ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಒತ್ತು ನೀಡಲು ಆಸ್ಕರ್‌ಗೆ ಮನವಿ

Srinivasa Murthy VN
Updated On : 18 Dec 2013, 12:23 pm

ಬಂಗಾರಪೇಟೆ: ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಿಂದ ಬಂಗಾರಪೇಟೆ ಮೂಲಕ ತಮಿಳುನಾಡಿನ ಕೃಷ್ಣಗಿರಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಒತ್ತು ನೀಡಬೇಕೆಂದು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ನೇತೃತ್ವದಲ್ಲಿ ಪಟ್ಟಣದ ಮುಖಂಡರ ನಿಯೋಗ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಸಚಿವ ಆಸ್ಕರ್ ಫರ್ನಾಂಡಿಸ್‌ಗೆ ಮನವಿ ಪತ್ರ ಸಲ್ಲಿಸಿದರು. ಜಿಲ್ಲೆಯ ಪ್ರತಿನಿಧಿಗಳ ನಿಯೋಗ ದೆಹಲಿಗೆ ತೆರಳಿ ಸಚಿವರನ್ನು ಸಚಿವರ ಕಚೇರಿಯಲ್ಲಿ ಭೇಟಿಯಾಗಿ ಕೋಲಾರ  ಹಿಂದುಳಿದ ಜಿಲ್ಲೆಯಾಗಿದ್ದು ಯಾವುದೇ ಕಾರ್ಖಾನೆಗಳಿಲ್ಲ, ಗುಣಮಟ್ಟದ ರಸ್ತೆಗಳೂ ಇಲ್ಲ ಇದರಿಂದ ಅತ್ಯಂತ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಬಾಗೇಪಲ್ಲಿ ಮೂಲಕ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಗೆ ರಾಷ್ಚ್ರೀಯ ಹೆದ್ದಾರಿ ನಿರ್ಮಾಣ ಮಾಡಿದರೆ ಜಿಲ್ಲೆಯಲ್ಲಿ ಹಲವು ಹೊಸ ಕಾರ್ಖಾನೆಗಳು ತಲೆ ಎತ್ತಲಿದೆ. ಇದರಿಂದ ವ್ಯಾಪಾರ ಚಟುವಟಿಕೆಗಳು ವೃದ್ಧಿಯಾಗಲಿದೆ. ಅನುಮೋದನೆಗೆ 300 ಕೋಟಿ ಅನುದಾನ ಮಂಜೂರು ಮಾಡಬೇಕೆಂದು ಕೋರಿದರು. ನಿಯೋಗದ ಮನವಿ ಸ್ಪಂದಿಸಿದ ಸಚಿವ ಫರ್ನಾಂಡಿಸ್ ಈ ಬಗ್ಗೆ ಕೂಡಲೆ ಸರ್ವೆ ಮಾಡಿಸಿ ಅದರ ವರದಿ ಬಂದ ಬಳಿಕ ಮುಂದಿನ ಕಾರ್ಯತಂತ್ರಗಳನ್ನು ಅನುಷ್ಠಾನಕ್ಕೆ ತರುವುದಾಗಿ ಭರವಸೆ ನೀಡಿದರು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಿಳಿಸಿದರು. ನಿಯೋಗದಲ್ಲಿ ರಾಜ್ಯ ಸಚಿವರಾದ ಎಚ್.ಕೆ.ಪಾಟೇಲ್,ಮಹದೇವಪ್ಪ,ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಶಂಷುದ್ದಿನ್‌ಬಾಬು, ನಂಜಪ್ಪ ಮೊದಲಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement