ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವರ್ಷಕ್ಕೆ 2 ಸಲ ಕ್ಲಸ್ಟರ್ ಮಟ್ಟದಲ್ಲಿ ಕಲಿ-ನಲಿ ಸಮಾಲೋಚನಾ ಸಭೆ

Srinivasa Murthy VN
Updated On : 13 Dec 2013, 12:10 pm

ಟೇಕಲ್: ಪ್ರಾಥಮಿಕ ಶಾಲಾ ಮಕ್ಕಳ ಶೈಕ್ಷಣಿಕ ಮಟ್ಟ ಅಭಿವೃದ್ಧಿ ಪಡಿಸಲು ಕಲಿಕಾ ವಿಷಯ ಕುರಿತ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಕಲಿ-ನಲಿ ಸಮಾಲೋಚನಾ ಸಭೆಗಳನ್ನು ವರ್ಷಕ್ಕೆ ಎರಡು ಸಲ ಹಮ್ಮಿಕೊಳ್ಳಲಾಗುತ್ತಿದೆ ಎಂದು ಬಿಇಒ ಸುಬ್ರಮಣ್ಯ ತಿಳಿಸಿದರು.
ಅವರು ಟೇಕಲ್ ಯಲುವಗುಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆ.ಜಿ.ಹಳ್ಳಿ ಮತ್ತು ಟೇಕಲ್ ಕ್ಲಸ್ಟರ್ ಕಲಿ-ನಲಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಶಿಕ್ಷಣ ಇಲಾಖೆ ಆದೇಶದಂತೆ ಮಕ್ಕಳ ಶೈಕ್ಷಣಿಕ ಸರ್ವತೋಮುಖ ಅಭಿವೃದ್ಧಿಗಾಗಿ ಕಲಿಕೆಯ ಗುಣಮಟ್ಟವನ್ನು ಮಕ್ಕಳಲ್ಲಿ ಹೆಚ್ಚಿಸಲು ಕಲಿ-ನಲಿ ಯೋಜನೆಯಡಿ ಸಮಾಲೋಚನಾ ಸಭೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಸಭೆಗಳಲ್ಲಿ ಭಾಗವಹಿಸುವ ಶಿಕ್ಷಕರು ಕಲಿಕಾ ವಿಷಯಗಳ ಬಗ್ಗೆ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಂಡು ಮಕ್ಕಳಿಗೆ ಭೋಧಿಸಲು ಅನುಕೂಲವಾಗುತ್ತದೆ ಎಂದರು.
ಶಾಲೆಯ ಸಂಪೂರ್ಣ ಮಾಹಿತಿಯನ್ನು ಶಿಕ್ಷಣ ಇಲಾಖೆ ಹೆಜ್ಜೆ ಗುರುತು ಎಂಬ ಶೀರ್ಷಿಕೆಯಲ್ಲಿ ಆಲ್‌ಲೈನ್ ಮಾಡಿದ್ದು, ಇದರಲ್ಲಿ ಪ್ರತಿ ಮಗುವಿನ ಭಾವಚಿತ್ರ ಮತ್ತು ಸಂಪೂರ್ಣ ಮಾಹಿತಿಯನ್ನು ಕ್ಲಸ್ಟರ್ ವ್ಯಾಪ್ತಿಯಲ್ಲಿ ಸಂಗ್ರಹಿಸಲಾಗುತ್ತಿದೆ.
ಶಿಕ್ಷಕರು ಬೋಧನೆಯ ಜೊತೆಗೆ ಮಕ್ಕಳಿಗೆ ಗುಣಮಟ್ಟದ ಬಿಸಿಯೂಟ, ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದು. ಶೌಚಾಲಯ ಬಳಕೆ ಸೇರಿದಂತೆ ಮಕ್ಕಳಲ್ಲಿ ಶಿಸ್ತನ್ನು ಬೆಳೆಸಲು ಮುಂದಾಗಬೇಕು. ಮಕ್ಕಳು ಶಾಲೆಗೆ ಸುರಕ್ಷಿತವಾಗಿ ಬಂದು ಹೋಗುವವರೆಗೂ ಹೆಚ್ಚು ನಿಗಾ ವಹಿಸಬೇಕು ಎಂದ ಅವರು ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಪ್ರಸಕ್ತ ವರ್ಷ ಶೈಕ್ಷಣಿಕ ಪ್ರವಾಸ ಹಮ್ಮಿಕೊಂಡಿದ್ದು ಶಾಲಾ ಮುಖ್ಯ ಶಿಕ್ಷಕರು ತಮ್ಮ ಶಾಲೆಯ ಮಕ್ಕಳ ಭಾವಚಿತ್ರ ಮತ್ತು ಮಾಹಿತಿಯನ್ನು ಕ್ಲಸ್ಟರ್ ವ್ಯಾಪ್ತಿಯಲ್ಲಿ ನೀಡುವಂತೆ ಹೇಳಿದರು.
ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಗ್ರಾಮಸ್ಥರ ಸಹಕಾರದಿಂದ 2 ಲಕ್ಷ ರು. ವೆಚ್ಚದಲ್ಲಿ ದುರಸ್ಥಿ, ಶಾಲಾ ಕಾಂಪೌಂಡ್, ಶೌಚಾಲಯ ನಿರ್ಮಾಣ, ಗಣಪತಿ ದೇವಾಲಯ ನಿರ್ಮಿಸುವ ಮೂಲಕ ಮಕ್ಕಳನ್ನು ಶಾಲೆಗೆ ಆಕರ್ಷಿಸುವ ವಾತಾವರಣ ಉಂಟು ಮಾಡಿದ್ದಾರೆ. ಮುಖ್ಯೋಪಾಧ್ಯಾಯ ವೈ.ಕೆ. ರವಿಂದ್ರ ಹಾಗೂ ಸಹ ಶಿಕ್ಷಕಿ ಗ್ಲಾಡಿಸ್ ತಂಗಂರವರ ಶ್ರಮ ಶ್ಲಾಘನೀಯವಾದದು. ಬೇರೆ ಶಾಲೆಗಳಿಗೆ ಈ ಶಾಲೆ ಮಾದರಿಯಾಗಿದೆ ಎಂದು ಮೆಚ್ಚುಕೆ ಸೂಚಿಸಿದರು. ಸಿ.ಆರ್.ಪಿ ವೀರಭದ್ರಯ್ಯ, ಮಂಜಪ್ಪ, ಸಂಪಂಗಿ, ಶಶಿಧರ್, ಎಸ್‌ಡಿಎಂಸಿ ಅಧ್ಯಕ್ಷ ಶ್ಯಾಮಣ್ಣ, ಕಾರ್ಯದರ್ಶಿ ನಾರಾಯಣಸ್ವಾಮಿ, ಗ್ರಾಮದ ಮುಖಂಡ ಹಾಗೂ ಜಿಪಂ ಮಾಜಿ ಸದಸ್ಯ ಆರ್.ರಾಜಣ್ಣ, ಗೋಪಾಲರಾವ್, ವೈ.ಕೆ. ಶ್ರೀನಿವಾಸ್, ಸಿ. ಶ್ರೀನಿವಾಸ್, ಪ್ರಶಾಂತ್ ಇನ್ನೂ ಮುಂತಾದವರು ಭಾಗವಹಿಸಿದ್ದರು. ಮುಂಜಾನೆ  ವಿದ್ಯಾ ಗಣಪತಿಯ ಪ್ರತಿಷ್ಠಾಪನಾ ಕಾರ್ಯ ನೆರವೇರಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement