ಆಹಾರ ಪದಾರ್ಥ ಕಳ್ಳರ ಪಾಲು: ದೂರು
ಶ್ರೀನಿವಾಸಪುರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರ ವತಿಯಿಂದ ತಾಲ್ಲೂಕು ಅಂಗನವಾಡಿ ಕೇಂದ್ರಗಳಿಗೆ ಸರಬರಾಜಾಗುತ್ತಿರುವ ಪೋಷಕಾಂಶ ಆಹಾರ ಪದಾರ್ಥ್ಥಗಳು ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳಿಗೆ ಸೇರದೇ ಕಳ್ಳಕಾಕರ ಪಾಲಾಗುತ್ತಿದೆ ಎಂದು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿನ ನಾಗರೀಕರು ದೂರಿದ್ದಾರೆ.
ಬಡಪಾಯಿಗಳ ಮಕ್ಕಳಿಗೆ ಬುದ್ಧಿ ಬೆಳವಣಿಗೆಯಾಗುವ ಹಿತದೃಷ್ಟಿಯಿಂದ ಸರ್ಕಾರ ಎಚ್ಚೆತ್ತುಕೊಂಡು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಲಕ್ಷಾಂತರ ರೂಗಳ ವೆಚ್ಚದಲ್ಲಿ ಪೋಷಕಾಂಶಯುಕ್ತ ಆಹಾರ ಪದಾರ್ಥಗಳನ್ನು ನೀಡುವ ಯೋಜನೆಯನ್ನು ಹಾಕಿಕೊಂಡು ತಾಲ್ಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಉತ್ತಮ ರೀತಿಯ ಹಾಗೂ ಗುಣಮಟ್ಟ ಪೋಷಕಾಂಶಯುಕ್ತ ಆಹಾರ ಪದಾರ್ಥಗಳು ನೀಡುತ್ತಿದ್ದರೆ, ಆ ಆಹಾರ ಪದಾರ್ಥಗಳನ್ನು ಅಂಗನವಾಡಿಗಳಲ್ಲಿನ ಮಕ್ಕಳಿಗೆ ನೀಡದೇ ದಿನಸಿ ಅಂಗಡಿಗಳಿಗೆ ಮತ್ತು ಇತರಿಗೆ ಮಾರಾಟ ಮಾಡುತ್ತಿದ್ದರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನಾಧಿಕಾರಿಗಳು ಗೊತ್ತಿದ್ದೂ ಗೊತ್ತಿಲ್ಲದವರಂತೆ ಇದ್ದಾರೆಂದು ಇದಕ್ಕೆ ಈ ಇಲಾಖೆಯವರ ನಿರ್ಲಕ್ಷ್ಯತನ ಹಾಗೂ ಲಂಚಗುಳಿತನವೇ ಕಾರಣ ಎಂದು ನಾಗರಿಕರು ಆರೋಪಿಸಿದ್ದಾರೆ.