ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಆಹಾರ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ

Srinivasa Murthy VN
Updated On : 16 Dec 2013, 12:42 pm

ಕ.ಪ್ರ.ವಾರ್ತೆ ಮಾಲೂರು ಡಿ. 15
ತಾಲೂಕಿನ ಹುಳದೇನಹಳ್ಳಿ ಗ್ರಾಮದ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ವಿತರಿಸದೆ ವಂಚಿಸುತ್ತಿರುವುದನ್ನು ತಡೆಯಬೇಕು ಎಂದು ಆಗ್ರಹಿಸಿ ಗ್ರಾಮದ ಜನತೆ ಪಟ್ಟಣದ ಮಿನಿ ವಿದಾನ ಸೌಧದಲ್ಲಿರುವ ಆಹಾರ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.  
ಈ ಸಂಬಂಧ ತಾಲೂಕು ಆಹಾರ ಶಿರಸ್ತೇದಾರ ರಾಮಚಂದ್ರ ರವರಿಗೆ ಮನವಿ ಪತ್ರ ಅರ್ಪಿಸಿ ಮಾತನಾಡಿದ ಗ್ರಾಮದ ಮುಖಂಡ ಮುನಿರಾಜು ತಾಲೂಕಿನ ಹುಳದೇನಹಳ್ಳಿ ಪಂಚಾಯ್ತಿಯ ವ್ಯಾಪ್ತಿಗೆ ಬರುವ ತಿಮ್ಮನಾಯಕನಹಳ್ಳಿ, ಜಿನಗತಿಮ್ಮನಹಳ್ಳಿ, ದೊಡ್ಡಮಲ್ಲೆ,ಕೊರ್ನಹೊಸಹಳ್ಳಿ ಗ್ರಾಮಸ್ಥರಿಗೆ ಪಡಿತರ ವಿತರಿಸುವ ನ್ಯಾಯಬೆಲೆ ಅಂಗಡಿಯವರು ಅಳತೆಯಲ್ಲಿ ಮೋಸ ಮಾಡಿ ಪಡಿತರ ವಿತರಿಸುತ್ತಿದ್ದಾರೆ.
ಸರ್ಕಾರ ಬಡವರಿಗಾಗಿ ತಂದಿರುವ ಅನ್ನ ಭಾಗ್ಯ ಯೋಜನೆಯಡಿ ತನಗೆ ಕಮೀಷನ್ ಕಡಿಮೆ ಇರುವ ಕಾರಣಕ್ಕಾಗಿ 30 ಕೆ.ಜಿ.ಅಕ್ಕಿ ಬದಲಾಗಿ 25 ಕೆ.ಜಿ. ನೀಡುತ್ತಿದ್ದು,ಉಳಿದ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾನೆ ಎಂದು ಆರೋಪಿಸಿದರು.
ಸ್ಟಾಕ್ ಕಡಿಮೆ ಇದೆ ಎಂದು ಸೀಮೆ ಎಣ್ಣೆ ವಿತರಣೆಯಲ್ಲೂ ಮೋಸ ಮಾಡುತ್ತಿದ್ದು,ಹೆಚ್ಚಿಗೆ ಬೇಕು ಎಂದರೆ ಲೀಟರ್ಗೆ 45 ರು.ಗಳಂತೆ ಮಾರಾಟಮಾಡುತ್ತಾರೆ.ಈ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳು ಗಮನ ಹರಿಸಿ ನ್ಯಾಯ ಬೆಲೆ ಅಂಗಡಿಯಲ್ಲಿ ಆಗುತ್ತಿರುವ ಅನ್ಯಾಯ ನಿಲ್ಲಿಸಿ, ಬಡ ಜನತೆಯ ಅನ್ನ ಭಾಗ್ಯ ಯೋಜನೆಯನ್ನು ಸಮರ್ಪಕವಾಗಿ ಅರ್ಹರಿಗೆ ತಲುಪವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.ಗ್ರಾಮದ ಮುನಿಸ್ವಾಮಿ,ವಿಶ್ವನಾಥ್,ಮುನಿರಾಜು,ಆಂಜಿನಪ್ಪ,ಎ.ಕೆ.ಕಾಲೋನಿ ಶಿವಣ್ಣ,ವೆಂಕಟೇಶ್,ಕುಮಾರ್ ಇದ್ದರು.

ಕ್ಯಾಥೋಲಿಕ್ ಕ್ರೈಸ್ತ್ತರ ಮೆರವಣಿಗೆ
ಕೋಲಾರ:
ವಿಶ್ವಾಸದಿನದ ಅಂಗವಾಗಿ ನಗರದಲ್ಲಿ ಕ್ಯಾಥೋಲಿಕ್ ಕ್ರೈಸ್ತರು ಭಾನುವಾರ ನಗರದಲ್ಲಿ ಮೆರವಣಿಗೆ ನಡೆಸಿದರು. ಸಂತ ಮರಿಯಮ್ಮ ದೇವಾಲಯದಿಂದ ಮೆರವಣಿಗೆ ಪ್ರಾರಂಭವಾಗಿ, ಅಮ್ಮವಾರಿಪೇಟೆ ವೃತ್ತ, ಎಂ.ಜಿ.ರಸ್ತೆ, ಬಂಗಾರಪೇಟೆ ವೃತ್ತ, ನಂತರ ವಿನೋಭ ನಗರದ ಐ.ಟಿ.ಐ ಚರ್ಚ್ನಲ್ಲಿ ವಿಶೇಷ ಕಾರ್ಯಕ್ರಮದೊಂದಿಗೆ ಮೆರವಣಿಗೆ ಅಂತ್ಯಗೊಂಡಿತು. ಸಂತ ಮೇರಿಯಮ್ಮ ದೇವಾಲಯ ಇರುವ ಮಾಲೂರು, ಶಿಡ್ಲಘಟ್ಟ, ಶ್ರೀನಿವಾಸಪುರ, ಚಿಂತಾಮಣಿ, ಐಯಂ ಪೇಟೆ, ಕೋಲಾರ ಹಾಗೂ ಗೌರಿಬಿದನೂರಿನ ಧರ್ಮಗುರುಗಳು ಹಾಗೂ ಭಕ್ತರು ಪಾಲ್ಗೊಂಡಿದ್ದರು. ನೇತೃತ್ವವನ್ನು ಕೋಲಾರದ ಸಂತದ ಮೇರಿಯಮ್ಮ ದೇವಾಲಯದ ಧರ್ಮ ಗುರು ಅಲೈಸ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement