ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗ್ರಾಪಂ ಚುನಾವಣೆ; ಕಾಂಗ್ರೆಸ್ ಮೇಲುಗೈ

Srinivasa Murthy VN
Updated On : 13 Dec 2013, 12:12 pm

ಶಿಡ್ಲಘಟ್ಟ: ತಾಲೂಕಿನ ನಾಲ್ಕು ಗ್ರಾಪಂಗಳ ಚುನಾವಣೆಯ ಮತ ಎಣಿಕೆಯನ್ನು ಬುಧವಾರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಸಲಾಯಿತು.
ಭಕ್ತರಹಳ್ಳಿ, ನಾಗಮಂಗಲ, ಹೊಸಪೇಟೆ ಮತ್ತು ಮಳಮಾಚನಹಳ್ಳಿ ಗ್ರಾಪಂಗಳ ಚುನಾವಣೆ ಮತ ಎಣಿಕೆ ನಡೆದು ಭಕ್ತರಹಳ್ಳಿ ಗ್ರಾಪಂನಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಸ್ಥಾನ ಪಡೆದಿದ್ದರೆ, ನಾಗಮಂಗಲ, ಮಳಮಾಚನಹಳ್ಳಿ ಮತ್ತು ಹೊಸಪೇಟೆ ಗ್ರಾಪಂಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಸ್ಥಾನ ಗಳಿಸಿದ್ದಾರೆ.
ಭಕ್ತರಹಳ್ಳಿ ಗ್ರಾಪಂನ ಭಕ್ತರಹಳ್ಳಿ ಮತಕ್ಷೇತ್ರದಲ್ಲಿ ಆರು ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದರಿಂದ ಉಳಿದ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ನಾಗಮಂಗಲ ಗ್ರಾಪಂನ 7 ಸ್ಥಾನಗಳಲ್ಲಿ ಐದು ಕಾಂಗ್ರೆಸ್ ಬೆಂಬಲಿತರ ಪಾಲಾಗಿದ್ದರೆ, 2 ಜೆಡಿಎಸ್ ವಶವಾಗಿದೆ. ಹೊಸಪೇಟೆ ಗ್ರಾಪಂನ 17 ಸ್ಥಾನಗಳಲ್ಲಿ 9 ಕಾಂಗ್ರೆಸ್ ಬೆಂಬಲಿತರ ಪಾಲಾಗಿದ್ದರೆ, 8 ಜೆಡಿಎಸ್ ವಶವಾಗಿದೆ. ಮಳಮಾಚನಹಳ್ಳಿ ಗ್ರಾಪಂನ 14 ಸ್ಥಾನಗಳಲ್ಲಿ 10 ಕಾಂಗ್ರೆಸ್ ಬೆಂಬಲಿತರ ಪಾಲಾಗಿದ್ದರೆ, 4 ಜೆಡಿಎಸ್ ವಶವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement