ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರಾಷ್ಟ್ರೀಯ ಪೈಕಾ ಕೂಟಕ್ಕೆ ಜಿಲ್ಲೆಯ ಆರು ಕ್ರೀಡಾಪಟುಗಳ ಆಯ್ಕೆ

Srinivasa Murthy VN
Updated On : 13 Dec 2013, 12:12 pm

ಕೋಲಾರ: ಮಹಾರಾಷ್ಟ್ರದ ಔರಂಗಾಬಾದಿನಲ್ಲಿ ಡಿ. 15ರಿಂದ 18ರವರೆಗೆ ನಡೆಯಲಿರುವ ರಾಷ್ಟ್ರ ಮಟ್ಟದ ಪೈಕಾ ಗ್ರಾಮೀಣ ಕ್ರೀಡಾಕೂಟದ ಕಬಡ್ಡಿ ವಿಭಾಗದಲ್ಲಿ ಸ್ಪರ್ಧಿಸುವ ರಾಜ್ಯದ ತಂಡಗಳಿಗೆ ಮಾಲೂರು ತಾಲೂಕಿನ ಪ್ರದೀಪ್, ವಿನೋದಿನಿ, ಕೆಜಿಎಫ್‌ನ ಶೃತಿ ಹಾಗೂ ಕೊಕ್ಕೋ ವಿಭಾಗದ ತಂಡದಲ್ಲಿ ಕೋಲಾರ ತಾಲೂಕಿನ ಜಗದೀಶ್ ಆಯ್ಕೆಯಾಗಿದ್ದಾರೆ.
ಅಥ್ಲೆಟಿಕ್ಸ್ ವಿಭಾಗದಲ್ಲಿ ಮಾಲೂರು ತಾಲೂಕಿನ ಕೃಷ್ಣಮೂರ್ತಿ, ಈಜು ವಿಭಾಗದಲ್ಲಿ ಕೆಜಿಎಫ್‌ನ ಸೌಂದರ್ಯ  ಆಯ್ಕೆಯಾಗಿದ್ದು, ಈಜು ಸ್ಪರ್ಧೆ ಮಧ್ಯಪ್ರದೇಶದ ಭೂಪಾಲನಲ್ಲಿ ಡಿ. 19ರಿಂದ,  ಅಥ್ಲೆಟಿಕ್ಸ್ ವಿಭಾಗದ ಸ್ಪರ್ಧೆಗಳು ಜ.7ರಿಂದ 9ರವರೆಗೆ ಆಂಧ್ರಪ್ರದೇಶದಲ್ಲಿ ನಡೆಯಲಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ನಡೆಸಿದ್ದ ವಿವಿಧ ಹಂತದ ಪೈಕಾ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಇವರು ವಿಶೇಷ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇದೇ ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಕ್ರೀಡಾಪಟುಗಳು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ, ಇವರು ಗ್ರಾಮೀಣ ಪ್ರದೇಶದವರಾಗಿದ್ದು ಇಲಾಖೆಯು ಇವರಿಗೆ ಕ್ರೀಡಾಕೂಟಗಳನ್ನು ಏರ್ಪಡಿಸಿ ಸೂಕ್ತ ವೇದಿಕೆಯನ್ನು ಕಲ್ಪಿಸಿದ ಪರಿಣಾಮವಾಗಿ ಜಿಲ್ಲೆಯು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವ ಅವಕಾಶ ಸೃಷ್ಟಿಯಾಗಿದೆ.
ಪೂರ್ವಭಾವಿ ತರಬೇತಿ ಶಿಬಿರದಲ್ಲಿ ಉತ್ತಮ ಪ್ರದರ್ಶನ ನೀಡಿ ಆಯ್ಕೆಯಾಗಿರುವ ಕ್ರೀಡಾಪಟುಗಳು ಔರಂಗಾಬಾದಿನಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಗುರುವಾರ ಬೆಂಗಳೂರಿನಿಂದ ಪ್ರಯಾಣ ಬೆಳೆಸಿದ್ದಾರೆ ಎಂದು ಜಿಲ್ಲಾ ಅಥ್ಲೆಟಿಕ್ ತರಬೇತುದಾರ ಪಿ.ಎಲ್. ಶಂಕರಪ್ಪ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement