ಜೆಜೆಪಿ ಎಸ್ಸಿ ಮೋರ್ಚಾ ಜಿಲ್ಲೆಯ್ಯಾದ್ಯಂತ ಎಲ್ಲಾ ತಾಲೂಕುಗಳಲ್ಲಿ ಸಮಾವೇಶ ಹಮ್ಮಿಕೊಂಡು ದಲಿತರಲ್ಲಿ ಜಾಗೃತಿ ಮೂಡಿಸಲಿದೆ ಎಂದರು.
ಪ್ರತಿ ಬೂತ್ಗೆ 10 ಮಂದಿ ಸದಸ್ಯರಂತೆ ಪಕ್ಷವನ್ನು ಸಂಘಟನೆ ಮಾಡಲಿದ್ದು, ಹೋಬಳಿ, ತಾಲೂಕು ಮತ್ತು ಜಿಲ್ಲಾ ಸಮಾವೇಶಗಳನ್ನು ಮಾಡುವುದರ ಮೂಲಕ ಪಕ್ಷವನ್ನು ಸಂಘಟಿಸಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೋಲಾರದಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಕಳುಹಿಸುವುದಾಗಿ ಹೇಳಿದರು.
ತಾವು ಸಹ ಟಿಕೆಟ್ ಆಕಾಂಕ್ಷಿಯಾಗಿದ್ದು, ವರಿಷ್ಠರು ಯಾರಿಗೇ ಟಿಕೆಟ್ ನೀಡಿದರೂ ಕೆಲಸ ಮಾಡಿ ಕೋಲಾರ ಕ್ಷೇತ್ರವನ್ನು ಈ ಬಾರಿ ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳುತ್ತೇವೆಂದರು.
ಡಿ.21 ರಂದು ಕೋಲಾರದಿಂದ ಪ್ರಾರಂಭವಾಗುವ ಸಮಾವೇಶಗಳು ನಂತರ ಡಿ.25 ರಂದು ಶ್ರೀನಿವಾಸಪುರದಲ್ಲಿ ಅಂತ್ಯಗೊಳಲಿದ್ದು, ತಾಲೂಕು ಸಮಾವೇಶದ ನಂತರ ಜಿಲ್ಲಾ ಸಮಾವೇಶವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ರಾಮಸಂದ್ರ ನಾಗರಾಜು ವಿವರಿಸಿದರು.
ಮುಳಬಾಗಲು ಮೀಸಲು ಕ್ಷೇತ್ರದಿಂದ ಬೈರಾಗಿ ಜನಾಂಗದ ಕೊತ್ತೂರು ಮಂಜುನಾಥ್ ಆಯ್ಕೆಗೊಂಡಿದ್ದರೂ ಸಹ ಇದರ ಬಗ್ಗೆ ಕೆ.ಎಚ್. ಮುನಿಯಪ್ಪ ಒಂದು ಹೇಳಿಕೆಯನ್ನು ನೀಡದೆ ಅವರನ್ನು ರಕ್ಷಣೆ ಮಾಡುವ ಮೂಲಕ ಎಸ್ಪಿ ಜನಾಂಗಕ್ಕೆ ಅನ್ಯಾಯ ಮಾಡುತ್ತಿದ್ದಾರೆಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮುರಳಿ, ಕಾರ್ಯದರ್ಶಿ ಮಣಿ, ಆನಂದಪ್ಪ, ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement