ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೆಂಪು ಪಟ್ಟಿ, ಬ್ಯಾರಿಕೇಡ್ ಅಳವಡಿಸದೆ ನಿರ್ಲಕ್ಷ್ಯ

Srinivasa Murthy VN
Updated On : 18 Dec 2013, 12:21 pm

ಚಿಂತಾಮಣಿ: ಸಾರ್ವಜನಿಕರು ಓಡಾಡುವ ಉತ್ತಮ ರಸ್ತೆಯಲ್ಲಿ ಕೇಬಲ್ ಅಳವಡಿಸುವ ಕಾಮಗಾರಿ ನಡೆಯುವಾಗ ರಸ್ತೆಯಲ್ಲಿ ಕೆಂಪು ಪಟ್ಟಿಗಳನ್ನು ಮತ್ತು ಬ್ಯಾರಿಕೇಡ್ ಅಳವಡಿಸದೆ ನಿರ್ಲಕ್ಷ್ಯ ತೋರಿರುವ ಗುತ್ತಿಗೆದಾರನ ಕಾರ್ಯವೈಖರಿ ಬಗ್ಗೆ ನಾಗರೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಿಂದ ಚಿನ್ನಸಂದ್ರ ರಸ್ತೆಯ ಮುಖಾಂತರ ರಿಲಯನ್ಸ್ ಕೇಬಲ್ ಅಳವಡಿಸಲು ಸಂಬಂಧಪಟ್ಟ ನಗರಸಭೆ ಅನುಮೋದನೆ ಪಡೆಯದೆ ಕೇಬಲ್  ಹಾಕಲು ಉತ್ತಮ ರಸ್ತೆಗಳನ್ನು ಗುಂಡಿಗಳನ್ನು ತೆಗೆದು ಹಾಳು ಮಾಡುತ್ತಿರುವುದರಿಂದ ನಾಗರಿಕರಿಗೆ ಸುಗಮವಾಗಿ ಸಂಚರಿಸಲು ಕಿರಿ ಕಿರಿ ಉಂಟಾಗುತ್ತಿದೆಯೆಂದು ಸಾರ್ವಜನಿಕರು ಆರೋಪಿಸಿದ್ದಾರೆ.
ರಿಲಾಯನ್ಸ್ ಇನ್ಪೋ ಕಾಂ ಲಿಮಿಟೆಡ್ ಬೆಂಗಳೂರು ಎಂಬ ಖಾಸಗಿ ಕಂಪನಿ ನಗರದ ಚಿನ್ನಸಂದ್ರ ರಸ್ತೆಯ ಎಡಭಾಗದಲ್ಲಿ 220 ಕಿ.ಮೀ. ಉದ್ದ 12 ಕಡೆ ಟ್ರೆಂಚ್ ಹೊಡೆಯಲು ಹಾಗೂ 1450 ಮೀ. ಓಪನ್ ತೆಗೆಯಲು ಅನುಮತಿಯನ್ನು ನಗರಸಭೆ ಆಯುಕ್ತರಿಗಾಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರದೆ ಉತ್ತಮ ಡಾಂಬರೀಕರಣ ರಸ್ತೆಗಳನ್ನು ಅಗೆದು ಗುಂಡಿ ತೆಗೆದು ಕಾಮಗಾರಿ ನೆಪದಲ್ಲಿ ರಸ್ತೆಗಳನ್ನು ಹಾಳು ಮಾಡುತ್ತಿದ್ದಾರೆಂದು ಜನರು ಅಸಮದಾನ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರಿಂದ ಆಕ್ಷೇಪಣೆಗಳು ಬಂದರೂ  ಕೆಲಸವನ್ನು ಸ್ಥಗಿತಗೊಳಿಸಿ ಸಮಸ್ಯೆ ಇತ್ಯರ್ಥಗೊಳಿಸದ ಖಾಸಗಿ ಕಂಪನಿಯವರು ನಗರದಲ್ಲಿ ಹಲವು ರಾಜಕೀಯ ಮುಖಂಡರ ಬೆಂಗಾವಲಿನಲ್ಲಿ ರಾಜಾರೋಷವಾಗಿ ಕೇಬಲ್ ಅಳವಡಿಸುವ ಕಾಮಗಾರಿ ಕೆಲಸಕ್ಕೆ ಮುಂದಾಗಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.
ಮಾಜಿ ಶಾಸಕ ಡಾ. ಎಂ.ಸಿ.ಸುಧಾಕರ್ ಆಡಳಿತ ಅವಧಿಯಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಾಗರಿಕರ ಹಿತಾಸಕ್ತಿ ಕಾಪಾಡುವ ಸಲುವಾಗಿ ನಗರ ಮತ್ತು ವಿವಿಧ ಬಡಾವಣೆಗಳಲ್ಲಿ ಸೀಮೆಂಟ್ ಹಾಗೂ ಡಾಂಬರೀರಣ ರಸ್ತೆಗಳನ್ನು ನಿರ್ಮಿಸಿ ಕೆಲವೇ ತಿಂಗಳುಗಳಲ್ಲಿ ಖಾಸಗಿ ಕಂಪನಿ ಬಕಾಸುರನಂತೆ ರಸ್ತೆಗಳನ್ನು ಅಗೆದು ಗುಣಿ ತೋಡಿ ಹಾಳು ಮಾಡುತ್ತಿರುವ ಖಾಸಗಿ ಕಂಪನಿ ಹಾಗೂ ಅಧಿಕಾರಿಗಳ ವಿರುದ್ಧ ಮಾಜಿ ಶಾಸಕ ಸುಧಾಕರ್ ಬೆಂಬಲಿತ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement