ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೋಟಿ ವೆಚ್ಚದ ನೂತನ ವಕೀಲರ ಭವನ ಉದ್ಘಾಟನೆ

Srinivasa Murthy VN
Updated On : 16 Dec 2013, 12:40 pm

ಚಿಕ್ಕಬಳ್ಳಾಪುರ: ಕೇವಲ ಕಕ್ಷಿದಾರರ ಜೇಬನ್ನು ಮಾತ್ರ ನೋಡಿಕೊಂಡು ಕೆಲಸ ಮಾಡುವ ಬದಲು ನ್ಯಾಯ ದೊರಕಿಸಿಕೊಡಲು ಮೊದಲ ಆದ್ಯತೆ ನೀಡಬೇಕೆಂದು ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ವಕೀಲರಿಗೆ ಸಲಹೆ ನೀಡಿದರು. ನಗರದ ಜಿಲ್ಲಾ ನ್ಯಾಯಾಲಯ ಹಿಂಭಾಗದಲ್ಲಿ ಸುಮಾರು ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ನೂತನ ವಕೀಲರ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವ ವಕೀಲರು ನಿರಂತರ ಅಧ್ಯಯನದ ಮೂಲಕ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಇದರಿಂದ ಕಕ್ಷಿದಾರರಿಗೆ ನಿಜವಾಗಿ ನ್ಯಾಯವನ್ನು ದೊರಕಿಸಿಕೊಡಲು ಸಾಧ್ಯವಾಗುತ್ತದೆ ಎಂದ ಅವರು, ನ್ಯಾಯಾಧೀಶರ ಹಣದಯವನ್ನು ತಟ್ಟುವ ರೀತಿಯಲ್ಲಿ ವಾದವನ್ನು ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡವರೇ ಪ್ರಖ್ಯಾತ ವಕೀಲರಾಗುತ್ತಾರೆ ಎಂದು ತಿಳಿಸಿದರು. ತಾವು ಮುಖ್ಯಮಂತ್ರಿ, ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿದಕ್ಕಿಂತ ವಕೀಲ ವೃತ್ತಿಯೇ ತಮಗೆ ತೃಪ್ತಿಯನ್ನು ತಂದು ಕೊಟ್ಟಿದೆ. ರಾಜಕಾರಣದಲ್ಲಿ ಈ ಮಟ್ಟಿಗೆ ಬೆಳೆಯಲು ವಕೀಲಿತನವೇ ಪ್ರಮುಖ ಕಾರಣವಾಗಿದೆ ಎಂದರು. ಜಿಲ್ಲಾ ಉಸ್ತುವಾರಿ ಮಾಜಿ ಸಚಿವ ಮುಮ್ತಾಜ್ ಅಲಿಖಾನ್ ಮಾತನಾಡಿ, ನ್ಯಾಯವನ್ನು ಎತ್ತಿ ಹಿಡಿಯುವಂತಹ ಕೆಲಸವಾಗಬೇಕು. ಬಡಜನರು ಶೋಷಣೆ, ಅನ್ಯಾಯಕ್ಕೆ ಗುರಿಯಾಗಬಾರದು.ಈ ನಿಟ್ಟಿನಲ್ಲಿ ವಕೀಲರು ಮತ್ತು ನ್ಯಾಯಾಧೀಶರ ಪ್ರಾಮಾಣಿಕ ಕರ್ತವ್ಯ ಪಾಲನೆ ಮಹತ್ತರವಾದುದು ಎಂದರು.  ಶಾಸಕ ವೈ.ಎ.ನಾರಾಯಣಸ್ವಾಮಿ, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬೆಳ್ಳುಂಕೆ, ಕರ್ನಾಟಕ ವಕೀಲರ ಪರಿಷತ್ತಿನ ಸದಸ್ಯ ಸದಾಶಿವರೆಡ್ಡಿ ಮುನಿಯಪ್ಪ ಮಾತನಾಡಿದರು. ನ್ಯಾ. ಅಮರನಾರಾಯಣ, ರಾಜೇಶ್ವರಿ ಹೆಗಡೆ, ನಳಿನಿ, ಅನಿತಾ, ಜಿಲ್ಲಾಧಿಕಾರಿ ವಿಶಾಲ್, ಜಿಲ್ಲಾ ರಕ್ಷಣಾಧಿಕಾರಿ ಎನ್.ಶಿವಪ್ರಸಾದ್, ವಕೀಲರ ಸಂಘದ ಅಧ್ಯಕ್ಷ ಕೆ.ಹೆಚ್.ತಮ್ಮೇಗೌಡ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement