ಸರ್ಕಾರಿ ಜಮೀನು ಒತ್ತುವರಿ ತೆರವು
ಮುಳಬಾಗಲು: ತಾಲೂಕಿನ ಎಚ್. ಗೊಲ್ಲಹಳ್ಳಿಯಲ್ಲಿ ಸರ್ಕಾರಕ್ಕೆ ಸೇರಿದ 25 ಎಕರೆ ಜಮೀನನ್ನು ಕಂದಾಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಿ ಗ್ರಾಪಂ ವಶಕ್ಕೆ ನೀಡಿದರು. ಗ್ರಾಮದ ಸರ್ವೆ ನಂಬರ್ 120, 121, 79 ಮತ್ತು 80ರಲ್ಲಿ 25 ಎಕರೆ ಸರ್ಕಾರಿ ಜಮೀನಿದ್ದು, ಅದನ್ನು ಅರಣ್ಯ ಇಲಾಖೆ ಅಭಿವೃದ್ಧಿಗಾಗಿ ಪಂಚಾಯತಿಗೆ ಹಸ್ತಾಂತರಗೊಳಿಸಲಾಗಿತ್ತು. ಆದರೆ ಗ್ರಾಮದ ಕೆಲವುವರು ಅಲ್ಲಿ ಸಾಗುವಳಿ ಮಾಡುತ್ತಿದ್ದರು. ಈ ಸಂಬಂಧ ಗ್ರಾಪಂ ಮತ್ತು ಗ್ರಾಮಸ್ಥರು ಸರ್ಕಾರಕ್ಕೆ ದೂರು ಸಲ್ಲಿಸಿದ ಹಿನ್ನಲೆಯಲ್ಲಿ ಒತ್ತುವರಿ ತೆರವಿಗೆ ಜಿಲ್ಲಾಧಿಕಾರಿ ಆದೇಶ ನೀಡಿದ್ದರು.
ರೋಗಿಗಳಿಗೆ ಹಣ್ಣು ವಿತರಣೆ
ಮುಳಬಾಗಲು; ಮಾಜಿ ಸಚಿವ ದಿ. ಆಲಂಗೂರು ಆರ್.ಶ್ರೀನಿವಾಸ್ ಪುಣ್ಯ ಸ್ಮರಣೆ ಪ್ರಯುಕ್ತ ಜೆಡಿಎಸ್ ಮುಖಂಡರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ವಿತರಿಸಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಶಿವಣ್ಣ, ಕೋಚಿಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್, ಜಿಪಂ ಸದಸ್ಯ ಶ್ರೀನಿವಾಸ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ತೇಜೋರಮಣ, ಮುನಿ ಆಂಜಪ್ಪ, ಎಂ.ಎಸ್.ಶ್ರೀನಿವಾಸರೆಡ್ಡಿ, ನಲ್ಲೂಕು ರಘುಪತಿರೆಡ್ಡಿ ಇದ್ದರು.