ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸದಸ್ಯ ಮುರಳಿ ಬಂಧನ ಯಾಕಿಲ್ಲ?

Srinivasa Murthy VN
Updated On : 16 Dec 2013, 12:41 pm

ಕೆಜಿಎಫ್: ಹಳೇ ದ್ವೇಷದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ನಗರಸಭೆ ಸದಸ್ಯ ಕೆ.ಸಿ.ಮುರಳಿ ಅವರ ಮೇಲೆ ಚಾಂಪಿಯನ್ರಿಫ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದೂರು ದಾಖಲಿಸಿಕೊಂಡು 10 ದಿನಗಳು ಕಳೆದರೂ ಪೊಲೀಸರು ಅವರನ್ನು ಇನ್ನೂ ಬಂಧಿಸದೆ ಇರುವುದನ್ನು ನೋಡಿದರೆ ಪೊಲೀಸರ ಮೇಲೆ ಅನುಮಾನ ಬರುತ್ತಿದೆ.
ಸಾಮಾನ್ಯ ಜನರು ಹಲ್ಲೆಗೆ ಮುಂದಾದರೆ ತಕ್ಷಣ ಅವರನ್ನು ಪೊಲೀಸರು ಬಂಧಿಸುತ್ತಾರೆ. ಆದರೆ ಕೊಲೆ ಯತ್ನದ ಪ್ರಕರಣ ದಾಖಲಾದರೂ ನಗರಸಭೆ ಸದಸ್ಯ ಕೆ.ಸಿ.ಮುರಳಿ ಅವರನ್ನು ಪೊಲೀಸರು ಇನ್ನೂ ಏಕೆ ಬಂಧಿಸಿಲ್ಲ ಎಂದು ಜೆಡಿಎಸ್ ಮುಖಂಡ ಮತ್ತು ಮಾಜಿ ಶಾಸಕ ಎಂ.ಭಕ್ತವತ್ಸಲಂ ನಗರದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ವೈಫಲ್ಯತೆಯನ್ನು ತೀವ್ರವಾಗಿ ಖಂಡಿಸಿದರು.
ಮನೆಯಲ್ಲೇ ಕಲಬೆರಕೆ ಸೇಂದಿ: ಅದೇ ರೀತಿ ಕೆ.ಸಿ.ಮುರಳಿ ತಮ್ಮ ಮನೆಯಲ್ಲಿ ಕಲಬೆರಕೆ ಸೇಂದಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದು ಇದರಿಂದ ಆ ಬಡಾವಣೆಯ ಸುತ್ತಮುತ್ತಲಿನ ಯುವಕರು, ಪುರುಷರು ನಿರಂತರವಾಗಿ ಹಲ್ಲೆ, ಗುಂಪುಘರ್ಷಣೆ, ರೌಡಿ ಚಟುವಟಿಕೆ ಮುಂತಾದ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದು ಅವರ ಉತ್ತಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದಲ್ಲದೆ ಕಳಬೆರಕೆ ಸೇಂದಿಯನ್ನು ಸೇವಿಸುವುದರಿಂದ ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತಿದ್ದರೂ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ.
ಈ ಹಿಂದೆಯು ಮುರಳಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಸೇಂದಿಯನ್ನು ಸೇವಿಸಿ ಕೆಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
  ಅಲ್ಲದೆ ಕೊಲೆಯತ್ನ,  ಗುಂಪುಘರ್ಷಣೆ, ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಠಾಣೆಯಲ್ಲಿ ಇವರ ವಿರುದ್ಧ ರೌಡಿ ಪಟ್ಟಿಯನ್ನು ಸಹ ತೆರೆಯಲಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ.
ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿ ನಗರದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿರುವ ನಗರಸಭೆ ಸದಸ್ಯ ಮುರಳಿ ಅವರನ್ನು ಕೂಡಲೇ ಪೊಲೀಸರು ಬಂಧಿಸಿ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು ಮತ್ತು ಅವರು ನಡೆಸುತ್ತಿರುವ ಕಲಬೆರಕೆ ಸೇಂದಿ ಮಾರಾಟದ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಸದಸ್ಯ ನಿಜಾಂಪಾಷ, ಮುರುಗೇಶನ್, ಮಾಜಿ ನಗರಸಭೆ ಅಧ್ಯಕ್ಷ ಪಿ.ದಯಾನಂದ್, ಜೆಡಿಎಸ್ ಪಕ್ಷದ ಮುಖಂಡರಾದ ಗೋಪಾಲ್, ಅಯ್ಯಪ್ಪನ್(ಅಯ್ಯ) ಸೇರಿದಂತೆ ಇತರೆ ಮುಖಂಡರು ಕಾರ್ಯಕರ್ತರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement