ತಿರುಪತಿ ಎಕ್ಸ್ಪ್ರೆಸ್ ರೇಲು ಮೊದಲಿನ ವೇಳೆಗೇ ಇರಲಿ
ಟೇಕಲ್: ಪಟ್ಟಣದಲ್ಲಿ ಜನವರಿ 1 ರಿಂದ ತಿರುಪತಿ ಪ್ಯಾಸೆಂಜರ್ ರೇಲು ನಿಲುಗಡೆ ಇಲ್ಲವೆಂದು ಟೇಕಲ್ ರೇಲು ನಿಲ್ದಾಣದ ಸೂಚನಾ ಫಲಕದಲ್ಲಿ ಹಾಕಲಾಗಿದ್ದು, ಇದರಿಂದ ಸುತ್ತಮುತ್ತಲಿನ ದಿನನಿತ್ಯ ಓಡಾಡುವ ಜನರಿಗೆ ಬಹಳ ತೊಂದರೆಯಾಗಿದೆ. ಈ ಹಿಂದೆ ಕೇಂದ್ರ ರೈಲ್ವೆ ಸಚಿವರಾಗಿದ್ದ ಕೋಲಾರ ಜಿಲ್ಲೆಯವರಾದ ಸಂಸದ ಕೆ.ಎಚ್. ಮುನಿಯಪ್ಪನವರು ಟೇಕಲ್ನಲ್ಲಿ ಸಾರ್ವಜನಿಕರ ಒತ್ತಾಯದ ಮೇರೆಗೆ ತಿರುಪತಿ ಎಕ್ಸ್ಪ್ರೆಸ್ನ್ನು ಟೇಕಲ್ನಲ್ಲಿ ನಿಲುಗಡೆ ಮಾಡಲಾಯಿತು. ಅದರಂತೆ ಸುತ್ತಮುತ್ತಲ ಜನತೆ ರಾಜಧಾನಿ ಬೆಂಗಳೂರಿಗೆ ತೆರಳಲು ಅನುಕೂಲವಾಗಿತ್ತು. ಬೆಳಿಗ್ಗೆ 5-20ಕ್ಕೆ ಟೇಕಲ್ ಬಿಟ್ಟು 7 ಗಂಟೆಗೆ ಬೆಂಗಳೂರಿಗೆ ತಲುಪುತ್ತಿದ್ದರು ಹಾಗೂ ತಿರುಮಲಕ್ಕೆ ತೆರಳುವವರು ದೇವರ ದರ್ಶನ ಮುಗಿಸಿ ತಿರುಪತಿ ಎಕ್ಸ್ಪ್ರೆಸ್ನಲ್ಲಿಯೇ ಬರುತ್ತಿದ್ದರು ಜನರಿಗೆ ಇದು ತುಂಬಾ ಸಹಾಯಕವಾಗಿತ್ತು.
ಒಂದು ಗಂಟೆ ಮೊದಲೇ: ಆದರೆ ಟೇಕಲ್ ಭಾಗದ ಜನತೆಗೆ ಜುಲೈ 1 ರಿಂದ ಆಘಾತಕಾರಿ ಅಚ್ಚರಿ ವಿಷಯ ಬೆಳಕಿಗೆ ಬಂತು. ಅದು ತಿರುಪತಿ ಎಕ್ಸ್ಪ್ರೆಸನ್ನು ಟೇಕಲ್ನಲ್ಲಿ 5-20 ರ ಬದಲಾಗಿ ಮುಂಜಾನೆ 4-45ಕ್ಕೆ ಸಮಯ ನಿಗಧಿಪಡಿಸಿದ್ದು ಬಹುತೇಕ ದಿನಾಲೂ ಓಡಾಡುವ ಜನಕ್ಕೆ ಒಂದು ಗಂಟೆಯ ಅವಧಿ ಬೇಗ ವಿಸ್ತರಿಸಿರುವುದಕ್ಕೆ ಬಹಳಷ್ಟು ತೊಂದರೆಯಾಗಿದೆ. ಜನವರಿ 1 ರಿಂದ ಮತ್ತೆ ಟೇಕಲ್ನಲ್ಲಿ ನಿಲುಗಡೆ ಮಾಡುವಂತೆ ನಿತ್ಯ ಓಡಾಡುವ ಪ್ರಯಾಣಿಕರ ಮನವಿ.