ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಾರ್ವಜನಿಕ ಸ್ಥಳದಲ್ಲಿ ಆಸ್ಪತ್ರೆ ತ್ಯಾಜ್ಯ: ನಾಗರಿಕರಿಗೆ ತೊಂದರೆ

Srinivasa Murthy VN
Updated On : 13 Dec 2013, 12:12 pm

ಚಿಂತಾಮಣಿ: ನಗರದ ಖಾಸಗಿ ನರ್ಸಿಂಗ್ ಹೋಮ್ ಮತ್ತು ಹಲವು ಕ್ಲಿನಿಕ್‌ಗಳು ನಗರಸಭೆಯ ನೀತಿ-ನಿಯಮಗಳನ್ನು ಗಾಳಿಗೆ ತೂರಿ ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲಿ ಬಳಕೆಯಾದ ಸಿರಿಂಜ್, ಬ್ಯಾಂಡೇಜ್‌ಗಳನ್ನು ಬಿಸಾಡುತ್ತಿರುವುದರಿಂದ ನಾಗರಿಕರಿಗೆ ತೊಂದರೆಯಾಗುತ್ತಿದ್ದರೂ ನಗರಸಭಾ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದಾಗಿ ನಾಗರಿಕರು ಆರೇಪಿಸಿದ್ದಾರೆ.
ನಗರದ ಎಂ.ಜಿ ರಸ್ತೆಯ ಪಿಸಿಆರ್ ಕಾಂಪ್ಲೆಕ್ಸ್ ವೃತ್ತದ ಬಳಿ ಇರುವ ಹಲವು ಖಾಸಗಿ ನರ್ಸಿಂಗ್ ಹೋಮ್‌ಗಳು ಬಳಕೆಯಾದ ಆಸ್ಪತ್ರೆ ತ್ಯಾಜ್ಯವನ್ನು ರಸ್ತೆಯಲ್ಲಿ ಬಿಸಾಡುತ್ತಿವೆ.
ನಗರಸಭೆ ಹಿಂದೆ ಖಾಸಗಿ ನರ್ಸಿಂಗ್ ಹೋಮ್‌ಗಳಿಗೆ ಕಡ್ಡಾಯವಾಗಿ ತ್ಯಾಜ್ಯವನ್ನು ನಗರಸಭೆ ಇಟ್ಟಿರುವ ಕಂಟೈನರ್‌ಗಳಲ್ಲಿ ಹಾಕಬೇಕೆಂದು ಸೂಚನೆ ನೀಡಿದ್ದರೂ ನಿಯಮ ಉಲ್ಲಂಘಿಸಿದ್ದಾರೆ. ಅಧಿಕಾರಿಗಳು ಸಂಬಂಧಪಟ್ಟ ನರ್ಸಿಂಗ್ ಹೋಮ್‌ಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡದಿರುವುದಕ್ಕೆ ನಾಗರಿಕರು ಅಸಮದಾನ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲಿ ತ್ಯಾಜ್ಯ ವಸ್ತುಗಳನ್ನು ಬಿಸಾಡುವ ನರ್ಸಿಂಗ್ ಹೋಮ್ ಅಥವಾ ಕ್ಲಿನಿಕ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement