ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ವೃತ್ತಿ ಶಿಕ್ಷಣದ ಹಕ್ಕು ಕಸಿದುಕೊಳ್ಳುವ ಹುನ್ನಾರವಿದು'

Srinivasa Murthy VN
Updated On : 18 Dec 2013, 12:24 pm

ಕೋಲಾರ: ಸಿಇಟಿ ಮೂಲಕ ವೃತ್ತಿ ಶಿಕ್ಷಣಕ್ಕೆ ಹಂಬಲಿಸುವ ಬಡ ವಿದ್ಯಾರ್ಥಿಗಳ ಹಕ್ಕನ್ನು ರಾಜ್ಯ ಸರ್ಕಾರ ಕಸಿದುಕೊಳ್ಳಲು ಹುನ್ನಾರ ನಡೆಸುತ್ತಿದೆ ಎಂದು ಬಿಜೆಪಿ ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಓಂಶಕ್ತಿ ಚಲಪತಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಡವರು,ಕೆಳ ವರ್ಗದವರು ಸಿಇಟಿ ಮೂಲಕ ಇಂಜನಿಯರಿಂಗ್ಮ್‌ತ್ತು ವೈದ್ಯಕೀಯ ಶಿಕ್ಷಣ ಪಡೆಯುವ ಮೂಲಕ ಬದುಕಿಗೊಂದು ದಾರಿ ಕಂಡುಕೊಳ್ಳುತ್ತಿದ್ದು, ಸರ್ಕಾರದ ನೀತಿಯಿಂದಾಗಿ ಇನ್ನು ಮುಂದೆ ಹೆಚ್ಚು ಶುಲ್ಕ ನೀಡಲಾಗದೆ ವೃತ್ತಿ ಶಿಕ್ಷಣದಿಂದ ವಂಚಿತರಾಗುವಂತಾಗಿದೆ ಎಂದು ತಿಳಿಸಿದ್ದಾರೆ.

ಒಂಭತ್ತು ನಿಧಿಗಳ್ಳರ ಬಂಧನ
ಕೋಲಾರ:
ನಿಧಿ ಶೋಧನೆಯಲ್ಲಿ ತೊಡಗಿದ್ದ 9 ಜನರನ್ನು ಕೋಲಾರದ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ರಾತ್ರಿ ಸುಮಾರು 12 ಗಂಟೆ ಸಮಯದಲ್ಲಿ ತಾಲೂಕಿನ ಮಡೇರಹಳ್ಳಿ ಹೊರವಲಯದ ಪುರಾತನ ಶಿವ ಪಾರ್ವತಿ ದೇವಾಲಯದ ಬಳಿ ಆರೋಪಿಗಳು ನಿಧಿಗಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದರು.
ಈ ಬಗ್ಗೆ ಗ್ರಾಮಸ್ಥರು ನೀಡಿದ ದೂರಿನ ಮೇಲೆ ಪೊಲೀಸರು ಕಾರ್ಯಚರಣೆ ನಡೆಸಿ ಬೆಂಗಳೂರು ಮೂಲದ ನಾಲ್ವರು, ಆಂಧ್ರಪ್ರದೇಶದ 5 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಒಂದು ಬೈಕ್ ಹಾಗೂ ಒಂದು ಟಾಟಾ ಏಸ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಮಂಜುನಾಥ್, ಷೇಕ್ ಆಸೀಫ್, ಅಹಮದ್, ವೆಂಕಟೇಶ್, ಅವಿನಾಶ್, ಅಲ್ತಾಫ್ ಪಾಷ, ಕೃಷ್ಣಪ್ಪ, ಮುನಿರತ್ನ, ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಗ್ರಾಮಾಂತರ ಪಿಎಸ್‌ಎ ದೇವೇಂದ್ರಪ್ಪ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement