ಜೈನ್ ಮಂಡಲ್‌ದಿಂದ ನೇತ್ರ ತಪಾಸಣೆ ಶಿಬಿರ
ಕೆಜಿಎಫ್: ಜೈನ್ ಯುವಕ ಮಂಡಲ್ ವತಿಯಿಂದ ಉಚಿತ ನೇತ್ರ ತಪಾಸನೆ ಶಿಬಿರವನ್ನು ನಗರದ ಮಹಾವೀರ್ ಜೈನ್ ಪ್ರಾಥಾಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು. ಶಿಬಿರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಡಾ.ನರ್ಪಥ್‌ಸೋಲಂಕಿ ಹಾಗೂ ಅವರ ವೈದ್ಯರ ತಂಡ ಪಾಲ್ಗೊಂಡಿತ್ತು. ನಗರದ ವಿವಿಧ ಬಡಾವಣೆಯ ನಾಗರಿಕರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ 750 ಮಂದಿ ಶಿಬಿರದಲ್ಲಿ ಭಾಗವಹಿಸಿ ಕಣ್ಣಿನ ಪರೀಕ್ಷೆ ಮಾಡಿಸಿಕೊಂಡರು. ಈ ವೇಳೆ ಡಯಾಲಿಸಸ್ ರೋಗಿಗಳಿಗೆ ಚೆಕ್‌ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೈನ್ ಯುವಕ್ ಮಂಡಲ್ ಮುಖಂಡ ಮಂಗಲ್‌ಚಂದ್ ಬಾನ್ಟ್‌ಯಾ ಅವರು ಸಂಘ ಸ್ಥಾಪನೆಗೊಂಡು ಇಂದಿಗೆ 50 ರ್ವಗಳು ಪೂರೈಸಿದೆ. ಈ ಸ್ವರ್ಣಮಹೋತ್ಸವ ಪ್ರಯುಕ್ತ ಮಂಡಲ್ ವತಿಯಿಂದ ಉಚಿತ ನೇತ್ರ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.
ಈ ಶಿಬಿರ ಒಳಗೊಂಡು ಇದೀಗ 3800 ಆರೋಗ್ಯ ಶಿಬಿರಗಳನ್ನು ನಡೆಸಲಾಗಿದೆ ಮತ್ತು ಅದೇ ರೀತಿ ಜೈನ್ ಯುವಕ್ ಮಂಡಲ್ ವತಿಯಿಂದ ನಗರದಲ್ಲಿ ಹಲವಾರು ವಿವಿಧ ಜನಪರ ಕಾರ್ಯಕ್ರಮಗಳನ್ನು ಮತ್ತು ಸಮಾಜ ಸೇವೆಯನ್ನು ಮಾಡುತ್ತಾ ಬರಲಾಗಿದೆ ಎಂದು ತಿಳಿಸಿದರು. ಯುವಕ್ ಮಂಡಲ್‌ನ ಅಧ್ಯಕ್ಷ ಸುನಿಲ್‌ಕುಮಾರ್, ಮಹೇಂದ್ರಕುಮಾರ್ ಮುನೋತ್, ಹಿರಿಯ ಮುಖಂಡ ಧರ್ಮಚಂದ್ ಧಾರಿವಾಲ್, ಪೇಮರಾಜ್‌ತಲಾಡ ಸೇರಿದಂತೆ ಮುಖಂಡರು ಕಾರ್ಯಕರ್ತರು ಹಾಜರಿದ್ದರು.
ಅಕ್ಷರ ದಾಸೋಹ ಅತ್ಯಂತ ಶ್ರೇಷ್ಠ ಯೋಜನೆ: ನಂಜುಂಡ
ಗೌರಿಬಿದನೂರು: ತಾಲೂಕಿನ ಮಂಚೆನಹಳ್ಳಿ ಹೋಬಳಿ ಮಟ್ಟದ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗೆ ಪುನ:ಶ್ಚೇತನ ಸಭೆಯನ್ನು ಗ್ರಾಮದ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಗಾಂಧಿ ಭವನದಲ್ಲಿ ಏರ್ಪಡಿಸಲಾಗಿತ್ತು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಸ್.ನಂಜುಂಡ ಮಾತನಾಡಿ ಅಕ್ಷರ ದಾಸೋಹ ಅತ್ಯಂತ ಶ್ರೇಷ್ಠ ಯೋಜನೆ ಎಂದರು. ಸಿ.ಆರ್.ಪಿ. ವೆಂಕಟಸ್ವಾಮಿ ಪೌಷ್ಠಿಕ ಆಹಾರವನ್ನು ಮಕ್ಕಳಿಗೆ ನಿಡಲು ಶಿಕ್ಷಕರು ಅಡುಗೆ ಸಿಬ್ಬಂದಿ ಶ್ರಮಿಸಬೇಕು ಎಂದರು. ಐ. ಆರ್.ಟಿ ನರಸಿಂಹಪ್ಪ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆಂಜನೇಯಿಲು, ಜಿಲ್ಲಾ ಖಜಾಂಚಿ ರಾಜಮ್ಮ, ಶಿಕ್ಷಕ ಎಂ.ಆರ್.ನಾಗೇಂದ್ರ ಕುಮಾರ್, ಗಣೇಶ್ ಪ್ರಸನ್ನ, ಮಂಜುನಾಥ್, ನರಸಿಂಹಪ್ಪ ಹಾಗೂ ಹೋಬಳಿ ವ್ಯಾಪ್ತಿಯ ವಿವಿಧ ಶಾಲೆಗಳ ಅಡುಗೆ ಸಿಬ್ಬಂದಿ ಉಪಸ್ಥಿತರಿದ್ದರು.